'ನಿಮ್ಮಲ್ಲಿ ಕೆಸರಿದೆ, ನನ್ನಲ್ಲಿ ಕಮಲವಿದೆ..' ಮೋದಿ-ಅದಾನಿ ಭಾಯಿ ಭಾಯಿ ಗದ್ದಲದ ನಡುವೆ ಪ್ರಧಾನಿ ಮಾತು!

Published : Feb 09, 2023, 02:48 PM ISTUpdated : Feb 09, 2023, 02:58 PM IST
'ನಿಮ್ಮಲ್ಲಿ ಕೆಸರಿದೆ, ನನ್ನಲ್ಲಿ ಕಮಲವಿದೆ..' ಮೋದಿ-ಅದಾನಿ ಭಾಯಿ ಭಾಯಿ ಗದ್ದಲದ ನಡುವೆ ಪ್ರಧಾನಿ ಮಾತು!

ಸಾರಾಂಶ

'ಮೋದಿ-ಅದಾನಿ ಭಾಯಿ ಭಾಯಿ..' ಎಂದು ನಿರಂತರ ಘೋಷಣೆಯ ನಡುವೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳಿಗೆ ನಿಖರ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಸಿದರು.  

ನವದೆಹಲಿ (ಫೆ.9): ಲೋಕಸಭೆಯ ಬಳಿಕ ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳಿಗೆ ಸರ್ಕಾರದ ಸಾಧನೆಗಳ ಮೂಲಕ ಉತ್ತರ ನೀಡಿದರು. ಮೋದಿ ಭಾಷಣ ಆರಂಭ ಮಾಡಲು ಆರಂಭಿಸುತ್ತಿದ್ದಂತೆ ವಿರೋಧ ಪಕ್ಷಗಳು ಮೋದಿ ಅದಾನಿ ಭಾಯಿ ಭಾಯಿ.. ಮೋದಿ ಜೀ ಶರಮ್‌ ಕರೋ.. ಎನ್ನುವ ಘೋಷಣೆಗಳೊಂದಿಗೆ ಕಲಾಪಕ್ಕೆ ಅಡ್ಡಿಪಡಿಸಿದರೂ, ಮೋದಿ ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿರರ್ಗಳವಾಗಿ ಮಾತನಾಡಿದರು. ಸರ್ಕಾರದ ಸಾಧನೆಗಳನ್ನು ವಿವರವಾಗಿ ಮತ್ತೊಮ್ಮೆ ತಿಳಿಸಿದ ಪ್ರಧಾನಿ ಮೋದಿ, ನಡು ನಡುವೆ ವಿಪಕ್ಷಗಳಿಗೆ ಟಾಂಗ್ ನೀಡುತ್ತಲೇ ಮಾತನಾಡಿದರು. 'ನಾನಿಲ್ಲಿ ಸದನದಲ್ಲಿ ಮಾತನಾಡ್ತಿದ್ದರೆ, ಮೋದಿ ನನ್ನ ಕ್ಷೇತ್ರಕ್ಕೆ ಹೋಗಿ ಬಂದಿದ್ದಾರೆ..' ಎಂದು ಮಲ್ಲಿಕಾರ್ಜುನ್‌ ಖರ್ಗೆ ಬುಧವಾರ ರಾಜ್ಯಸಭೆಯಲ್ಲಿ ತಮಾಷೆಯಾಗಿ ಮಾತನಾಡಿದ್ದಕ್ಕೆ, ಮೋದಿ ಸ್ಪಷ್ಟ ಉತ್ತರ ನೀಡುತ್ತಾ ಖರ್ಗೆಗೆ ತಿರುಗೇಟು ನೀಡಿದರು. ಮಲ್ಲಿಕಾರ್ಜುನ್‌ ಖರ್ಗೆ ಅವರ ರಾಜ್ಯವಾದ ಕರ್ನಾಟಕದಲ್ಲಿ 1.70 ಕೋಟಿ ಜನಧನ್‌ ಖಾತೆಗಳಾಗಿವೆ. ಸ್ವತಃ ಖರ್ಗೆ ಅವರ ಕ್ಷೇತ್ರ ಕಲಬುರಗಿಯಲ್ಲಿ 8 ಲಕ್ಷ ಜನ್‌ಧನ್‌ ಖಾತೆ ತೆರೆಯಲಾಗಿದೆ. ಹೀಗೆಲ್ಲಾ ಇದ್ದಾಗ ಅವರ ಖಾತೆ ಬಂದ್‌ ಆಗಿರೋದಕ್ಕೆ ಬೇಸರವಾಗಿ ಅವರು ಆ ಮಾತನ್ನು ಆಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ನೀವು ಕೆಸರು ಎಸೆದಷ್ಟು ಕಮಲ ಅರಳುತ್ತದೆ: ರಾಜ್ಯಸಭೆಯಲ್ಲಿ ಕೆಲವೊಂದು ಸಂಸದರು ಮಾಡಿರುವ ಭಾಷಣ ಹಾಗೂ ಕೆಲವೊಂದು ಹೇಳಿಕೆಗಳು ನನಗೆ ಬೇಸರ ತರಿಸಿವೆ ಎಂದು ಹೇಳಿದ ಮೋದಿ, ಎದುರಾಳಿಗಳು ಎಷ್ಟೇ ನನ್ನ ಮೇಲೆ ಕೆಸರು ಎಸೆಯಲಿ. ನನ್ನಲ್ಲಿ ಇರೋದು ಕಮಲ. ಅದು ಅರಳುತ್ತಲೇ ಇರುತ್ತದೆ' ಎಂದು ಹೇಳಿದರು. 'ಭಾರತದ ಸಮಗ್ರ ಅಭಿವೃದ್ಧಿಗೆ ಬಲವಾದ ಅಡಿಪಾಯವನ್ನು ರಚಿಸಬೇಕೆಂದು ಕಾಂಗ್ರೆಸ್ ಬಯಸಿದ್ದರೂ ಸಹ, ಎಲ್ಲೆಡೆ ಸಮಸ್ಯೆಗಳನ್ನು ಮತ್ತು ಸಮಸ್ಯೆಗಳನ್ನು ಸೃಷ್ಟಿಸಿತ್ತು ಅನ್ನೋದನ್ನು ನಾನು 2014ರಲ್ಲಿ ಪ್ರಧಾನಿಯಾದಾಗ ನೋಡಿದ್ದೇನೆ" ಎಂದು ಅವರು ಹೇಳಿದರು.

