ಬೀದಿ ನಾಯಿಗಳಿಂದ ನಾಯಿಮರಿ ರಕ್ಷಿಸಿ ಮಗುವಂತೆ ಸಲಹುವ ಕೋತಿ

By Anusha Kb  |  First Published Feb 9, 2023, 3:32 PM IST

ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಇಲ್ಲದ ಇಂದಿನ ಕಾಲಘಟ್ಟದಲ್ಲಿ ಕೋತಿಯೊಂದು ತನ್ನದಲ್ಲದ ನಾಯಿ ಮರಿಯನ್ನು ತನ್ನ ಮಗುವಿನಂತೆ ರಕ್ಷಣೆ ಮಾಡಿ ಸಾಕಿ ಸಲಹುತ್ತಿದೆ.


ಈರೋಡ್: ಮನುಷ್ಯರು ಮಕ್ಕಳನ್ನು ನಾಯಿ ಮರಿಗಳನ್ನು ಬೆಕ್ಕು ಮರಿಗಳನ್ನು ದತ್ತು ಪಡೆಯುವುದನ್ನು ನೀವು ನೋಡಿರಬಹುದು. ಆದರೆ ಪ್ರಾಣಿಯೊಂದು ನಾಯಿ ಮರಿಯನ್ನು ದತ್ತು ಪಡೆದು ಸ್ವಂತ ಮಗುವಿನಂತೆ ಸಲಹುತ್ತಿರುವುದನ್ನು ನೋಡಿದ್ದೀರಾ? ಇಂತಹ ಅಪರೂಪದ  ಘಟನೆಗೆ ತಮಿಳುನಾಡಿನ ಈರೋಡ್ ಸಾಕ್ಷಿಯಾಗಿದೆ.  ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಇಲ್ಲದ ಇಂದಿನ ಕಾಲಘಟ್ಟದಲ್ಲಿ ಕೋತಿಯೊಂದು ತನ್ನದಲ್ಲದ ನಾಯಿ ಮರಿಯನ್ನು ತನ್ನ ಮಗುವಿನಂತೆ ರಕ್ಷಣೆ ಮಾಡಿ ಸಾಕಿ ಸಲಹುತ್ತಿದೆ. ಈ ಕೋತಿ ಹಾಗೂ ಪುಟ್ಟ ನಾಯಿ ಮರಿಯ ಒಡನಾಟದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಈಗ ಫುಲ್ ವೈರಲ್ ಆಗುತ್ತಿದ್ದು,  ಇವರ ಒಡನಾಟಕ್ಕೆ ಮಾನವರು ತಲೆ ಬಾಗುತ್ತಿದ್ದಾರೆ.

ಈರೋಡ್‌ನ (Erode) ಸ್ಥಳೀಯರು ಹಾಗೂ ಪ್ರವಾಸಿಗರು ಈ ನಾಯಿ ಹಾಗೂ ಕೋತಿಯ ಒಡನಾಟ ನೋಡಿ ಅಚ್ಚರಿ ಪಟ್ಟಿದ್ದರು. ಇವೆರಡರ ಆತ್ಮೀಯತೆ ಎಷ್ಟಿತ್ತೆಂದರೆ ಇವುಗಳು ಈಗ ಈರೋಡ್‌ನ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಜೈವಿಕ ತಾಯಿ (biologically parent) ಮಗುವಿನಂತೆ ಈ ಕೋತಿ (Monkey) ಹಾಗೂ ನಾಯಿ ಮರಿ ಒಡನಾಡವಿದ್ದು, ಇದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. 

