ಮದನಿ ಮೊಂಡುವಾದಕ್ಕೆ ಬೆಂಬಲ, ಮನುಸ್ಮೃತಿ ಅಲ್ಲಾ ಮೇಲೆ ನಂಬಿಕೆ ಇಟ್ಟಿದ್ದ, ಸಾಜಿದ್ ರಶೀದಿ ಹೊಸ ವಿವಾದ!

Published : Feb 13, 2023, 05:03 PM IST
ಮದನಿ ಮೊಂಡುವಾದಕ್ಕೆ ಬೆಂಬಲ, ಮನುಸ್ಮೃತಿ ಅಲ್ಲಾ ಮೇಲೆ ನಂಬಿಕೆ ಇಟ್ಟಿದ್ದ, ಸಾಜಿದ್ ರಶೀದಿ ಹೊಸ ವಿವಾದ!

ಸಾರಾಂಶ

ಜಮಿಯತ್ ಉಲೇಮಾ ಎ ಹಿಂದ್ ಅಧಿವೇಶನ ಒಂದರ ಮೇಲೊಂದರಂತೆ ವಿವಾದಕ್ಕೆ ಕಾರಣವಾಗುತ್ತಿದೆ. ಭಾರತದಲ್ಲೇ ಇಸ್ಲಾಂ ಹುಟ್ಟಿದ್ದು, ಓಂ ಹಾಗೂ ಇಸ್ಲಾಂ ಒಂದೆ ಅನ್ನೋ ಮೌಲಾನಾ ಸಯ್ಯದ್ ಅರ್ಷದ್ ಮದನಿ ಹೇಳಿಕೆಗೆ ಇದೀಗ ಹಲವು ಮೌಲ್ವಿಗಳು, ಮುಸ್ಲಿಂ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಇಮಾಮ್ ಅಸೋಸಿಯೇಶನ್ ಮುಖ್ಯಸ್ಥ ಸಾಜೀದ್ ರಶೀದಿ ಒಂದು ಹೆಜ್ಜೆ ಮುಂದೆ ಹೋಗಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಮನಸ್ಮೃತಿ ಹಜ್ರತ್ ಆದಮ್. ಇಷ್ಟೇ ಅಲ್ಲ ಅಲ್ಲಾ ಮೇಲೆ ನಂಬುತ್ತಿದ್ದ ಎಂದಿದ್ದಾರೆ.  

ನವದೆಹಲಿ(ಫೆ.13): ಭಾರತದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ಭಾರಿ ಸದ್ದು ಮಾಡುತ್ತದೆ. ಇದೀಗ ಜಮಿಯತ್ ಉಲೇಮಾ ಎ ಹಿಂದ್ ಅಧಿವೇಶನದಲ್ಲಿ ಮೌಲನಾ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮೌಲಾನಾ ಸಯ್ಯದ್ ಅರ್ಷದ್ ಮದನಿ ಓಂ ಹಾಗೂ ಅಲ್ಲಾ ಒಂದೇ ಅನ್ನೋ ಹೇಳಿಕೆ, ಭಾರತದಲ್ಲೇ ಇಸ್ಲಾಂ ಹುಟ್ಟಿದ್ದು ಅನ್ನೋ ಮೊಂಡುವಾದಕ್ಕೆ ಹಲವು ಮುಸ್ಲಿಮ್ ಮುಖಂಡರು, ಧರ್ಮಗುರುಗಳು ಬೆಂಬಲ ಸೂಚಿಸಿದ್ದಾರೆ. ಈ ಪೈಕಿ ಇಮಾಮ್ ಅಸೋಸಿಯೇಶನ್ ಮುಖ್ಯಸ್ಥ ಸಾಜಿದ್ ರಶೀದಿ ಮೌಲಾನಾ ಬೆಂಬಲದ ಜೊತೆಗೆ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಹಿಂದೂ ಧರ್ಮದ ಧಾರ್ಮಿಕ ವ್ಯಕ್ತಿ, ಮೂಲಪುರುಷ ಎಂದೇ ಕರೆಯಿಸಿಕೊಳ್ಳುವ ಮನುಸ್ಮೃತಿ ಇಸ್ಲಾಂನ ಹಜ್ರತ್ ಆದಮ್. ಇಷ್ಟೇ ಅಲ್ಲ ಮನು ಅಲ್ಲಾ ಮೇಲೆ ನಂಬಿಕೆ ಇಟ್ಟಿದ್ದ. ಅಲ್ಲಾ ನಂಬುತ್ತಿದ್ದ ಎಂದು ಸಾಜಿದ್ ರಶೀದಿ ಹೇಳಿದ್ದಾರೆ. 