ದೇಶ ಎದುರಿಸುತ್ತಿರುವ ಅಸಂಖ್ಯಾತ ಸಮಸ್ಯೆಗಳಿಗೆ ಕಾಂಗ್ರೆಸ್ ಎಂದಿಗೂ ಉತ್ತಮ ಮನಸ್ಸಿನಿಂದ ಪರಿಹಾರ ನೀಡಬೇಕು ಎಂದು ಮನಸ್ಸು ಮಾಡಲೇ ಇಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಂತೆ, ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಜೆಪಿಸಿ ತನಿಖೆಗೆ ಒತ್ತಾಯಿಸಿ ಸದನದ ಬಾವಿಯಲ್ಲಿ ಇಳಿದು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ನ ಕಷ್ಟಗಳ ಬಗ್ಗೆ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಖಾತೆಯನ್ನು ಕ್ಲೋಸ್‌ ಮಾಡಿದೆ ಎಂದು ಹೇಳಿದರು. ಕಳೆದ 3-4 ವರ್ಷಗಳಲ್ಲಿ ಸುಮಾರು 11 ಕೋಟಿ ಮನೆಗಳು ನಲ್ಲಿ ನೀರಿನ ಸಂಪರ್ಕ ಪಡೆದಿವೆ. ಸಾಮಾನ್ಯ ಜನರ ಸಬಲೀಕರಣದ ಬಗ್ಗೆ ಮಾತನಾಡಿದ ಅವರು, ನಾವು ಜನ್ ಧನ್ ಖಾತೆ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ ದೇಶಾದ್ಯಂತ 48 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್‌ ಬಾಟಲಿ ತ್ಯಾಜ್ಯದಿಂದ ತಯಾರಿಸಿದ ಜಾಕೆಟ್‌ ಧರಿಸಿ ಸಂಸತ್ತಿಗೆ ಬಂದ ಪ್ರಧಾನಿ ಮೋದಿ!

ಅಭಿವೃದ್ಧಿಯ ದಾರಿಯಲ್ಲಿ ಕಾಂಗ್ರೆಸ್‌ ಅಡ್ಡಿಗಳನ್ನು ನಿರ್ಮಾಣ ಮಾಡಿತ್ತು. ಇದಕ್ಕಾಗಿ ಭಾರತ ಆರು ದಶಕಗಳನ್ನು ಸುಮ್ಮನೆ ನಷ್ಟ ಮಾಡಿಕೊಂಡರೆ, ನಮಗಿಂತ ಸಣ್ಣ ಸಣ್ಣ ದೇಶಗಳು ಪ್ರಗತಿ ಸಾಧಿಸಿದವು ಎಂದರು.  ಎಲ್ಲರಿಗೂ ಉತ್ತಮ ಬದುಕು ಕಲ್ಪಿಸಲು ನಾವು ಬದ್ಧರಾಗಿದ್ದೇವೆ ಎಂದರು. ನಮ್ಮ ಸರ್ಕಾರವು ಕಳೆದ 3-4 ವರ್ಷಗಳಲ್ಲಿ 11 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಕೆಯನ್ನು ವಿಸ್ತರಿಸಿದೆ, 2014 ರ ಮೊದಲು ಕೇವಲ 3 ಕೋಟಿ ಜನರಿಗೆ ಮಾತ್ರವೇ ಈ ವ್ಯವಸ್ಥೆ ನೀಡಲಾಗಿತ್ತು ಎಂದರು.

ಕಾಶ್ಮೀರ ಶಾಂತಿ ಕದಡಲಿದೆ ಎಂದವರೇ ಲಾಲ್‌ಚೌಕ್‌ನಲ್ಲಿ ತಿರಂಗ ಹಾರಿಸಿದ್ದಾರೆ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!

ಕಾಂಗ್ರೆಸ್ ಕೇವಲ 'ಟೋಕನಿಸಂ'ನಲ್ಲಿ ತೊಡಗಿದೆ, ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಎಂದಿಗೂ ಪ್ರಯತ್ನಿಸಲಿಲ್ಲ ಎಂದು ಪ್ರಧಾನಿ ಮೋದಿ ಟೀಕಾ ಪ್ರಹಾರ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..