
ನೀವು ಹಲವು ಸೀರಿಯಲ್ ಕಿಲ್ಲರ್‌ಗಳ ನಿಜ ಕತೆಗಳನ್ನು ವೆಬ್ ಸಿರೀಸ್‌ಗಳನ್ನು ಕೇಳಿರಬಹುದು, ನೋಡಿರಬಹುದು. ಬದುಕಿನಲ್ಲಾದ ಕೆಲವು ವಿಚಿತ್ರ ಘಟನೆಗಳಿಂದ ಕೆಲವರು ದೊಡ್ಡವರಾಗುತ್ತಾ ಸೀರಿಯಲ್ ಕಿಲ್ಲರ್‌ಗಳಾಗಿ ಬದಲಾದಂತಹ ಕತೆಗಳಿವೆ. ಈ ಸೀರಿಯಲ್ ಕಿಲ್ಲರ್ ಎಂಬುದು ಒಂದು ವಿಕೃತ ಮನಸ್ಥಿತಿಯ ಕ್ರೌರ್ಯವಾಗಿದೆ. ಮಾನಸಿಕ ತೃಪ್ತಿಗಾಗಿ ಇವರು ಒಂದಾದ ಮೇಲೊಂದರಂತೆ ಜನರನ್ನು ಕೈಗೆ ಸಿಕ್ಕವರನ್ನು ಕಾರಣವಿಲ್ಲದೇ ಹತ್ಯೆ ಮಾಡುತ್ತಾರೆ. ಹೀಗೆ ಕೊಲೆ ಮಾಡಿ ಆ ಕೊಲೆಯಿಂದ ಖುಷಿ ಪಡುತ್ತಾರೆ. ಆದರೆ ಜೀವನ ಏನು ಎಂದು ಅರಿಯುವ ಮೊದಲೇ ಹಲವರನ್ನು ಕೊಲೆ ಮಾಡಿ ಪ್ರಪಂಚದ ಅತ್ಯಂತ ಕಿರಿಯ ಸೀರಿಯಲ್ ಕಿಲ್ಲರ್ ಎಂದು ಕುಖ್ಯಾತಿ ಪಡೆದ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ?
ಹೌದು ಈತ ಅಕ್ಷರ ಬರೆಯಲು ಶುರು ಮಾಡುವ ಮೊದಲೇ ಕೊಲೆ ಮಾಡುವುದಕ್ಕೆ ಶುರುವಾಗಿದ್ದ. ಆಗ ಆತನ ವಯಸ್ಸು ಕೇವಲ 8 ವರ್ಷವಾಗಿತ್ತು. ಹೆಚ್ಚಿನ ಮಕ್ಕಳು ಇನ್ನಷ್ಟೇ ಅಕ್ಷರ ಕಲಿಯಲು ಶುರು ಮಾಡುವ ಒಂದೊಂದು ಅಕ್ಷರಗಳನ್ನು ಸೇರಿಸಿ ಪದ ಮಾಡಿ ಬರೆಯುವ ವಯಸ್ಸು ಅದು. ಅನೇಕರು ಆ ವಯಸ್ಸಿನಲ್ಲಿ ಕತ್ತಲೆಗೆ ಬೆದರುತ್ತಾರೆ. ಆದರೆ ಬಿಹಾರದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ಆ ಬಾಲಕ ಮಾತ್ರ ಕತ್ತಲನ್ನೇ ಹೆದರಿಸುವವನಾಗಿ ಬದಲಾದ. ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಸರಣಿ ಕೊಲೆಗಾರ ಎಂಬ ಕುಖ್ಯಾತಿಗೆ ಪಾತ್ರನಾದ ಹಾಗಿದ್ದಾರೆ ಆತನ ಮೊದಲ ಹತ್ಯೆಗೆ ಬಲಿಯಾಗಿದ್ದು ಯಾರು ಮುಂದೆ ಆತ ಏನಾದ ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ.
ಆತನ ಹೆಸರು ಅಮರ್ಜಿತ್, ಈತ ಜನಿಸಿದ್ದು, 1998ರಲ್ಲಿ ಬಿಹಾರದ ಮುಸಹಾರಿ ಎಂಬ ಸಣ್ಣ ಗ್ರಾಮದಲ್ಲಿ ಈತನ ಪಾತಕ ಕೃತ್ಯಕ್ಕೆ ಮೊದಲು ಬಲಿಯಾಗಿದ್ದು, ಆತನ ಮೊದಲ ಸೋದರ ಸಂಬಂಧಿ 8 ತಿಂಗಳ ಹೆಣ್ಣು ಮಗು. ಆತ, ಆ ಮಗುವನ್ನು ಮೊದಲಿಗೆ ಆಕೆ ಅಳಲು ಶುರುಮಾಡುವವರೆಗೂ ಚಿವುಟಿದ್ದ ನಂತರ ಆಕೆಯ ಜೋರಾಗಿ ಅಳಲು ಶುರು ಮಾಡುತ್ತಿದ್ದಂತೆ ಉಸಿರುಕಟ್ಟಿಸಿ ಕೊಂದಿದ್ದ. ಈ ವಿಚಾರ ಆತನ ಕುಟುಂಬದವರಿಗೆ ಗೊತ್ತಾದಾಗ ಅವರು ಆತನನ್ನು ಸರಿಯಾಗಿ ಶಿಕ್ಷಿಸಿದರು. ಆದರೆ ಪೊಲೀಸರಿಗೆ ತಿಳಿಸದೇ ಮೌನವಾದರು. ಅದೇ ನೋಡಿ ಅವು ಮಾಡಿದ ತಪ್ಪು. ತಿಂಗಳ ನಂತರ ಆತ ಮತ್ತೆ ಕೊಲೆ ಮಾಡಿದ. ಈ ಬಾರಿ ಆತನ ಕೃತ್ಯಕ್ಕೆ ಬಲಿಪಶುವಾಗಿದ್ದು, ಆತನದ್ದೇ ಸ್ವಂತ ತಂಗಿ 8 ತಿಂಗಳ ಮತ್ತೊಂದು ಹೆಣ್ಣು ಮಗು.