ವಿಶ್ವದಲ್ಲಿ ಇಸ್ಲಾಂ ಅತ್ಯಂತ ಹಳೆಯ ಧರ್ಮ. ಇಸ್ಲಾಂ ಬಳಿಕ ಎಲ್ಲಾ ಧರ್ಮಗಳು ಹುಟ್ಟಿಕೊಂಡವು. ಇಸ್ಲಾಂ ಹುಟ್ಟಿರುವುದು ಭಾರತದಲ್ಲಿ ಎಂದು ಸಾಜಿದ್ ರಶೀದಿ ಹೇಳಿದ್ದಾರೆ. ಮೌಲಾನಾ ಸಯ್ಯದ್ ಅರ್ಷದ್ ಮದನಿ ಹೇಳಿಕೆ ವಿವಾದ ಇನ್ನೂ ತಣ್ಣಗಾಗಿಲ್ಲ. ಇದೀಗ ರಶೀದಿ ವಿವಾದ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. 

 

ಹಿಂದೂ ಎನ್ನುವುದು ಧರ್ಮವೇ ಅಲ್ಲ ಎಂದ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ!

ಮದನಿ ವಿವಾದ:
ಇಸ್ಲಾಂ ಧರ್ಮ ಭಾರತಕ್ಕೆ ಬಂದಿದ್ದಲ್ಲ. ಅದು ಸೃಷ್ಟಿಯಾಗಿದ್ದೇ ಭಾರತದಲ್ಲಿ ಎಂದು ಇಸ್ಲಾಮಿಕ್‌ ವಿದ್ವಾಂಸರ ಮುಂಚೂಣಿ ಸಂಸ್ಥೆಯಾದ, ಶತಮಾನಗಳಷ್ಟುಹಳೆಯದಾದ ಜಮಿಯತ್‌ ಉಲೇಮಾ-ಎ-ಹಿಂದ್‌ ಮುಖ್ಯಸ್ಥ ಮಹಮೂದ್‌ ಮದನಿ ಹೇಳಿದ್ದರು. ನವದೆಹಲಿಯ ರಾಮಲೀಲಾ ಮೈದಾನದಲ್ಲಿ  ನಡೆದ ಜಮಿಯತ್‌ನ 34ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮದನಿ, ಈ ನೆಲದ ವಿಶೇಷತೆ ಏನೆಂದರೆ, ಇದು ಖುದಾ ಅಬು- ಅಲ್‌- ಬಷರ್‌ನ ಮೊದಲ ಪೈಗಂಬರರ ಭೂಮಿ. ಅವರು ಮೊದಲು ಬಂದಿದ್ದೇ ಇಲ್ಲಿಗೆ. ಇದು ಇಸ್ಲಾಂನ ಜನ್ಮಭೂಮಿ. ಮುಸ್ಲಿಮರ ಮೊದಲ ತಾಯ್ನಾಡು. ಹೀಗಾಗಿ ಇಸ್ಲಾಮ್‌ ಬೇರೆ ಕಡೆಯಿಂದ ಬಂತು ಎಂದು ಹೇಳುವುದು ಅಥವಾ ಯೋಚಿಸುವುದು ಸಂಪೂರ್ಣ ತಪ್ಪು ಹಾಗೂ ಆಧಾರರಹಿತ. ಇಸ್ಲಾಂ ಎಂಬುದು ಈ ದೇಶದ ಧರ್ಮ. ಎಲ್ಲ ಧರ್ಮಗಳಿಗಿಂತ ಅತ್ಯಂತ ಹಳೆಯ ಧರ್ಮ. ಹೀಗಾಗಿ ಭಾರತ ಎಂಬುದು ಮುಸ್ಲಿಮರಿಗೆ ಅತ್ಯುತ್ತಮ ದೇಶ ಎಂದು ಹೇಳುತ್ತೇನೆ ಎಂದಿದ್ದರು. ಮುಸ್ಲಿಮರ ಬಗ್ಗೆ ಪೂರ್ವಾಗ್ರಹ, ದ್ವೇಷ ಹೆಚ್ಚುತ್ತಿದೆ. ಅಲ್ಪಸಂಖ್ಯಾತರ ವಿರುದ್ಧ ಹಿಂಸೆಗೆ ಕುಮ್ಮಕ್ಕು ನೀಡುವವರ ವಿರುದ್ಧ ಪ್ರತ್ಯೇಕ ಕಾನೂನುವೊಂದನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು.

