ಅವಲಕ್ಕಿ ಮೇಲೆ ಕುಳಿತೇ ಅವಲಕ್ಕಿ ಪ್ಯಾಕಿಂಗ್‌: ಪೋಹಾ ಪ್ಯಾಕಿಂಗ್ ವಿಡಿಯೋ ನೋಡಿ ಸಿಡಿಸಿಡಿಯಾದ ವೀಕ್ಷಕರು

Published : Feb 19, 2026, 04:16 PM ISTUpdated : Feb 19, 2026, 04:17 PM IST
unhygienic packing of poha inside factory

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವೊಂದರಲ್ಲಿ, ಕಾರ್ಮಿಕರು ಅವಲಕ್ಕಿಯ ರಾಶಿಯ ಮೇಲೆ ಕುಳಿತುಕೊಂಡು ಅಶುಚಿಯಾಗಿ ಪ್ಯಾಕಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವು ಆಹಾರ ಸುರಕ್ಷತೆ ಮತ್ತು FSSAIನಂತಹ ನಿಯಂತ್ರಕ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.

ಅವಲಕ್ಕಿ ಅಥವಾ ಪೋಹಾಗೆ ತುಂಬಾ ಪುರಾತನವಾದ ಇತಿಹಾಸವಿದೆ. ಶತ ಶತಮಾನಗಳಿಂದಲೂ ಇದನ್ನು ಉಪ ಆಹಾರವಾಗಿ ಬಳಸುತ್ತಾರೆ. ಪೂಜೆ ಭಜನೆ ಕಾರ್ಯಕ್ರಮಗಳಲ್ಲಿ ಪ್ರಸಾದದಂತೆ ವಿತರಿಸಲಾಗುತ್ತದೆ. ಇದು ತಕ್ಷಣ ಶಕ್ತಿ ನೀಡುವ ಆಹಾರವಾಗಿದ್ದರಿಂದ, ರೈತರು ಮತ್ತು ದೂರ ಪ್ರಯಾಣಿಕರು ತಮ್ಮ ಬುತ್ತಿಯಲ್ಲಿ ಇದನ್ನು ಇಟ್ಟುಕೊಳ್ಳುತ್ತಿದ್ದರು. ಇಂದಿಗೂ ಇದನ್ನು ಅನೇಕ ವಿಭಿನ್ನ ರೀತಿಯಲ್ಲಿ ಜನ ಬಳಸುತ್ತಾರೆ. ಹಿಂದೂ ಪುರಾಣಗಳಲ್ಲಿ ಅವಲಕ್ಕಿಗೆ ವಿಶೇಷ ಸ್ಥಾನವಿದೆ. ಶ್ರೀಕೃಷ್ಣನಿಗೆ ಸುದಾಮನು ಪ್ರೀತಿಯಿಂದ ಅವಲಕ್ಕಿಯನ್ನು ಅರ್ಪಿಸಿದ ಕಥೆ ಎಲ್ಲರಿಗೂ ಗೊತ್ತು. ಸುಲಭದಲ್ಲಿ ಮಾಡುವ ಆಹಾರ ಇದಾಗಿರುವುದರಿಂದ ಅನೇಕರು ಇದನ್ನು ವಾರದಲ್ಲಿ ಒಮ್ಮೆಯಾದರು ಬೆಳಗಿನ ಉಪಾಹಾರವಾಗಿ ಬಳಸುತ್ತಾರೆ. ಇಂತಹ ಪೋಹಾ ಅಥವಾ ಅವಲಕ್ಕಿಯನ್ನು ಪ್ಯಾಕಿಂಗ್ ಮಾಡುತ್ತಿರುವ ವೀಡಿಯೋವೋಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅವಲಕ್ಕಿ ಮೇಲೆ ಕುಳಿತೇ ಅವಲಕ್ಕಿ ಪ್ಯಾಕಿಂಗ್:

ಪೋಹಾಪ್ರಿಯರು ಅಥವಾ ಅವಲಕ್ಕಿ ಪ್ರಿಯರು ಈ ವೀಡಿಯೋ ನೋಡಿದರೆ ಹೌಹಾರೋದಂತು ಪಕ್ಕಾ. ಹೌದು ಅವಲಕ್ಕಿ ಅಥವಾ ಪೋಹಾದ ಮೇಲೆಕುಳಿತುಕೊಂಡೆ ಕೆಲ ಕಾರ್ಮಿಕರು ಪೋಹಾವನ್ನು ಪ್ಯಾಕಿಂಗ್ ಮಾಡುತ್ತಿದ್ದಾರೆ. The Nalanda Index(@Nalanda_index) ಎಂಬ ಟ್ವಿಟ್ಟರ್‌ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಗಾಬರಿಯಾಗಿದ್ದಾರೆ. ವೀಡಿಯೋ ಪೋಸ್ಟ್ ಮಾಡಿ ಹೀಗೆ ಬರೆಯಲಾಗಿದೆ. ಪ್ಯಾಕೇಜಿಂಗ್ ಉತ್ತಮ ಗುಣಮಟ್ಟದ ಪೋಹಾ ಎಂಬ ಅನಿಸಿಕೆಯನ್ನು ನೀಡುವ ಮೂಲಕ ಪ್ರೀಮಿಯಂ ಮತ್ತು ಆಕರ್ಷಕವಾಗಿ ಕಾಣಿಸಬಹುದು. ಆದರೆ, ಅದನ್ನು ಪ್ಯಾಕ್ ಮಾಡಲಾಗುತ್ತಿರುವ ರೀತಿ ಅತ್ಯಂತ ಕೊಳಕಾಗಿದೆ. ನಮ್ಮ ಆಹಾರ ಸುರಕ್ಷತಾ ಪ್ರಾಧಿಕಾರ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಎಲ್ಲಿದೆ ಮತ್ತು ಇತರ ನಿಯಂತ್ರಕ ಸಂಸ್ಥೆಗಳು ಎಲ್ಲಿವೆ? ಭಾರತೀಯ ಗ್ರಾಹಕರ ಆರೋಗ್ಯವನ್ನು ನಿರಂತರವಾಗಿ ರಾಜಿ ಮಾಡಿಕೊಳ್ಳಲಾಗುತ್ತಿದೆ ಮತ್ತು ಈ ರೀತಿಯ ನಿರ್ಲಕ್ಷ್ಯವನ್ನು ಇನ್ನು ಮುಂದೆ ನಿರ್ಲಕ್ಷಿಸಬಾರದು ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮೂರು ಗಂಡು ಮಕ್ಕಳನ್ನು ಕೊಂದು 18 ವರ್ಷ ಜೈಲಿಗೆ ಹೋಗಿ ಬಂದವನಿಂದ ಆಶ್ರಯ ನೀಡಿದ ಮಹಿಳೆಯ ಕೊಲೆ