ಸ್ವಂತ ತಂಗಿಯ ಉಸಿರನ್ನು ನಿಲ್ಲಿಸಿದ ಅಮರ್ಜಿತ್: ವಿಚಾರ ಮುಚ್ಚಿಟ್ಟ ಪೋಷಕರು
ಈ ಬಾರಿ ಆತ ಪೋಷಕರು ನಿದ್ದೆ ಮಾಡುವವರೆಗೆ ಕಾದು ಕುಳಿತಿದ್ದ. ಅವರು ನಿದ್ದೆಗೆ ಜಾರುತ್ತಿದ್ದಂತೆ ಆಕೆಯನ್ನು ತೊಟ್ಟಿಲಿನಿಂದ ಹೊರಗೆ ತೆಗೆದ ಆತ ಆಕೆಯನ್ನೂ ಉಸಿರುಕಟ್ಟಿಸಿ ಕೊಲೆ ಮಾಡಿದ್ದ. ನಂತರ ಮತ್ತೆ ತೊಟ್ಟಿಲಿನಲ್ಲಿ ಆಕೆಯ ದೇಹವನ್ನು ಮಲಗಿಸಿದ ಆತ ನಂತರ ಏನೂ ನಡೆದೇ ಇಲ್ಲವೆಂಬಂತೆ ಆಟಿಕೆಗಳಲ್ಲಿ ಆಟವಾಡಲು ಶುರು ಮಾಡಿದ್ದ. ಈ ಬಾರಿ ಪೋಷಕರು ಮಾಡಿದ್ದು ಅದೇ ತಪ್ಪು, ಮತ್ತೆ ತಮ್ಮ ಮಗ ಮಾಡಿದ ತಪ್ಪನ್ನು ಮುಚ್ಚಿಟ್ಟರು ಪೋಷಕರು. ಆದರೆ ಆತ ಮಾತ್ರ ಸುಮ್ಮನೇ ಕುಳಿತಿರಲಿಲ್ಲ. 2007ರಲ್ಲಿ ಆತನ ನೆರೆಮನೆಯ ಮಹಿಳೆ ಚುಂಚುಂ ದೇವಿ ಅವರು ತಮ್ಮ ಪುಟ್ಟ ಹೆಣ್ಣು ಮಗು ಖುಷ್ಬುವನ್ನು ನಿದ್ದೆ ಮಾಡಿಸಿ ಹೊರಗೆ ಹೋಗಿದ್ದರು. ಆದರೆ ಆಕೆ ಮರಳಿ ಬಂದಾಗ ಮಗು ಅಲ್ಲಿರಲಿಲ್ಲ.
ನೆರೆಮನೆಯ ಮಗುವೂ ಅಮರ್ಜಿತ್ ಪಾತಕ ಕೃತ್ಯಕ್ಕೆ ಬಲಿ
ವಿಚಾರಿಸಿದಾಗ ಅಮರ್ಜಿತ್ ಮಗುವಿನ ಜೊತೆ ಹೋಗುವುದನ್ನು ನೋಡಿದ್ದಾಗಿ ನೋಡಿದವರು ಹೇಳಿದ್ದರು. ಈ ಬಗ್ಗೆ ಪೊಲೀಸರು ಅಮರ್‌ಜಿತ್‌ನನ್ನು ಕೇಳಿದಾಗ ಆತ ನಾನು ನಿಮಗೆ ಆಕೆಯನ್ನು ತೋರಿಸುತ್ತೇನೆ ಎಂದು ಹೇಳಿದ್ದ. ಅಲ್ಲದೇ ಆತ ಪೊಲೀಸರನ್ನು ಜಮೀನೊಂದರ ಬಳಿ ಕರೆದೊಯ್ದ, ಅಲ್ಲಿ ಮಗು ಖುಷ್ಬುವಿನ ಪುಟ್ಟ ದೇಹ ಮಣ್ಣಿನ ಕೆಳಗೆ ಹೂಳಲ್ಪಟ್ಟಿತ್ತು. ನಂತರ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದಾಗ ಆತ ಮಾತನಾಡುವ ಮೊದಲು ಬಿಸ್ಕೆಟ್ ಕೇಳಿದ್ನಂತೆ. ಇದಾದ ನಂತರ ಆತ ತಾನು ಇದುವರೆಗೆ ಮಾಡಿದ ಮೂರು ಕೊಲೆಗಳ ಬಗ್ಗೆ ಪೊಲೀಸರ ಬಳಿ ಬಾಯ್ಬಿಟ್ಟಿದ್ದು, ಆತನಲ್ಲಿ ತಾನು ಮಾಡಿದ ಕೆಲಸದ ಬಗ್ಗೆ ಯಾವುದೇ ಪಶ್ಚಾತಾಪ ಇರಲಿಲ್ಲ.
