ಆಹಾರ ಪೂರೈಕೆಗೆ ಹೋದಾಗ ಮೈ ಮೇಲೆ ಹಾರಿದ ನಾಯಿ: ಕಟ್ಟಡದಿಂದ ಹಾರಿದ ಸ್ವಿಗ್ಗಿ ಬಾಯ್

By Anusha Kb  |  First Published Jan 14, 2023, 12:03 PM IST

ಹಕರಿಗೆ ಆಹಾರ ಡೆಲಿವರಿ ಮಾಡಲು ಬಂದಿದ್ದ ಯುವಕನೋರ್ವ ನಾಯಿಗೆ ಹೆದರಿ ಮೂರನೇ ಮಹಡಿಯಿಂದ ಕೆಳಗೆ ಹರಿದ ಘಟನೆ ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ನಡೆದಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.


ಹೈದರಾಬಾದ್:  ಗ್ರಾಹಕರಿಗೆ ಆಹಾರ ಡೆಲಿವರಿ ಮಾಡಲು ಬಂದಿದ್ದ ಯುವಕನೋರ್ವ ನಾಯಿಗೆ ಹೆದರಿ ಮೂರನೇ ಮಹಡಿಯಿಂದ ಕೆಳಗೆ ಹರಿದ ಘಟನೆ ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ನಡೆದಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಯೂಸೂಫ್‌ಗುಡ್ಡದ ಶ್ರೀರಾಮನಗರದ ನಿವಾಸಿ 23 ವರ್ಷ ಪ್ರಾಯದ ಮೊಹಮ್ಮದ್ ರಿಜ್ಞಾನ್ ಹೀಗೆ ಮೇಲಿನಿಂದ ಹಾರಿ ಗಾಯಗೊಂಡಿರುವ ಫುಡ್ ಡೆಲಿವರಿ ಬಾಯ್. 

ಈತ ಬಂಜಾರ ಹಿಲ್ಸ್‌ನಲ್ಲಿ (Banjara hills) ವಾಸವಿದ್ದ ಶೋಭನಾ  (Shobhana) ಎಂಬುವವರಿಗೆ ಆಹಾರ ಪೂರೈಕೆ ಮಾಡಲು ಹೋದ ವೇಳೆ ಈ ಅವಾಂತರ ನಡೆದಿದೆ.  ಆಹಾರ ಪೂರೈಕೆ ಮಾಡುತ್ತಿದ್ದ ವೇಳೆ ಮನೆಯೊಳಗಿದ್ದ ಶೋಭನಾ ಅವರ ಜರ್ಮನ್ ಶೆಫರ್ಡ್ (German Shepherd) ತಳಿಯ ಶ್ವಾನ ಪುಡ್ ಡೆಲಿವರಿ ಬಾಯ್ ಮೊಹಮ್ಮದ್ ರಿಜ್ವಾನ್ ಮೇಲೆರಗಿದ್ದು, ಈ ವೇಳೆ ನಾಯಿಯಿಂದ ತಪ್ಪಿಸಿಕೊಳ್ಳಲು ಓಡಿದ ಮೊಹಮ್ಮದ್ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಹಾರಿದ್ದಾರೆ.  ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ. 

Tap to resize

Latest Videos

ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಡಿಕ್ಕಿ ಹೊಡೆದು 1 ಕಿ.ಮೀ. ಎಳೆದೊಯ್ದ ಕಾರು

ಬಂಜಾರ ಹಿಲ್ಸ್ ಇನ್ಸ್‌ಪೆಕ್ಟರ್ ಎಂ ನರೇಂದರ್ (Narendar) ಪ್ರಕಾರ,  ಶ್ರೀರಾಮನಗರದ (Sriramnagar) ಮೊಹಮ್ಮದ್ ರಿಜ್ವಾನ್ (mohammad Rizvan), ನಗರದ  ಬಂಜಾರಾ ಹಿಲ್ಸ್‌ನ ರಸ್ತೆಯ  ಲುಂಬಿನಿ ರಾಕ್ ಕ್ಯಾಸಲ್ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿರುವ ಶೋಭನಾ ಎಂಬುವವರ ಮನೆಗೆ ಆಹಾರ ಡೆಲಿವರಿ ಮಾಡಲು ಹೋಗಿದ್ದರು. ಆಹಾರವನ್ನು ಮನೆಯವರಿಗೆ ನೀಡುತ್ತಿದ್ದ ವೇಳೆ ಮನೆ ಯವರ ಸಾಕುನಾಯಿ ಓಡಿ ಬಂದು ರಿಜ್ವಾನ್ ಮೇಲೆ ಹಾರಿದ್ದು, ಇದರಿಂದ ಹೆದರಿದ ರಿಜ್ವಾನ್ ನಾಯಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಹಾರಿದ್ದಾರೆ. 

ನಾಯಿ ದಾಳಿಯ ಮತ್ತೊಂದು ಭಯಾನಕ ವಿಡಿಯೋ ವೈರಲ್: ಹಸುವನ್ನು ಕಚ್ಚಿ ಎಳೆದಾಡಿದ ಪಿಟ್ಬುಲ್ ಶ್ವಾನ

ಇದರಿಂದ ಅವರಿಗೆ ಗಂಭೀರ ಗಾಯಗಳಾಗಿದೆ. ಕೂಡಲೇ ಶೋಭನಾ ಹಾಗೂ ಅಕ್ಕಪಕ್ಕದ ಮನೆಯವರು ಯುವಕನನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಆತನ ತಲೆಗೆ ಗಂಭೀರ ಗಾಯವಾಗಿದ್ದು,  ಆತನಿಗಿನ್ನು ಪ್ರಜ್ಞೆ ಬಂದಿಲ್ಲ ಎಂದು ಹೇಳಿದ್ದಾರೆ.  ಜನವರಿ 11 ರಂದು ಬುಧವಾರ ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗುರುವಾರ ಜ.12 ರಂದು ರಿಜ್ವಾನ್ ಸಹೋದರ ಮನೆ ಮಾಲಕಿ ಶೋಭನಾ ವಿರುದ್ಧ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 ರ ಅಡಿ ಶೋಭನಾ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಿದ್ದಾರೆ.
 

click me!