ಈ ವರ್ಷ ಐಟಿ ವಲಯದಲ್ಲಿ 50 ಸಾವಿರ ಉದ್ಯೋಗ ಕಟ್‌!

Kannadaprabha News   | Kannada Prabha
Published : Oct 12, 2025, 05:13 AM IST
indian it sector hiring declines

ಸಾರಾಂಶ

ವಿದ್ಯಾವಂತ ಯುವಸಮೂಹಕ್ಕೆ ಅತಿ ಹೆಚ್ಚಿನ ಉದ್ಯೋಗ ಕಲ್ಪಿಸಿರುವ ವಲಯಗಳ ಪೈಕಿ ಒಂದಾದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಈ ವರ್ಷ ಭಾರೀ ಉದ್ಯೋಗ ಕಡಿತ ಸದ್ದಿಲ್ಲದೇ ನಡೆದಿದೆ. ಒಂದು ಅಂದಾಜಿನ ಪ್ರಕಾರ ಈ ವರ್ಷ ಐಟಿ ವಲಯದಲ್ಲಿ ಒಟ್ಟು ಕಡಿತವಾಗುವ ಉದ್ಯೋಗ ಸಂಖ್ಯೆ 50 ಸಾವಿರ ದಾಟಬಹುದು ಎಂದು ವರದಿಗಳು ತಿಳಿಸಿವೆ.

ನವದೆಹಲಿ: ವಿದ್ಯಾವಂತ ಯುವಸಮೂಹಕ್ಕೆ ಅತಿ ಹೆಚ್ಚಿನ ಉದ್ಯೋಗ ಕಲ್ಪಿಸಿರುವ ವಲಯಗಳ ಪೈಕಿ ಒಂದಾದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಈ ವರ್ಷ ಭಾರೀ ಉದ್ಯೋಗ ಕಡಿತ ಸದ್ದಿಲ್ಲದೇ ನಡೆದಿದೆ. ಒಂದು ಅಂದಾಜಿನ ಪ್ರಕಾರ ಈ ವರ್ಷ ಐಟಿ ವಲಯದಲ್ಲಿ ಒಟ್ಟು ಕಡಿತವಾಗುವ ಉದ್ಯೋಗ ಸಂಖ್ಯೆ 50 ಸಾವಿರ ದಾಟಬಹುದು ಎಂದು ವರದಿಗಳು ತಿಳಿಸಿವೆ.

ಐಟಿ ವಲಯದ ಬಹತೇಕ ಕಂಪನಿಗಳು ದಿನೇ ದಿನೇ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಜ್ಞಾನ ಅಳವಡಿಕೆ ಮೂಲಕ ಭಾರೀ ಪ್ರಮಾಣದ ಉದ್ಯೋಗ ಕಡಿತ ಮಾಡಿವೆ. ಇನ್ನೊಂದೆಡೆ ವೆಚ್ಚ ಕಡಿತದ ಕ್ರಮಗಳು ಕೂಡಾ ಕಂಪನಿಗಳು ಸಿಬ್ಬಂದಿ ಸಂಖ್ಯೆ ಕಡಿತ ಮಾಡಲು ಕಾರಣವಾಗಿದೆ ಎನ್ನಲಾಗಿದೆ.

2023-2004ರ ನಡುವೆ ಐಟಿ ವಲಯದಲ್ಲಿ ಉದ್ಯೋಗ ಕಡೆದುಕೊಂಡವರ ಪ್ರಮಾಣ 25 ಸಾವಿರದಷ್ಟಿತ್ತು. ಈ ವರ್ಷ ಅದು ದುಪ್ಪಟ್ಟಾಗಲಿದೆ. ಈ ವರ್ಷ ಜುಲೈವರೆಗೂ ವಿವಿಧ ಕಂಪನಿಗಳು ಘೋಷಿಸಿರುವ ಉದ್ಯೋಗ ಕಡಿತದ ಸಂಖ್ಯೆ ಅಂದಾಜು 25 ಸಾವಿರದಷ್ಟಿದೆ. ಅದು ವರ್ಷಾಂತ್ಯದ ವೇಳೆಗೆ 50 ಸಾವಿರ ದಾಟಬಹುದು ಎಂಬ ಲೆಕ್ಕಾಚಾರವಿದೆ.

ಎಲ್ಲಿ ಎಷ್ಟು?:

ಭಾರತದ ಅತಿದೊಡ್ಡ ಐಟಿ ಕಂಪನಿಯಾದ ಟಿಸಿಎಸ್‌ ಈ ವರ್ಷ ಜಾಗತಿಕವಾಗಿ 12,000, ಇನ್ನು ವಿಪ್ರೋ 24,516, ಆ್ಸಕ್ಸೆಂಚರ್‌ 11,000, ಸೇಲ್ಸ್‌ ಫೋರ್ಸ್‌ 4,000, ಮೈಕ್ರೋಸಾಫ್ಟ್‌ 4,000 ಹುದ್ದೆ ಕಡಿತದ ಘೋಷಣೆ ಮಾಡಿವೆ. ಇನ್ನು ಸಣ್ಣಪುಟ್ಟ ಇತರೆ ಕಂಪನಿಗಳ ಲೆಕ್ಕವನ್ನೂ ಹಿಡಿದರೆ ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ.

ದಿಢೀರ್‌ ಶಾಕ್‌:

‘ಕೆಲವು ಕಂಪನಿಗಳು ಸಿಬ್ಬಂದಿಗೆ ಇವತ್ತಿಗೆ ನಿಮ್ಮ ಸೇವೆ ಮುಗಿಯಿತು ಎನ್ನುವ ಮಟ್ಟಿಗೆ ದಿಢೀರ್‌ ವಜಾ ಸುದ್ದಿಯನ್ನು ಪ್ರಕಟಿಸುತ್ತಿವೆ. ಕೆಲವು ಕಂಪನಿಗಳು ಉದ್ಯೋಗಿಗಳಿಗೆ 3 ತಿಂಗಳ ವೇತನ ಕೊಟ್ಟು ವಜಾ ಮಾಡುತ್ತಿವೆ. ಕೆಲವು ಕಂಪನಿಗಳು ಮಾತ್ರ 3 ತಿಂಗಳ ಮೇಲೆ ವಜಾದ ಸುಳಿವು ನೀಡಿ ಬಳಿಕ ವಜಾ ಮಾಡುತ್ತಿವೆ’ ಎಂದು ಐಟಿ ಸಂಘಟನೆಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..