Aero India: ಬಾನಂಗಳದಲ್ಲಿ ವಿಮಾನಗಳ ಚಿತ್ತಾರ: ಜನಾಕರ್ಷಣೆಗೊಂಡ ಆಂಜನೇಯ ಯುದ್ದ ವಿಮಾನ

By Sathish Kumar KHFirst Published Feb 13, 2023, 5:53 PM IST
Highlights

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 14ನೇ ಆವೃತ್ತಿಯ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದಲ್ಲಿ ಮೇಕ್‌ ಇನ್‌ ಇಂಡಿಯಾ ತೇಜಸ್‌ ಚಮತ್ಕಾರ ಹಾಗೂ ಆಂಜನೇಯ ಯುದ್ಧ ವಿಮಾನದ ಹಾರಾಟ ಹೆಚ್ಚು ಜನಾಕರ್ಷಣೆ ಪಡೆದುಕೊಂಡಿತು. 

ಬೆಂಗಳೂರು (ಫೆ.13): ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 14ನೇ ಆವೃತ್ತಿಯ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದಲ್ಲಿ ಮೇಕ್‌ ಇನ್‌ ಇಂಡಿಯಾ ತೇಜಸ್‌ ಚಮತ್ಕಾರ ಮಾಡಿತು. ಅದರಲ್ಲಿಯೂ ಮಧ್ಯಾಹ್ನದ ವೇಳೆ ಸ್ವದೇಶಿ ನಿರ್ಮಿತ ಆಂಜನೇಯ ಯುದ್ಧ ವಿಮಾನದ ಹಾರಾಟ ಹೆಚ್ಚು ಜನಾಕರ್ಷಣೆ ಪಡೆದುಕೊಂಡಿತು. 

ಪ್ರತಿವರ್ಷದಂತೆ ಈ  ಬಾರಿಯೂ  ಏರ್ ಶೋ ನಲ್ಲಿ ಹಲವು ವಿಶೇಷತೆ ಇದೆ. ಏರ್ ಶೋ ನಲ್ಲಿ ಯುದ್ಧ ವಿಮಾನಗಳು ಬಾನಂಗಳದಲ್ಲಿ ಹಾರಾಡೋದು ಮಾತ್ರವಲ್ಲ ಹೊಸದಾಗಿ ಡೆವಲಪ್ ಮಾಡ್ತಾಯಿರುವ ಯುದ್ದ ವಿಮಾನಗಳ ಮಾದರಿಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ. ಆತ್ಮನಿರ್ಭರ್ ಅಡಿಯಲ್ಲಿ ಹೆಚ್ಎಎಲ್‌  ಅಭಿವೃದ್ಧಿ ಪಡಿಸುತ್ತಿರುವ  HLFT-42 (Hindustan lead in fighter trainer) ಎಂಬ ಹೆಸರಿನ ಯುದ್ದ ವಿಮಾನದ ಮೇಲೆ‌ ವಾಯುಪುತ್ರ, ಬಜರಂಗಬಲಿ ಆಂಜನೇಯನ ಪೋಟೋ ಹಾಕಲಾಗಿದೆ. ಈ ಯುದ್ಧ ವಿಮಾನವು ಆಂಜನೇಯನಂತೆ ಅತಿ ವೇಗವಾಗಿ ಮುನ್ನುಗುವ ಹಾಗೂ ಶತೃಗಳನ್ನ ಸೆದೆಬಡೆಯುವ ಸಾಮರ್ಥ್ಯ ಹೊಂದಿದೆ. ಈ ಯುದ್ದ ವಿಮಾನ ಇನ್ನು 4 ವರ್ಷಗಳಲ್ಲಿ ರೆಡಿಯಾಗಲಿದ್ದು, ಸದ್ಯಕ್ಕೆ ವಿಮಾನವನ್ನ ತರಬೇತಿಗಾಗಿ ಬಳಸಲಾಗುತ್ತದೆ.‌ ತುರ್ತು ಸಂದರ್ಭದಲ್ಲಿ ಯುದ್ದಕ್ಕೂ ಕೂಡ ಈ ವಿಮಾನವನ್ನ ಕೂಡ ಬಳಸಬಹುದಾಗಿದೆ ಎಂದು ವಾಯುಪಡೆ ತಿಳಿಸಿದೆ.

