ತನ್ನ ಮೂರು ಮಕ್ಕಳನ್ನು ಕೊಂದು 18 ವರ್ಷ ಜೈಲಿಗೆ ಹೋಗಿ ಬಂದವನಿಂದ ಆಶ್ರಯ ನೀಡಿದ ಮಹಿಳೆಯ ಕೊಲೆ

Published : Feb 19, 2026, 01:57 PM IST
bhopal man killed woman

ಸಾರಾಂಶ

18 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ವ್ಯಕ್ತಿಯೊಬ್ಬ, ತನಗೆ ಆಶ್ರಯ ನೀಡಿದ್ದ ಮಹಿಳೆಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ತನ್ನ ಮೂವರು ಮಕ್ಕಳನ್ನು ಕೊಂದಿದ್ದ ಈತ, ಭೋಪಾಲ್‌ನಲ್ಲಿ ಈ ಕೃತ್ಯ ಎಸಗಿದ್ದು, ಬಳಿಕ ರೈಲಿಗೆ ತಲೆಕೊಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.

ವ್ಯಕ್ತಿಯಿಂದ ಆಶ್ರಯ ನೀಡಿದ ಮಹಿಳೆಯ ಕೊಲೆ

ಭೋಪಾಲ್: 18 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಗೆ ಬಂದಿದ್ದ ವ್ಯಕ್ತಿಯೋರ್ವ ತನಗೆ ಆಶ್ರಯ ನೀಡಿದ ಮಹಿಳೆಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ. ಆರೋಪಿ ತನ್ನದೇ ಮೂರು ಗಂಡು ಮಕ್ಕಳನ್ನು ಕೊಂದು ಜೈಲು ಸೇರಿದ್ದ. ಆ ಪ್ರಕರಣದಲ್ಲಿ ಆತನಿಗೆ 18 ವರ್ಷ ಜೈಲು ಶಿಕ್ಷೆಯಾಗಿತ್ತು. ಈ ಜೈಲು ಶಿಕ್ಷೆನ್ನು ಮುಗಿಸಿ ಜೈಲಿನಿಂದ ಆತ ಕೆಲ ಸಮಯದ ಹಿಂದಷ್ಟೇ ಬಿಡುಗಡೆಯಾಗಿದ್ದ. ಆದರೆ ಆತನ ರಕ್ತದಾಹ ಮಾತ್ರ ತೀರಿರಲಿಲ್ಲ,

ಆತ ತನಗೆ ಆಶ್ರಯ ನೀಡಿದ 50 ವರ್ಷದ ಮಹಿಳೆ ದುರ್ಗಾ ಎಂಬುವವರನ್ನು ಕೊಂದು ಬಳಿಕ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾನೆ. ಮಧ್ಯಪ್ರದೇಶದ ಭೋಪಾಲ್‌ನ ಗೌತಮ್‌ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರೀತಮ್ ಕುಶ್ವಾಹ್ ಕೊಲೆ ಮಾಡಿದ ವ್ಯಕ್ತಿ. ದುರ್ಗಾ ಅವರಿಗೆ ದೂರದ ಸಂಬಂಧಿಯೂ ಆಗಿದ್ದ ಆರೋಪಿ ಪ್ರೀತಮ್ ಕುಶ್ವಾಹ್ ಜೈಲಿನಿಂದ ಬಿಡುಗಡೆಯಾದ ಬಳಿಕ ಸುಮಾರು ಒಂದು ವರ್ಷದಿಂದ ದುರ್ಗಾ ಅವರ ಮನೆಯಲ್ಲಿ ವಾಸಿಸುತ್ತಿದ್ದ.

ಇದನ್ನೂ ಓದಿ: ಹಾರ್ಟ್ ಆಪರೇಷನ್‌ಗೂ ಮುನ್ನ ಕೊನೆಯಾಸೆ ತೀರಿಸಿಕೊಂಡ 96 ವರ್ಷದ ವೃದ್ಧ: ವೀಡಿಯೋ ಭಾರಿ ವೈರಲ್

ಗೌತಮ್ ನಗರದಲ್ಲಿ ನಿರ್ಮಾಣ ಹಂತದ ದುರ್ಗಾ ಅವರ ಮನೆಯಲ್ಲೇ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪ್ರೀತಮ್ ಕುಶ್ವಾಹ್, ದುರ್ಗಾ ಅವರನ್ನು ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ಅಲ್ಲಿಗೆ ಕರೆದೊಯ್ದಿದ್ದಾನೆ. ನಂತರ ಹರಿತವಾದ ಆಯುಧದಿಂದ ಪದೇ ಪದೇ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಆಕೆಯ ಎದೆ ಮತ್ತು ಹೊಟ್ಟೆಯ ಮೇಲೆ ಹಲವಾರು ಗಾಯಗಳಾಗಿವೆ. ಇಬ್ಬರ ಮಧ್ಯೆ ಉಂಟಾಗಿದ್ದ ವೈಮನಸ್ಸೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಕಳೆದ ಆರು ತಿಂಗಳಿನಿಂದ ದುರ್ಗಾ ಆರೋಪಿ ಪ್ರೀತಮ್‌ಗೆ ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದರು ಇದ ಆತನನ್ನು ಕೆರಳಿಸಿತು ಎಂದು ವರದಿಯಾಗಿದ.

ತನ್ನ ಮೂವರು ಪುತ್ರರನ್ನು ಕೊಡಲಿಯಿಂದ ಕೊಂದಿದ್ದ ಆರೋಪಿ

ಆರೋಪಿ ಪ್ರೀತಮ್ ಕುಶ್ವಾಹ್ ಸಾಮಾನ್ಯ ಅಸ್ಸಾಮಿ ಏನಲ್ಲ, ಪೊಲೀಸ್ ಠಾಣೆಯ ಉಸ್ತುವಾರಿ ಮಹೇಂದ್ರ ಸಿಂಗ್ ಠಾಕೂರ್ ಮಾತನಾಡಿ, ತೆಂಡುಖೇಡಾ ಮೂಲದ ಕುಶ್ವಾಹ ತನ್ನ ಮೂವರು ಗಂಡು ಮಕ್ಕಳನ್ನು ಕೊಡಲಿಯಿಂದ ಕೊಂದಿದ್ದ ಈ ಪ್ರಕರಣದಲ್ಲಿ ಆತ 18 ವರ್ಷಗಳ ಕಾಲ ಜೈಲು ಶಿಕ್ಷೆ ಪೂರ್ಣಗೊಳಿಸಿದ್ದ. ಕಳೆದ ವರ್ಷ ಬಿಡುಗಡೆಯಾದ ನಂತರ ಆತನಿಗೆ ಆತನ ಗ್ರಾಮದ ಜನ ಸಾಮಾಜಿಕವಾಗಿ ಬಹಿಷ್ಕರಿಸಿದ್ದರು. ಇದಾದ ನಂತರ ದುರ್ಗಾಅವರು ಕುಶ್ವಾಹ್‌ಗೆ ಭೋಪಾಲ್‌ನ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು.

ಇದನ್ನೂ ಓದಿ: ಡಿವೋರ್ಸ್ ಬಳಿಕ ಮರು ಮದುವೆಯಾಗಿದ್ದ ಗರ್ಭಿಣಿ ಪತ್ನಿಯನ್ನು ಕೊಂದ ಮಾಜಿ ಪತಿ

ಅವನು ತರಕಾರಿ ಗಾಡಿ ನಡೆಸುವ ಮೂಲಕ ಹಣ ಸಂಪಾದಿಸುತ್ತಿದ್ದ. ಆದರೆ ದುರ್ಗಾ ಅವರನ್ನು ಕೊಲೆ ಮಾಡುವ ಎರಡು ದಿನ ಮೊದಲು ಆರೋಪಿ ಆ ತರಕಾರಿ ಗಾಡಿಯನ್ನು ಮಾರಾಟ ಮಾಡಿದ್ದ. ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದ ಆರೋಪಿ ಬಳಿಕ ಪರಾರಿಯಾಗಿದ್ದ. ನಂತರ ಆತನ ಶವ ನಿಶಾತ್‌ಪುರ ಪ್ರದೇಶದ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ಆತ ಕೃತ್ಯದ ನಂತರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಂಡತಿ ಖಾಸಗಿ ವಿಡಿಯೋ ಸೆರೆ ಹಿಡಿದು ಹರಿಬಿಟ್ಟ ಪತಿ, ಕೋಲಾಹಲ ಸೃಷ್ಟಿಸಿದ ಕ್ಲಿಪ್
ಹಾರ್ಟ್ ಆಪರೇಷನ್‌ಗೂ ಮುನ್ನ ಕೊನೆಯಾಸೆ ತೀರಿಸಿಕೊಂಡ 96 ವರ್ಷದ ವೃದ್ಧ: ವೀಡಿಯೋ ಭಾರಿ ವೈರಲ್