Tap to resize

Latest Videos

ಕರುಳ ಕುಡಿಯ ರಕ್ಷಣೆಗಾಗಿ ಜೀವವನ್ನೇ ಪಣಕಿಟ್ಟ ತಾಯಿ ಕೋತಿ... ವೈರಲ್ ವೀಡಿಯೋ

ಈ ಬಗ್ಗೆ ಅಲ್ಲಿನ ಸ್ಥಳೀಯರು ಹೇಳುವುದು ಹೀಗೆ, 'ಕೋತಿ ಆ ಪುಟ್ಟ ನಾಯಿ ಮರಿಯನ್ನು ದತ್ತು ಪಡೆಯಲು ನಿರ್ಧರಿಸಿದಂತಿದ್ದು, ಅದನ್ನು ಎತ್ತಿಕೊಂಡು ಓಡಾಡುತ್ತಾ ಸದಾ ರಕ್ಷಣೆ ಮಾಡುತ್ತಿದೆ. ಇವೆರಡು ಇಲ್ಲಿನ ಬೀದಿಗಳಲ್ಲಿ ಜೊತೆಯಾಗಿ ಸುತ್ತಾಡುವುದು ಸಾಮಾನ್ಯವಾಗಿದೆ. ಕೋತಿ ನಾಯಿಮರಿಯನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಇಲ್ಲಿನ ಜನಸಂದಣಿಯ ಬೀದಿಗಳಲ್ಲಿ ಸಾಗುತ್ತದೆ. ಅಲ್ಲದೇ ಇವರೆಡು ಜೊತೆಯಾಗಿ ಆಟವಾಡುತ್ತಿರುತ್ತವೆ.  ಇಷ್ಟೇ ಅಲ್ಲದೇ ಬೀದಿನಾಯಿಗಳು ಈ ಪುಟ್ಟ ನಾಯಿ ಮರಿಯ ಮೇಲೆ ದಾಳಿ ಮಾಡಲು ಮುಂದಾದಾಗ ಕೂಡಲೇ ಎಲ್ಲಿದ್ದರೂ ಓಡಿ ಬರುವ ಕೋತಿ ಬೀದಿನಾಯಿಗಳನ್ನು ಓಡಿಸಿ ಮರಿ ನಾಯಿಯನ್ನು ರಕ್ಷಿಸುತ್ತದೆ' ಎಂದು ಹೇಳುತ್ತಾರೆ ಇಲ್ಲಿನ ನಿವಾಸಿಗಳು. 

ಈ ಶ್ವಾನ ಹಾಗೂ ವಾನರನ ಅಪರೂಪದ ಸ್ನೇಹ ನೋಡಿದ ಸ್ಥಳಿಯರು ಕೂಡ ಇವುಗಳಿಗೆ ಆಗಾಗ ಆಹಾರ ನೀಡಿ ಸಲುಹುತ್ತಿರುತ್ತಾರೆ.  ಅಲ್ಲದೇ ಯಾರಾದರೂ ಆಹಾರ ನೀಡಿದರೆ ಈ ಕೋತಿ ಮೊದಲು ಶ್ವಾನಕ್ಕೆ ನೀಡಿ ನಂತರ ತಾನು ತಿನ್ನಲು ಶುರು ಮಾಡುತ್ತದೆ. ಕಾಡಿನ ಪ್ರಾಣಿಯೊಂದರ ಈ ತಾಯಿ ಪ್ರೀತಿ ಮನುಷ್ಯರಿಗೆ ಪಾಠ ಹೇಳುವಂತಿದೆ. 

ಜಿಂಕೆಗಳ ಮೇವಿಗಾಗಿ ಮರದ ಕೊಂಬೆಗಳ ಬಾಗಿಸಿದ ಕೋತಿ... ವೈರಲ್ ವಿಡಿಯೋ

ಆದರೆ ಈಗ ಅಲ್ಲಿನ ಸ್ಥಳೀಯ ಮಾಧ್ಯಮವೊಂದರ ವರದಿ ಪ್ರಕಾರ, ಪ್ರಾಣಿದಯಾ ಸಂಘವೊಂದು ಈ ನಾಯಿ ಮರಿಯನ್ನು ತನ್ನ ಸುಪರ್ದಿಗೆ ಪಡೆದಿದೆ ಎಂದು ವರದಿ ಮಾಡಿದೆ. ಆದರೆ ಕೋತಿಯೊಂದು ಬೀದಿ ನಾಯಿ ಮರಿಯೊಂದನ್ನು ತನ್ನ ಸ್ವಂತ ಮಗುವಿನಂತೆ ನೋಡಿಕೊಂಡ ಘಟನೆಯನ್ನು ಈರೋಡ್‌ನ ಜನ ಎಂದಿಗೂ ಮರೆಯುವುದಿಲ್ಲ. ಆದೇನೆ ಇರಲಿ ಪರಸ್ಪರ ಮನುಷ್ಯರೇ ಮಾನವೀಯತೆ ಮರೆತು ಹೊಡೆದಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕೋತಿಯೊಂದು ತನ್ನದಲ್ಲದ ಮರಿಯನ್ನು ತನ್ನ ಮರಿಯಂತೆ ಸಲಹುತ್ತಿರುವ ಘಟನೆ ನಿಜಕ್ಕೂ ಅಚ್ಚರಿ..

click me!