ಮಧ್ಯಪ್ರದೇಶದ ರೈತನಿಗೆ ಒಲಿದ ಅದೃಷ್ಟ: ಜಮೀನಲ್ಲಿ ಸಿಕ್ತು 20 ಲಕ್ಷ ಮೌಲ್ಯದ ವಜ್ರ

By Anusha KbFirst Published Jan 14, 2023, 11:17 AM IST
Highlights

ಮಧ್ಯಪ್ರದೇಶದ ಪನ್ನಾ ಜಿಲ್ಲೆಯೂ ವಜ್ರ ನಿಕ್ಷೇಪದ ತಾಣವಾಗಿದ್ದು, ಇಲ್ಲಿನ ರೈತರೊಬ್ಬರಿಗೆ ಈಗ 4.38 ಕ್ಯಾರೆಟ್‌ನ ವಜ್ರವೊಂದು ಸಿಕ್ಕಿದೆ.  ಇದರ ಮೌಲ್ಯ 20 ಲಕ್ಷವಾಗಿದೆ.

ಭೋಪಾಲ್: ಮಧ್ಯಪ್ರದೇಶದ ಪನ್ನಾ ಜಿಲ್ಲೆಯೂ ವಜ್ರ ನಿಕ್ಷೇಪದ ತಾಣವಾಗಿದ್ದು, ಇಲ್ಲಿನ ರೈತರೊಬ್ಬರಿಗೆ ಈಗ 4.38 ಕ್ಯಾರೆಟ್‌ನ ವಜ್ರವೊಂದು ಸಿಕ್ಕಿದೆ.  ಇದರ ಮೌಲ್ಯ 20 ಲಕ್ಷವಾಗಿದೆ. ಇಂದ್ರಜಿತ್ ಸರ್ಕಾರ್ ಎಂಬುವವರೇ ಹೀಗೆ ಅದೃಷ್ಟ ಖುಲಾಯಿಸಿದ  ರೈತ. ಇವರು ತಮ್ಮ ಜಮೀನಿನಲ್ಲಿ ಮುಂಜಾನೆ ವಾಯು ವಿಹಾರಕ್ಕೆ ಹೋಗುತ್ತಿದ್ದಾಗ ಇವರಿಗೆ ಹೊಳೆಯುತ್ತಿರುವ ಕಲ್ಲಿನಂತಹ ವಸ್ತು ಕಣ್ಣಿಗೆ ಬಿದ್ದಿದೆ. 

ಪನ್ನಾದ (Panna) ವಸುಂಧರ ರತ್ನಗರ್ಭ (Vasundhara Ratnagarbha Area) ಪ್ರದೇಶದಲ್ಲಿ ಈ ವಜ್ರ ಸಿಕ್ಕಿದೆ.  ಹೊಳೆಯುತ್ತಿರುವ ಅಮೂಲ್ಯ ಕಲ್ಲನ್ನು ಅವರು ತೆಗೆದುಕೊಂಡು ಹೋಗಿ ವಜ್ರ ಮಾಪನ ಹಾಗೂ ತಪಾಸಣೆ ಮಾಡುವ ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ.  ಅಲ್ಲಿ ಅಧಿಕಾರಿಗಳು ಇವರಿಗೆ ಇದೊಂದು ರತ್ನದ ಗುಣಮಟ್ಟದ ಅಮೂಲ್ಯ ವಜ್ರವಾಗಿದ್ದು, ಇದಕ್ಕೆ ಪ್ರತಿ ಕ್ಯಾರೆಟ್‌ಗೆ ಒಳ್ಳೆಯ ಬೆಲೆಗೆ ಮಾರಾಟವಾಗಲಿದೆ ಎಂದು ಹೇಳಿದ್ದಾರೆ ಎಂದು ರೈತ ಇಂದ್ರಜಿತ್ ಸರ್ಕಾರ್ (Indrajith sarkar) ಹೇಳಿದ್ದಾರೆ. 

ಪನ್ನಾದಲ್ಲಿ ಮಹಿಳೆಗೆ ಸಿಕ್ತು ರತ್ನ: ಗಣಿಯಲ್ಲಿ ಹೊಳೆದ 2.08 ಕ್ಯಾರೆಟ್ ವಜ್ರ

ಡೈಮಂಡ್ ಗಣಿಯ ಹಳೆಯ ಮಣ್ಣಿನ ರಾಶಿಯಲ್ಲಿ ಅವರಿಗೆ ಏನೋ  ಹೊಳೆದಂತೆ ಕಾಣಿಸಿದೆ. ಕೂಡಲೇ ಅವರು ಹೊಳೆಯುತ್ತಿರುವ ವಸ್ತುವನ್ನು ಎತ್ತಿಕೊಂಡು ಪರಿಶೀಲಿಸಿದಾಗ ಅವರಿಗೆ ಇದು ಡೈಮಂಡ್ ಎಂಬುದು ಗೊತ್ತಾಗಿದೆ.  ಈ ಡೈಮಂಡ್ ಅನ್ನು ತೂಕ ಮಾಡಿದಾಗ 4.38 ಕ್ಯಾರೆಟ್ ತೂಗುತ್ತಿದ್ದು, 20 ಲಕ್ಷ ರೂಪಾಯಿ ಮೌಲ್ಯಕ್ಕೆ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ. 

ಸರ್ಕಾರ್ ಸೇರಿದಂತೆ ಒಟ್ಟು 100 ಜನ ಅಳವಿಲ್ಲದ ಡೈಮಂಡ್ ಗಣಿಯನ್ನು ಗುತ್ತಿಗೆಗೆ ಪಡೆದಿದ್ದು, ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.  ಆದರೆ ಲೀಸ್‌ಗೆ ಪಡೆದು ಒಂದು ವರ್ಷವಾಗಿದ್ದರೂ ಅವರಿಗೆ ಇದುವರೆಗೆ ವಜ್ರ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಅವರಿಗೆ ಈಗ ವಜ್ರ ಸಿಕ್ಕಿದ್ದು, ಈ ಡೈಮಂಡ್ ಅನ್ನು ಡಿಪಾಸಿಟ್ ಇಟ್ಟು ನಂತರ ಹರಾಜಿಗೆ ಹಾಕಲಾಗುತ್ತದೆ. ನಂತರ ಟ್ಯಾಕ್ಸ್  ಹಣ ಕಡಿತಗೊಳಿಸಿ  ಉಳಿದ ಹಣವನ್ನು ಸರ್ಕಾರ್ ಅವರಿಗೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಧ್ಯಪ್ರದೇಶದ ಪನ್ನಾದಲ್ಲಿ ರೈತರಿಗೆ ವಜ್ರ ಸಿಗುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಇಲ್ಲಿ ವಜ್ರ ಸಿಕ್ಕಿ ರಾತ್ರೋರಾತ್ರಿ ಶ್ರೀಮಂತರಾದ ಹಲವು ಘಟನೆಗಳು ನಡೆದಿವೆ. 

ಮಧ್ಯಪ್ರದೇಶದ ರೈತನಿಗೆ ಒಲಿದ ಅದೃಷ್ಟ, ಗುತ್ತಿಗೆ ಗಣಿಯಲ್ಲಿ ಸಿಕ್ತು 12 ಕ್ಯಾರಟ್ ವಜ್ರ!

click me!