Aero India 2023 : ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ: ಗಮನ ಸೆಳೆದ ಯುದ್ದ ವಿಮಾನಗಳ ಕಸರತ್ತು

ತೇಜಸ್‌ ಯುದ್ಧ ವಿಮಾನದ ವಿಶೇಷತೆಗಳು: ಏರೋ ಇಂಡಿಯಾ ಷೋ ಅತ್ಯಾಕರ್ಷಣೆಯಾಗಿದ್ದು ತೇಜಸ್‌ ಯುದ್ಧ ವಿಮಾನವಾಗಿದೆ. ಬೆಂಗಳೂರಿನ HALನಲ್ಲಿ ನಿರ್ಮಿಸಿರುವ ತೇಜಸ್ ವಿಮಾನ ಹೆಚ್ಚು ಆಕರ್ಷಣೆಯಾಗಿತ್ತು. ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಜಂಟಿ ಉದ್ಯಮವಾಗಿ ಅಭಿವೃದ್ಧಿ ಮಾಡಲಾಗಿದೆ. ಇದುವರೆಗೆ 36 ತೇಜಸ್ ನಿರ್ಮಾಣ, 83 ತೇಜಸ್ ಯುದ್ದ ವಿಮಾನಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಹಗುರವಾದ ವಿಮಾನವಾಗಿದೆ. ತಾಂತ್ರಿಕವಾಗಿ ಬಹು-ಪಾತ್ರ, ಗಾಯನ-ಎಂಜಿನ್ ಯುದ್ಧತಂತ್ರ ಹೊಂದಿದೆ. ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲು ವಿಶೇಷವಾಗಿ ತಯಾರಿಸಲಾಗಿದೆ. ತೇಜಸ್ ಸ್ಥಳೀಯವಾಗಿ ತಯಾರಿಸಿದ ಲಘು ಯುದ್ಧ ವಿಮಾನ (LCA)ಆಗಿದೆ.  ಸೂಪರ್ಸಾನಿಕ್ ವರ್ಗಕ್ಕೆ ಸೇರಿದ ವಿಶ್ವದ ಅತ್ಯಂತ ಚಿಕ್ಕ ವಿಮಾನವೂ ಆಗಿದೆ. ಏಕ-ಎಂಜಿನ್ ಮತ್ತು ಸಂಯುಕ್ತ ಡೆಲ್ಟಾ ವಿಂಗ್ ಅನ್ನು ಒಳಗೊಂಡಿವೆ. ತೇಜಸ್ ತನ್ನ ಉನ್ನತ ಮಟ್ಟದ ಚುರುಕುತನ, ಕುಶಲತೆಗೆ ಹೆಸರುವಾಸಿಯಾಗಿದೆ. ಬಾಲರಹಿತ ಸಂಯುಕ್ತ ರೆಕ್ಕೆ ಡೆಲ್ಟಾ ಸಂರಚನೆಯ ಗುಣಲಕ್ಷಣ ಹೊಂದಿದೆ. ಬೇರೆ ದೇಶದ ಮಿಸೈಲ್ ಅಳವಡಿಸಿ ಆದೇಶ ನೀಡಬಲ್ಲ ವಿಶೇಷ ತೇಜಸ್ ಯುದ್ಧ ವಿಮಾನ ಹೊಂದಿದೆ.

ಭೀಮ ಬಲ ಪ್ರದರ್ಶಿಶಿದ ಪ್ರಚಂಡ ಹೆಲಿಕಾಪ್ಟರ್: ಏರ್ ಷೋ ಪ್ರದರ್ಶನದಲ್ಲಿ ಕಣ್ಮನ ಸೆಳೆದ 'ಪ್ರಚಂಡ' ಹೆಲಿಕಾಪ್ಟರ್ ಪ್ರದರ್ಶನ ಅದ್ಧೂರಿಯಾಗಿತ್ತು. ದೇಶೀ ನಿರ್ಮಿತ ಹೆಮ್ಮೆಯ ಪ್ರಚಂಡ ಹಲವು ವಿಶೇಷತೆಗಳನ್ನು ಹೊಂದಿದೆ. ಅಮೆರಿಕಾದ ಅಪಾಚಿ ಹೆಲಿಕಾಪ್ಟರ್ ಸರಿಸಾಟಿ ಈ‌ ಪ್ರಚಂಡ ಹೆಲಿಕಾಪ್ಟರ್. ಅತಿ ಎತ್ತರದ‌ ಪ್ರದೇಶದಲ್ಲಿ ಬಳಕೆಯಾಗುವ ಲಘು ಯುದ್ಧ ಹೆಲಿಕಾಪ್ಟರ್ ಆಗಿದೆ. ಮರುಭೂಮಿಯಂಥ ತುಂಬ ತೀಕ್ಷ್ಣ ಪ್ರದೇಶದಲ್ಲಿ ಬಳಕೆ ಮಾಡಬಹುದು. ತುಮಕೂರಿನಲ್ಲಿ ಪ್ರಚಂಡ ಹೆಲಿಕಾಪ್ಟರ್ ತಯಾರಿಸಲಾಗುತ್ತಿದೆ. ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ ನೀರ್ಗಲ್ಲು ಪ್ರದೇಶ, ಕಾರ್ಗಿಲ್‌ ಗುಡ್ಡಗಾಡು ಪ್ರದೇಶ,‌ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಈ‌ ಹೆಲಿಕಾಪ್ಟರ್ ಬಳಸಬಹುದು. ವಾಸ್ತವ ನಿಯಂತ್ರಣ ರೇಖೆಯ ಗುಡ್ಡಗಾಡು ಪ್ರದೇಶಗಳಲ್ಲಿ ನಿಯೋಜಿಸಲು ಸಹಕಾರಿಯಾಗಿದೆ. 

