ತಗ್ಗಿ ಬಗ್ಗಿದ ಕೊರೋನಾ, ಈ ಬೇಡಿಕೆಗೆ ದಂಗಾದ ಮಂದಣ್ಣ.. ಮಾರ್ಚ್ 17ರ ಟಾಪ್ 10 ಸುದ್ದಿಗಳು

By Suvarna NewsFirst Published Mar 17, 2020, 6:36 PM IST
Highlights

ಕೊರೋನಾದಿಂದ ಬಳಲುತ್ತಿದ್ದ ಟೆಕ್ಕಿ ಕುಟುಂಬ ಸೇಫ್/ ಆ ದಾಖಲೆ ಮುರಿಯುತ್ತಾರಾ ರೋಹಿತ್ ಶರ್ಮಾ/ಇನ್ನೂ ಒಂದು ವಾರ ಕಾಲ ಕರ್ನಾಟಕ ಬಂದ್ / ರಶ್ಮಿಕಾಗೆ ಅಭಿಮಾನಿಗಳ ಪ್ರೀತಿಯ ಕಾಟ

ಡೆಡ್ಲಿ ಕೊರೋನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ ಬೆಂಗಳೂರಿನ ಟೆಕ್ಕಿ ಫ್ಯಾಮಿಲಿ ಸೇಫ್ ಆಗಿದೆ. ಮಾಹಾಮಾರಿ ಕೊರೋನಾ ವೈರಸ್‌ನಿಂದ ಬೆಂಗಳೂರಿನ ಟೆಕ್ಕಿ ಗೆದ್ದು ಬಂದಿದ್ದು, ಜಯನಗರದ ರಾಜೀವ್ ಗಾಂಧಿನಗರ ವೈದ್ಯರು ಕೊಟ್ಟ ಚಿಕಿತ್ಸೆಯಿಂದ ಅವರು ಗುಣಮುಖರಾಗಿದ್ದಾರೆ.  ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳ ಅಭಿಮಾನದ ಕಾಟ ಮುಂದುವರಿದೇ ಇದೆ..ಮಾರ್ಚ್ 17 ನರ ಟಾಪ್ 10 ಸುದ್ದಿಗಳು ಇಲ್ಲಿವೆ.

ಕೊರೋನಾ ಗೆದ್ದ ಬೆಂಗ್ಳೂರು ಟೆಕ್ಕಿ ಫ್ಯಾಮಿಲಿ, ವೈದ್ಯರೇ ಶಹಬ್ಬಾಸ್

ಡೆಡ್ಲಿ ಕೊರೋನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ ಬೆಂಗಳೂರಿನ ಟೆಕ್ಕಿ ಫ್ಯಾಮಿಲಿ ಸೇಫ್ ಆಗಿದೆ.ಮಾಹಾಮಾರಿ ಕೊರೋನಾ ವೈರಸ್‌ನಿಂದ ಬೆಂಗಳೂರಿನ ಟೆಕ್ಕಿ ಗೆದ್ದು ಬಂದಿದ್ದು, ಜಯನಗರದ ರಾಜೀವ್ ಗಾಂಧಿನಗರ ವೈದ್ಯರು ಕೊಟ್ಟ ಚಿಕಿತ್ಸೆಯಿಂದ ಅವರು ಗುಣಮುಖರಾಗಿದ್ದಾರೆ. ಈ ಬಗ್ಗೆ ಟೆಕ್ಕಿ ಫ್ಯಾಮಿಲಿಯೇ ಪತ್ರ ಬರೆದು ವೈದ್ಯರಿಗೆ ಧನ್ಯವಾದ ತಿಳಿಸಿದೆ.

ಸರ್ಕಾರದ ನಿರ್ಲಕ್ಷ್ಯ: ತನ್ನದೇ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಹಾಲಪ್ಪ!

ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್‌ಗಿಂತ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಹೆಚ್ಚು ಆತಂಕವನ್ನುಂಟು ಮಾಡಿದರೂ ರಾಜ್ಯ ಸರ್ಕಾರವು ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸುವ ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.

2000 ರು. ನೋಟು ಸ್ಥಗಿತದ ಬಗ್ಗೆ ನಿರ್ಧಾರವಾಗಿಲ್ಲ!

ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 500 ರು. ಮತ್ತು 1000 ರು. ನೋಟುಗಳ ಅಪನಗದೀಕರಣ ಬಳಿಕ, ಬಿಡುಗಡೆ ಮಾಡಲಾದ 2000 ರು. ಮುಖಬೆಲೆಯ ನೋಟುಗಳ ಪ್ರಿಂಟಿಂಗ್‌ ಸ್ಥಗಿತಗೊಳಿಸುವ ಕುರಿತು ಈ ವರೆಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮಾರ್ಚ್‌ 31ರ ಒಳಗೆ ಮಾಡಬೇಕಾದ ಕೆಲವು ಮುಖ್ಯ ಕೆಲಸಗಳು!