ಭಾಷಣ ಮುಂದುವರಿಸಿದ ಮದನಿ ‘ಶ್ರೀರಾಮ, ಶಿವ, ಬ್ರಹ್ಮ ಎಂಬುದೆಲ್ಲಾ ಇಲ್ಲ. ಇರುವುದೊಂದೇ. ಅದುವೇ ಓಂ, ಅದನ್ನೇ ನಾವು ಅಲ್ಲಾ ಅನ್ನುತ್ತೇವೆ. ಹೀಗಾಗಿ ಓಂ ಮತ್ತು ಅಲ್ಲಾ ಒಂದೇ’ ಎಂದು ಜಮಿಯತ್‌ ಉಲಮಾ ಎ ಹಿಂದ್‌ ಮುಖ್ಯಸ್ಥ ಸಯ್ಯದ್‌ ಆರ್ಶದ್‌ ಮದನಿ ಹೇಳಿದ್ದರು.

100 ವರ್ಷ ಬಳಿಕ ರಾಮಮಂದಿರ ಕೆಡವಿ ಮಸೀದಿ ಕಟ್ತೇವೆ: ರಶೀದಿ

ಸಾಜಿದ್ ರಶೀದಿ ವಿವಾದಾತ್ಮ ಹೇಳಿಕೆಗಳಿಂದಲೇ ಪ್ರಸಿದ್ಧಿಯಾಗಿದ್ದಾರೆ. ಜ್ಞಾನವಾಪಿ ಮಸೀದಿ ವಿವಾದ ಸಂದರ್ಭದಲ್ಲಿ ರಶೀದಿ, ಹಿಂದೂ ಧರ್ಮವೇ ಇಲ್ಲ ಎಂದಿದ್ದರು. ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ರಶೀದಿ, ಬಳಿಕ ಸರ್ವೆಯಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಇದು ರಶೀದಿಯನ್ನು ಕೆರಳಿಸಿತ್ತು. ಇದು ಶಿವಲಿಂಗವಲ್ಲ, ಕಾರಂಜಿ. ಹಿಂದೂಗಳು ಸಂಭ್ರಮ ಪಡುವ ಅಗತ್ಯವಿಲ್ಲ. ಕಾರಣ ಶಿವಲಿಂಗ ಪತ್ತೆಯಾಗಿಲ್ಲ, ಕೇವಲ ಕಾರಂಜಿ ಮಾತ್ರ ಪತ್ತೆಯಾಗಿದೆ. ಇದಕ್ಕೆ ಕಾರಣವಿದೆ. ಹಿಂದೂ ಒಂದು ಧರ್ಮವೇ ಅಲ್ಲ ಎಂದಿದ್ದರು. ಮಸೀದಿಯಲ್ಲಿ ಸರ್ವೇ ಕಾರ್ಯಕ್ಕೆ ಇಸ್ಲಾಂ ಒಪ್ಪುವುದಿಲ್ಲ. ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದು ಇಸ್ಲಾಂ ನಿಯಮ ಉಲ್ಲಂಘನೆಯಾಗಿದೆ ಎಂದಿದ್ದರು. 

ಇಷ್ಟೇ ಅಲ್ಲ ಸುಪ್ರೀಂ ಕೋರ್ಟ್ ಹಿಂದೂಗಳ ಪರವಾಗಿ ಆಯೋಧ್ಯ ತೀರ್ಪು ನೀಡಿದೆ ಎಂದು ಟೀಕಿಸಿದ್ದರು. ಆಯೋಧ್ಯೆ ಮುಸ್ಲಿಮರಿಗೆ ಸೇರಿದ್ದು. ಬಾಬ್ರಿ ಮಸೀದಿ ಹಿಂದೂಗಳಿಗೆ ಸೇರಿದೆಯೇ? ಬಾಬ್ರಿ ಮಸೀದಿ ಇತಿಹಾಸ ಗೊತ್ತಿದೆಯೇ?ಎಂದು ಪ್ರಶ್ನಿಸಿದ್ದರು. ಇದೀಗ ಮತ್ತೆ ವಿವಾದ ಸೃಷ್ಟಿಸಿ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು