ಬ್ಯಾಂಕ್‌ ಲಾಕರ್‌ನಲ್ಲಿದ್ದ ಲಕ್ಷಾಂತರ ರೂ. ಹಣವನ್ನು ನಾಶ ಮಾಡಿದ ಗೆದ್ದಲು: ರೊಚ್ಚಿಗೆದ್ದ ಗ್ರಾಹಕರು

By BK AshwinFirst Published Feb 13, 2023, 6:14 PM IST
Highlights

ಈ ಸುದ್ದಿ ತಿಳಿದ ಹಲವು ಖಾತೆದಾರರು ಶುಕ್ರವಾರ ಬ್ಯಾಂಕ್ ಶಾಖಾ ಕಚೇರಿಗೆ ಆಗಮಿಸಿ, ನಾಶವಾದ ಹಣಕ್ಕಾಗಿ ಗದ್ದಲ ಸೃಷ್ಟಿಸಿದ್ದಾರೆ. ಅವರ ಸ್ವತ್ತುಗಳ ಭದ್ರತೆಯ ಬಗ್ಗೆ ಶಾಖಾ ವ್ಯವಸ್ಥಾಪಕರನ್ನು ವಿಚಾರಣೆ ನಡೆಸಲಾಯಿತು.

ಉದಯ್‌ಪುರ (ಫೆಬ್ರವರಿ 13, 2023): ಗೆದ್ದಲಿನ ಕಾಟ ಹಲವೆಡೆ ವಿಪರೀತವಾಗಿರುತ್ತದೆ. ಇದನ್ನು ನೀವೂ ಸಹ ಅನುಭವಿಸಿರಬಹುದು ಅಥವಾ ಈ ಕುರಿತು ಇತರರ ಗೋಳನ್ನು ಕೇಳಿರಬಹುದು. ಗೆದ್ದಲು ನಿಮ್ಮ ಮನೆ ಅಥವಾ ಕಟ್ಟಡದ ರಚನಾತ್ಮಕ ಸಮಗ್ರತೆಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಸೋರುವ ನಲ್ಲಿಗಳು, ಬಿರುಕು ಬಿಟ್ಟ ಛಾವಣಿಯ ಟೈಲ್ಸ್, ಮುರಿದ ಬಾಗಿಲುಗಳು ಮತ್ತು ಕಿಟಕಿಗಳು, ರಟ್ಟಿನ, ಮತ್ತು ಮರದ ಪೀಠೋಪಕರಣಗಳು ಸೇರಿದಂತೆ ಇತರ ಸೆಲ್ಯುಲೋಸ್ ಉತ್ಪನ್ನಗಳು ಸಹ ಗೆದ್ದಲುಗಳನ್ನು ಆಕರ್ಷಿಸುತ್ತದೆ. ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಈ ಗೆದ್ದಲುಗಳು ನಿಮ್ಮ ಆಸ್ತಿಯನ್ನು ನಾಶಮಾಡಬಹುದು, ಅಥವಾ ಭಾರೀ ನಷ್ಟವನ್ನು ಉಂಟುಮಾಡಬಹುದು. ಇದ್ಯಾಕಪ್ಪಾ ಈ ಗೆದ್ದಲು ಬಗ್ಗೆ ಬರೀತಿದ್ದೀವಿ ಅನ್ಕೊಂಡ್ರಾ..? ಗೆದ್ದಲುಗಳ ಕಾಟಕ್ಕೆ ಬ್ಯಾಂಕ್‌ ಲಾಕರ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ನೋಟುಗಳು ನಾಶವಾಗಿದೆ. 

ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) (ಪಿಎನ್‌ಬಿ) (PNB) ಗ್ರಾಹಕರು ಬ್ಯಾಂಕ್‌ನಲ್ಲಿ (Bank) ಇಟ್ಟಿದ್ದ ತಮ್ಮ ನೋಟುಗಳನ್ನು (Notes) ಗೆದ್ದಲು (Termites) ತಿನ್ನುವುದನ್ನು ಕಂಡು ಭಯಾನಕ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ರಾಜಸ್ಥಾನದ ಉದಯಪುರದ (Udaipur) ಕಾಲಾಜಿ ಗೋರಾಜಿಯಲ್ಲಿ ಈ ಘಟನೆ ನಡೆದಿದೆ. ಕಾಲಾಜಿ ಗೋರಾಜಿಯ ಪಿಎನ್‌ಬಿ ಬ್ಯಾಂಕ್‌ನ ಗ್ರಾಹಕರು ಗೆದ್ದಲಿನ ಹಾವಳಿಯಿಂದಾಗಿ ಬ್ಯಾಂಕ್ ಲಾಕರ್‌ನಲ್ಲಿ ಇರಿಸಲಾಗಿದ್ದ 2.15 ಲಕ್ಷ ರೂಪಾಯಿಗಳವರೆಗೆ ಕಳೆದುಕೊಂಡ ನಂತರ ತೀವ್ರ ಆತಂಕಕ್ಕೀಡಾಗಿದ್ದಾರೆ.

Latest Videos

ಇದನ್ನು ಓದಿ: ಭೂಕಂಪ ಸಂತ್ರಸ್ಥರಿಗೆ ತನ್ನ ಉಳಿತಾಯ ಹಣ ದಾನ ಮಾಡಿದ 9 ವರ್ಷದ ಬಾಲಕ..!

ವರದಿಯ ಪ್ರಕಾರ, ಬ್ಯಾಂಕ್‌ನಲ್ಲಿ ಖಾತೆದಾರರಾಗಿದ್ದ ಸುನೀತಾ ಮೆಹ್ತಾ ಅವರು ತಮ್ಮ ಕರೆನ್ಸಿ ನೋಟುಗಳನ್ನು ಲಾಕರ್ ಸಂಖ್ಯೆ 265 ರಲ್ಲಿ ಇಟ್ಟುಕೊಂಡಿದ್ದರು. ಆದರೆ, ದುರದೃಷ್ಟವಶಾತ್ ಗೆದ್ದಲು ಕಾಟದಿಂದ ತಮ್ಮ ಹಣವನ್ನೆಲ್ಲ ಕಳೆದುಕೊಂಡಿದ್ದಾರೆ. ತನಗೆ ಕಾದಿರುವ ಭಯಾನಕತೆಯ ಅರಿವಿಲ್ಲದೆ, ಮನೆಗೆ ತಲುಪಿದ ಸುನೀತಾ ನೋಟು ಬಂಡಲ್ ಅನ್ನು ತೆರೆದಾಗ, ಕಡಿಮೆ ಮುಖಬೆಲೆಯ ಒಟ್ಟು 15,000 ರೂ.ಗಳ ನಗದು ಸಂಪೂರ್ಣವಾಗಿ ಹಾಳಾಗಿರುವುದನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೆ, 500 ರೂ.ಗಳ ನಾಲ್ಕು ಕಟ್ಟುಗಳು ಗೆದ್ದಲುಗಳಿಂದ ನಾಶವಾಗಿವೆ ಎಂದು ವರದಿಯಾಗಿದೆ. 

ಈ ದುರ್ಘಟನೆಯಿಂದ ಸುನೀತಾ ಬೆಚ್ಚಿಬಿದ್ದಿದ್ದು, ಕೂಡಲೇ ಬ್ಯಾಂಕ್ ಮ್ಯಾನೇಜರ್‌ಗೆ ದೂರು ನೀಡಿ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಆಕೆಯ ಬೇಡಿಕೆಗೆ ಸಮ್ಮತಿಸಿದ ಬ್ಯಾಂಕ್, ಗೆದ್ದಲಿನ ಹಾವಳಿಯಿಂದ ಕಳೆದುಕೊಂಡಿದ್ದ 15,000 ರೂ. ನಗದು ಹಣವನ್ನು ಗ್ರಾಹಕರಿಗೆ ಮರುಪಾವತಿ ಮಾಡಿದೆ.

ಬ್ಯಾಂಕ್‌ ಲೋನ್‌ನಿಂದ ಖರೀದಿಸಿದ ಸ್ವಂತ ಮನೆಗೆ ಟುಲೆಟ್‌ ಬೋರ್ಡ್‌ ಹಾಕಿದ ನಟಿ ಅದಿತಿ ಪ್ರಭುದೇವ; ಕಾರಣವೇನು?

ವರದಿಗಳ ಪ್ರಕಾರ, ಮೇ 2022 ರಲ್ಲಿ ಲಾಕರ್‌ನಲ್ಲಿ ಈ ಹಣ ಇಡಲಾಗಿತ್ತು. ಬಳಿಕ, ಈ ಗುರುವಾರ, ಫೆಬ್ರವರಿ 9 ರಂದು ತೆರೆಯುವವರೆಗೂ ನೋಟುಗಳನ್ನು ಅಲ್ಲೇ ಇರಿಸಲಾಗಿತ್ತು. ಬಳಿಕ, ಕರೆನ್ಸಿ ನೋಟುಗಳ ಸ್ಥಿತಿಯನ್ನು ನೋಡಿ ಬ್ಯಾಂಕ್ ಅಧಿಕಾರಿಗಳು ದಿಗ್ಭ್ರಮೆಗೊಂಡಿದ್ದಾರೆ. ಏಕೆಂದರೆ, ಎಲ್ಲಾ ನೋಟುಗಳು ಚೂರುಚೂರಾಗಿದ್ದು ಲಾಕರ್‌ನಲ್ಲಿ ಬಳಕೆಗೆ ಯೋಗ್ಯವಾದ ಒಂದು ನೋಟು ಕೂಡ ಇರಲಿಲ್ಲ. ಒಬ್ಬರದ್ದಲ್ಲದೆ ಎಲ್ಲ ಗ್ರಾಹಕರ ನೋಟುಗಳು ಹಾಗೇ ಆಗಿವೆ ಎಂದು ತಿಳಿದುಬಂದಿದೆ.

ಈ ಸುದ್ದಿ ತಿಳಿದ ಹಲವು ಖಾತೆದಾರರು ಶುಕ್ರವಾರ ಬ್ಯಾಂಕ್ ಶಾಖಾ ಕಚೇರಿಗೆ ಆಗಮಿಸಿ, ನಾಶವಾದ ಹಣಕ್ಕಾಗಿ ಗದ್ದಲ ಸೃಷ್ಟಿಸಿದ್ದಾರೆ. ಅವರ ಸ್ವತ್ತುಗಳ ಭದ್ರತೆಯ ಬಗ್ಗೆ ಶಾಖಾ ವ್ಯವಸ್ಥಾಪಕರನ್ನು ವಿಚಾರಣೆ ನಡೆಸಲಾಯಿತು. ಸಿಟ್ಟಿಗೆದ್ದ ಗ್ರಾಹಕರು PNB ಬ್ಯಾಂಕ್ ಸರಿಯಾದ ಸಮಯದಲ್ಲಿ ಪರಿಣಾಮಕಾರಿ ಕೀಟ ನಿಯಂತ್ರಣ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ವಿಫಲವಾಗಿದೆ ಎಂದು ಆರೋಪಿಸಿದರು.

ಅದಾನಿ ಕೇಸಿಂದ ಆರ್ಥಿಕತೆಗೆ ಪೆಟ್ಟಿಲ್ಲ: ನಿರ್ಮಲಾ ಸೀತಾರಾಮನ್‌; ಮೋದಿಗೆ 3 ಪ್ರಶ್ನೆ ಕೇಳಿದ ಕಾಂಗ್ರೆಸ್‌

ಇನ್ನು, ಈ ಘಟನೆಯನ್ನು ಬ್ಯಾಂಕ್ ಒಪ್ಪಿಕೊಂಡಿದ್ದರೂ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ರಾಹಕರಿಗೆ ಭರವಸೆ ನೀಡಿದೆ. ಆದರೂ, ಈ ಘಟನೆಯು ಬ್ಯಾಂಕ್ ಲಾಕರ್‌ಗಳಲ್ಲಿನ ಜನರ ಹಣದ ಭದ್ರತೆಯ ಬಗ್ಗೆ ದೇಶದ ಜನರ ಆತಂಕವನ್ನು ಉಂಟುಮಾಡಿದೆ.

click me!