ಕೆಲವು ವಿಚಾರಗಳು ನಮಗೆ ಗೊತ್ತಿರುತ್ತದೆ, ಆದರೆ ಮರೆತು ಹೋಗಿರುತ್ತದೆ. ಇನ್ನು ಕೆಲವರಿಗೆ ಈ ವಿಚಾರಗಳು ಅಲ್ಪಸ್ವಲ್ಪ ಕಿವಿಗೆ ಬಿದ್ದಿದ್ದರೂ ಪೂರ್ತಿಯಾಗಿ ಗೊತ್ತಿರುವುದಿಲ್ಲ. ಅಂಥಾ ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಮಾರ್ಚ್ 31ರ ಒಳಗೆ ಈ ಕೆಲಸಗಳನ್ನು ಮಾಡಿ ಮುಗಿಸಿದರೆ ಒಳಿತಾಗುವುದು.

ಶಿವಕುಮಾರಗೌಡ ಪಾಪು ಆದ ಕಥೆ!

ಇಡೀ ನಾಡಿಗೆ ಪಾಪು ಎಂದೇ ಚಿರಪರಿತರಾದ ಪಾಟೀಲ ಪುಟ್ಟಪ್ಪ ಅವರ ಮೂಲ ಹೆಸರು ಶಿವಕುಮಾರಗೌಡ ಎಂಬುದೇ ಬಹುತೇಕರಿಗೊತ್ತಿಲ್ಲ.

ದಂಪತಿ ಮಧ್ಯೆ ಹುಳಿ ಹಿಂಡಿದ ಕೊರೋನಾ, ಒಂದಾಗಿ ಬಾಳಲು ಬಿಡಲ್ವಣ್ಣ!

ಕೊರೋನಾ ವೈರಸ್ ಚೀನಾದಲ್ಲಿ ಅಬ್ಬರಿಸಿ ಇಡೀ ಪ್ರಪಂಚನ್ನೇ ವ್ಯಾಪಿಸಿ ಸಾವುಗಳ ಲೆಕ್ಕವನ್ನು ಏರಿಸಿಕೊಂಡೇ ಸಾಗುತ್ತಿದೆ. ಇದೆಲ್ಲದರ ನಡುವೆ ಚೀನಾದಲ್ಲಿ ಡಿವೋರ್ಸ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಇದಕ್ಕೂ ಕೊರೋನಾ ವೈರಸ್ಸೇ ಕಾರಣ.
 

ಅಕೌಂಟ್‌ ಪಾಸ್‌ವರ್ಡ್‌ ಮರೆತ ರಶ್ಮಿಕಾ ; ಶುರುವಾಯ್ತು ಫ್ಯಾನ್ಸ್‌ ಹೊಸ ಡಿಮ್ಯಾಂಡ್‌!

ಕಿರಿಕ್‌ ಪಾರ್ಟ್‌ ಸುಂದರಿ ರಶ್ಮಿಕಾ ಮಂದಣ್ಣ  ಚಿತ್ರರಂಗದಲ್ಲಿ ಉತ್ತುಂಗಕ್ಕೆ ಬೆಳೆಯುತ್ತಿದ್ದಂತೆ ತಮ್ಮ ಲೈಫ್‌ಸ್ಟೈಲ್‌ನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಅಷ್ಟೇ ಏಕೆ ಡವ್‌ ರಾಣಿ ಅಂತಿದ್ದ ನೆಟ್ಟಿಗರಿಗೆ ಈಗ ಆಕೆನೇ ಬೇಕಂತೆ...

ಪವರ್ ಸ್ಟಾರ್ ಗೆ ಜನ್ಮದಿನದ ಸಂಭ್ರಮ, ಅಪ್ಪು ನೆಚ್ಚಿನ ಚಿತ್ರಗಳು!

ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಂದು 45ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. 30 ಸೂಪರ್‌ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ಅಪ್ಪು ನಟನೆಯ ಈ ಸಿನಿಮಾಗಳನ್ನು ಮಿಸ್‌ ಮಾಡದೇ ನೋಡಬೇಕು....

ಭಾರತದಲ್ಲಿ 3 ಸಲ ರದ್ದಾಗಿವೆ ದ್ವಿಪಕ್ಷೀಯ ಸರಣಿಗಳು..!

 

ಆ ಒಂದು ದಾಖಲೆ ರೋಹಿತ್ ಶರ್ಮಾನಿಂದ ಮಾತ್ರ ಸಾಧ್ಯ: ಆಸೀಸ್ ಮಾಜಿ ಕ್ರಿಕೆಟಿಗ ಭವಿಷ್ಯ

ವಿಶ್ವ ಕ್ರಿಕೆಟ್‌ನಲ್ಲಿ ದಾಖಲೆಗಳು ನಿರ್ಮಾಣವಾಗುವುದು, ಬ್ರೇಕ್ ಆಗುವುದು ಹೊಸದೇನಲ್ಲ. ಪ್ರತಿ ಪಂದ್ಯದ ಪ್ರತಿ ಇನಿಂಗ್ಸ್‌ನಲ್ಲೂ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ.

click me!