Aero India 2023: ಅರ್ಜೆಂಟೀನಾ, ಮಲೇಷ್ಯಾಗೆ ಎಲ್‌ಸಿಎ ತೇಜಸ್ ಎಂಕೆ 1ಎ ರಫ್ತಿಗೆ HALಗೆ ಅವಕಾಶ

ಪ್ರಚಂಡ ಹೆಲಿಕಾಪ್ಟರ್ ವಿಶೇಷತೆಗಳು: ಶಕ್ತಿಶಾಲಿ ಅವಳಿ ಎಂಜಿನ್‌ ಹೊಂದಿರುವ ಪ್ರಚಂಡ ಹೆಲಿಕಾಪ್ಟರ್‌ನ ತೂಕ 5.8 ಟನ್‌ ಇದೆ. ಗ್ಲಾಸ್‌ ಕಾಕ್‌ಪಿಟ್‌, ಕಾಂಪೊಸಿಟ್‌ ಏರ್‌ಫ್ರೇಮ್‌ ವಿನ್ಯಾಸ ಹೊಂದಿದೆ. 700 ಕೆ.ಜಿ. ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲ ಹಾಗೂ ಆಗಸದಿಂದಲೇ ಕ್ಷಿಪಣಿ ಹಾರಿಸಬಲ್ಲ ಸಾಮರ್ಥ್ಯ ಹೊಂದಿದೆ. ರಾಕೆಟ್‌ ಪಾಡ್ಸ್‌, ಬಾಂಬ್‌, ಮಿಸೈಲ್‌, 20 ಎಂಎಂ. ಎಂ621 ಗನ್‌ ಸೇರಿ ಕಾಪ್ಟರ್‌ ಬತ್ತಳಿಕೆಯಲ್ಲಿರಲಿವೆ. ಸಿಯಾಚಿನ್‌ನಂತಹ ಪ್ರದೇಶ, ಮರುಭೂಮಿಯಲ್ಲೂ ಪ್ರಖರ ದಾಳಿ ನಡೆಸಬಲ್ಲ ಸಾಮರ್ಥ್ಯವಿದೆ. 16,400 ಅಡಿ ಎತ್ತರದಲ್ಲೂ ಬಹುಬೇಗ ಟೇಕಾಫ್‌ ಆಗಬಲ್ಲದು. 15 ಹೆಲಿಕಾಪ್ಟರ್‌ಗಳ ನಿರ್ಮಾಣಕ್ಕೆ ವ್ಯಯಿಸಲಾಗಿರುವ ಅಂದಾಜು ವೆಚ್ಚ 3,887 ಕೋಟಿ ರೂ. ಆಗಿದೆ. ಭಾರತೀಯ ಸೇನೆ ಹಾಗೂ ವಾಯುಪಡೆಗೆ ಬೇಕಿರುವ ಇಂತಹ ಹೆಲಿಕಾಪ್ಟರ್‌ಗಳ ಅಂದಾಜು ಸಂಖ್ಯೆ 160 ಆಗಿದೆ. ಇವುಗಳಲ್ಲಿ 95 ಭಾರತೀಯ ಸೇನೆಗೆ ಮತ್ತು 65 ವಾಯುಪಡೆಗೆ ಸಿಗಲಿವೆ. 

click me!