ಕೃತ್ಯದ ಬಗ್ಗೆ ಯಾವುದೇ ವಿಷಾದ ಹೊಂದಿರದ ಅಮರ್ಜಿತ್
ನಂತರ ಈತನ ಮನಸ್ಥಿತಿಯನ್ನು ಅಧ್ಯಯನ ಮಾಡಿದ ಮಾನಸಿಕ ತಜ್ಞರು ಆತನಲ್ಲಿ ಯಾವುದೇ ವಿಷಾದ ಇರಲಿಲ್ಲ, ಜೊತೆಗೆ ಆತನಿಗೆ ಯಾವುದೇ ಭಯವೂ ಇರಲಿಲ್ಲ, ಅಲ್ಲದೇ ಯಾವುದು ಸರಿ ಯಾವುದು ತಪ್ಪು ಎಂಬ ಅರ್ಥ ಮಾಡಿಕೊಳ್ಳುವಿಕೆಯೂ ಇರಲಿಲ್ಲ ಎಂದು ಹೇಳಿದ್ದರು. ಆತನ ಬಂಧನ ಮಾಡಿದಾಗ ಆತನಿಗೆ ಕೇವಲ 8 ವರ್ಷ ವಯಸ್ಸಾಗಿತ್ತು. ಹೀಗಾಗಿ ಆತನನ್ನು ಪೊಲೀಸರು ಆತನಿಗೆ 18 ವರ್ಷ ತುಂಬುವವರೆಗೆ ಬಾಲಾಪರಾಧ ಗೃಹದಲ್ಲಿ ಇರಿಸಿದ್ದರು. 2016ರಲ್ಲಿ ಆತನನ್ನು ಬಾಲಪರಾಧ ಗೃಹದಿಂದ ಬಿಡುಗಡೆ ಮಾಡಲಾಯ್ತು. ಆದರೆ ನಂತರ ಆತ ಎಲ್ಲಿಗೆ ಹೋದ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ ಎನ್ನುತ್ತವೆ ವರದಿಗಳು. ಕೆಲವರು ಹೇಳುತ್ತಾರೆ ಆತ ಹೊಸ ಹೆಸರಿನೊಂದಿಗೆ ಬದುಕುತ್ತಿದ್ದಾನೆ ಎಂದು ಇನ್ನು ಕೆಲವರ ಪ್ರಕಾರ ಆತ ಸಂಪೂರ್ಣವಾಗಿ ನಾಪತ್ತೆಯಾಗಿದ್ದಾನೆ ಎಂದು. ಆದರೆ ಇತಿಹಾಸದಲ್ಲಿ ದಾಖಲಾಗಿರುವ ವಿಚಾರ ಏನೆಂದರೆ ಆತ ತನ್ನ ಹೆಸರನ್ನು ಬರೆಯುವುದಕ್ಕೆ ಕಲಿಯುವ ಮೊದಲೇ ಬೇರೆಯವರ ಉಸಿರು ನಿಲ್ಲಿಸಲು ಕಲಿತಿದ್ದ ಎಂಬುದು. ಈ ವಿಚಾರದ ಬಗ್ಗೆ ನಿಮಗೇನನಿಸುತ್ತದೆ ಕಾಮೆಂಟ್ ಮಾಡಿ.
ಇದನ್ನೂ ಓದಿ: ದೀಪಾವಳಿಗೆ ಮನೆ ಕ್ಲೀನ್ ಮಾಡ್ತಿದ್ದ ಅಮ್ಮನಿಗೆ ಸಿಕ್ತು ಬಂಡಲ್‌ಗಟ್ಟಲೇ 2 ಸಾವಿರ ರೂ. ನೋಟು: ಮುಂದೇನು?
ಇದನ್ನೂ ಓದಿ: ನಟನ ಕಣ್ಣಲ್ಲಿ ಕಣ್ಣಿಟ್ಟು ನಂಗೆ ಪತಿ ಸಿಕ್ಕರೂ ಎಂದ ರಾಖಿ ಸಾವಂತ್: ಕಕ್ಕಾಬಿಕ್ಕಿಯಾದ ನಟ
ಇದನ್ನೂ ಓದಿ: ನಟಿ ಮದ್ವೆಯಲ್ಲಿ ಮಂಗಳಸೂತ್ರವೇ ಮಿಸ್, ಇಲ್ಲೂ ಬೇಕಾ ನಾಟಕವೆಂದ ನೆಟ್ಟಿಗರು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