ಆದರೆ ಇದು ಎಲ್ಲಿ ಇರುವ ಅವಲಕ್ಕಿ ತಯಾರಿಕಾ ಘಟಕ ಎಂಬ ಬಗ್ಗೆ ವೀಡಿಯೋದಲ್ಲಿ ಮಾಹಿತಿ ಇಲ್ಲ, ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಯಾವುದೇ ಕೈಗವಸುಗಳು, ಕೂದಲಿನ ಕವಚ ಅಥವಾ ಮಾಸ್ಕ್ ಧರಿಸಿಲ್ಲ, ಪೋಹಾ/ ಅವಲಕ್ಕಿಯನ್ನು ಟ್ರೇಯ ಮೇಲೋ ಟರ್ಪಾಲ್‌ಗಳ ಮೇಲೋ ಇರಿಸಿಲ್ಲ, ಬದಲಿಗೆ ನೇರವಾಗಿ ನೆಲದ ಮೇಲೆ ರಾಶಿ ಹಾಕಲಾಗಿದ್ದು, ಪಕ್ಕದಲ್ಲೇ ತೂಕ ಮಾಡುವ ಯಂತ್ರವಿದೆ. ಒಬ್ಬ ಪ್ಯಾಕೇಟ್‌ಗೆ ಅವಲಕ್ಕಿ ತುಂಬುತ್ತಿದ್ದರೆ ಮತ್ತೊಬ್ಬ ಅದನ್ನು ತೂಗಿ ಸೀಲ್ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದು. ಇಬ್ಬರು ತಿನ್ನುವ ಅವಲಕ್ಕಿ ಮೇಲೆ ಕುಳಿತೇ ಈ ಕೆಲಸ ಮಾಡುತ್ತಿದ್ದಾರೆ. ಅವರ ಸುತ್ತಲೂ ಪ್ಯಾಕೇಜಿಂಗ್ ಆಗಿ ವಿತರಣೆಗೆ ಸಿದ್ಧವಾದ ಹಲವು ಪ್ಯಾಕೇಟ್‌ಗಳನ್ನು ಕಾಣಬಹುದಾಗಿದೆ.

ಇದನ್ನೂ ಓದಿ:  ಹಾರ್ಟ್ ಆಪರೇಷನ್‌ಗೂ ಮುನ್ನ ಕೊನೆಯಾಸೆ ತೀರಿಸಿಕೊಂಡ 96 ವರ್ಷದ ವೃದ್ಧ: ವೀಡಿಯೋ ಭಾರಿ ವೈರಲ್

ಈ ವೀಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದ್ದು, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ ಅಧಿಕಾರಿಗಳ ಮೂಗಿನ ಕೆಳಗೆ ಇದೆಲ್ಲಾ ನಡೆಯುತ್ತದೆ. ಅವರಿಗೆ ತಿಂಗಳು ತಿಂಗಳು ಹಣ ನೀಡಿ ಅವರ ಜೇಬು ಬೆಚ್ಚಗೆ ಮಾಡಲಾಗುತ್ತದೆ. ಹೀಗಾಗಿ ಅವರು ಸುಮ್ಮನೇ ಇದ್ದು ಬಿಡುತ್ತಾರೆ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದೊಂದು ಉಪಯೋಗ ಇಲ್ಲದ ಸಂಸ್ಥೆ ಎಂದು ಇನ್ನೊಬ್ಬರು ಎಫ್‌ಎಸ್‌ಎಸ್ಎಐಗೆ ಬೈದಿದ್ದಾರೆ. ಒಟ್ಟಿನಲ್ಲಿ ಆಹಾರ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಆರೋಗ್ಯ ಕಳೆದುಕೊಳ್ಳುವಂತಾಗುತ್ತಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲವೂ ಫ್ರೀ ಅಂದ್ರೆ ಕೆಲಸ ಮಾಡೋರು ಯಾರು?' ಉಚಿತ ಭಾಗ್ಯದ ವಿರುದ್ಧ ಸುಪ್ರೀಂ ಕೋರ್ಟ್ ಗರಂ!
Vijay-Rashmika Wedding: ರಶ್ಮಿಕಾ ಜೊತೆ ಮದುವೆ ನಂತರ ವಿಜಯ್ ದೇವರಕೊಂಡ ಹಣೆಬರಹ ಬದಲಾಗಲಿದೆಯೇ? ಜ್ಯೋತಿಷಿ ಹೇಳಿದ್ದೇನು?