2006ರಿಂದ ದೆಹಲಿಯಲ್ಲಿ ವಾಸ, ಮೌಲ್ವಿ ವೇಷ, ಪಾಕಿಸ್ತಾನ ಉಗ್ರನ ಬಂಧನ!

By Suvarna NewsFirst Published Oct 12, 2021, 5:08 PM IST
Highlights
  • ದೆಹಲಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
  • ಪಾಕಿಸ್ತಾನ ಭಯೋತ್ಪಾದಕನ ಬಂಧಿಸಿದ ದೆಹಲಿ ಪೊಲೀಸ್
  • 15 ವರ್ಷದಿಂದ ಭಾರತದಲ್ಲಿ ಬೀಡು ಬಿಟ್ಟಿದ್ದ ಉಗ್ರ
  • ಮೌಲ್ವಿಯಾಗಿ ವೇಷ, ಯುವಕರನ್ನು ಭಯೋತ್ಪಾದನೆಗೆ ಪ್ರಚೋದಿಸುವ ಕೆಲಸ

ನವದೆಹಲಿ(ಅ.12): ದೇಶದ ಗಡಿಯಲ್ಲಿ ಉಗ್ರರ(Terrorism) ಒಳನುಸುಳುವಿಕೆ ಹೆಚ್ಚಾಗಿದೆ. ಹೀಗೆ ಭಾರತದ ಗಡಿ(Indian Border) ದಾಡಿದ ಉಗ್ರರ ವಿರುದ್ಧ ಪೂಂಚ್‌ ಸೆಕ್ಟರ್‌ನಲ್ಲಿ(poonch Encounter) ನಡೆದ ಕಾರ್ಯಾಚರಣೆಯಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ಬೆನ್ನಲ್ಲೇ ಮತ್ತೊಂದು ಬೆಚ್ಚಿ ಬೀಳಿಸುವ ಮಾಹಿತಿ ಹೊರಬಿದ್ದಿದೆ. ಕಳೆದ 15 ವರ್ಷದಿಂದ ದೆಹಲಿಯಲ್ಲಿ ನೆಲೆಯೂರಿದ್ದ ಪಾಕಿಸ್ತಾನದ (Pakistan) ಭಯೋತ್ಪಾದಕನನ್ನು ದೆಹಲಿ ಪೊಲೀಸರು(Delhi Police) ಬಂಧಿಸಿದ್ದಾರೆ.

Poonch encounter;ಉಗ್ರರ ದಾಳಿಗೆ ಸೇನಾಧಿಕಾರಿ ಸೇರಿ ಐವರು ಯೋಧರು ಹುತಾತ್ಮ!

ದೆಹಲಿ ಪೊಲೀಸರ ನಡೆಸಿದ ಕಾರ್ಯಾಚರಣೆಯಲ್ಲಿ ಈ ಉಗ್ರ ಅರೆಸ್ಟ್(Arrest) ಆಗಿದ್ದಾರೆ.  ಈ ಮೂಲಕ ಭಾರತದಲ್ಲಿ ಬಹುದೊಡ್ಡ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಹಾಕಿದ್ದ ಉಗ್ರನ ಎಲ್ಲಾ ಲೆಕ್ಕಾಚಾರವನ್ನು ದೆಹಲಿ ಪೊಲೀಸರು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿಸಿದ ಉಗ್ರನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊಹಮ್ಮದ್ ಅಶ್ರಫ್ ಅಲಿಯಾಸ್ ಅಲಿ ಎಂದು ಗುರುತಿಸಲಾಗಿದೆ. ಈತನ ಬಳಿ ಭಾರತದ ಎಲ್ಲಾ ನಕಲಿ ದಾಖಲೆಗಳಿವೆ. 2006ರಲ್ಲಿ ಭಾರತಕ್ಕೆ ಬಂದ ಈತ ದೆಹಲಿಯ(Delhi) ಹಲವು ಭಾಗಗಳಲ್ಲಿ ವಾಸವಾಗಿದ್ದ. ಬಳಿಕ ಲಕ್ಷ್ಮಿ ನಗರದಲ್ಲಿ ನೆಲೆಯೂರಿದ್ದ. ಭಾರತದಲ್ಲಿ ಈತನ ಹೆಸರು ಅಲಿ ಅಹಮ್ಮದ್ ನೂರಿ ಎಂದು ಬದಲಾಯಿಸಿಕೊಂಡು ನಕಲಿ ದಾಖಲೆ ಮಾಡಿದ್ದ. 

ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಹೈಬ್ರಿಡ್‌ ಭಯೋತ್ಪಾದಕರ ಬಳಕೆ!

ಭಾರತೀಯಳನ್ನು ಮದುವೆಯಾಗಿದ್ದ ಈತ ಬಳಿಕ ಆಕೆಯಿಂದ ದೂರವಾಗಿ ಮೌಲ್ವಿಯಾಗಿ ವೇಷ ತೊಟ್ಟು ತನ್ನ ಭಯೋತ್ಪಾದನೆ ಕಾರ್ಯ ಮುಂದುವರಿಸಿದ್ದ. ಭಾರತದಲ್ಲಿ ಯುವಕರನ್ನು ಸಜ್ಜಗೊಳಿಸಿ ಇಲ್ಲಿನ ಪ್ರತಿಯೊಂದು ಮಾಹಿತಿಯನ್ನು ಪಾಕಿಸ್ತಾನ ISIಗೆ ರವಾನಿಸುತ್ತಿದ್ದ. ಈ ಕುರಿತು ಆತನ ಮೊಬೈಲ್‌ಲ್ಲಿ ISIಜೊತೆ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ.

ಶ್ರೀನಗರದಲ್ಲಿ ಉಗ್ರರ ಕ್ರೌರ್ಯ: ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕನ ಹತ್ಯೆ!

ಹಲವು ಸಿಮ್ ಕಾರ್ಡ್, ಮೊಬೈಲ್ ಫೋನ್ ಸೇರಿದಂತೆ ಕೆಲ ದಾಖಲೆಗಳನ್ನು ಉಗ್ರನಿಂದ ವಶಪಡಿಸಿಕೊಳ್ಳಲಾಗಿದೆ. ಮೌಲ್ವಿಯಾಗಿ ವೇಷ ತೊಟ್ಟಿದ್ದ ಈತ ಕಳೆದ 10 ವರ್ಷಕ್ಕೂ ಹೆಚ್ಚು ಸಮಯ ಯುವಕರನ್ನು ಭಯೋತ್ಪಾದನೆಗೆ ಪ್ರಚೋದಿಸುವ ಕೆಲಸ ಮಾಡುತ್ತಿದ್ದ. ಈ ವೇಳೆ ಭಾರತದ ಪ್ರಮುಖ ಸ್ಥಳಗಳು, ಮಿಲಿಟರಿ ಕ್ಯಾಂಪ್, ಮಿಲಿಟರಿ ಬೇಸ್ ಕುರಿತು ಮಾಹಿತಿಗಳನ್ನು ISIಗೆ ರವಾನಿಸಿವುದು ಈತನ ಕೆಲಸವಾಗಿತ್ತು. 

ಬಂಧನದ ವೇಳೆ ಈತನ ಮನೆಯಿಂದ ಎಕೆ47 ಗನ್,  2 ಹ್ಯಾಂಡ್ ಗ್ರೇನೇಡ್, 2 ಪಿಸ್ತೂಲ್  ಸೇರಿದಂತೆ ಹಲವು ಶಸ್ತಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ದೆಹಲಿ ವಿಶೇಷ ದಳದ ಡೆಪ್ಯೂಟಿ ಪೊಲೀಸ್ ಕಮಿಷನರ್ ಪ್ರಮೋದ್ ಕುಶ್ವಾ ಹೇಳಿದ್ದಾರೆ. 

ನಾನು ಲಷ್ಕರ್‌ ಉಗ್ರ, ಪಾಕಿಸ್ತಾನ ಸೇನೆಯೇ ನನಗೆ ತರಬೇತಿ ನೀಡಿದೆ!

ಸೆಪ್ಟೆಂಬರ್ 14 ರಂದು ದೆಹಲಿ ಪೊಲೀಸರು ಪಾಕಿಸ್ತಾನದ  ಎಳು ISI ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ಈ ಘಟನೆ ಬಳಿಕ ಇದೀಗ ಪಾಕಿಸ್ತಾನದ ಉಗ್ರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 

ದೆಹಲಿ ಸೇರಿದಂತೆ ವಿವಿಧ ಭಾಗಗಳಲ್ಲಿ ದಾಳಿ ನಡೆಸಲು ಪಾಕಿಸ್ತಾನ ISI ಮಹತ್ವದ ಸೂಚನೆ ನೀಡಿತ್ತು. ಇದಕ್ಕಾಗಿ ಕಳೆದ 15 ವರ್ಷಗಳಿಂದ ಈ ಉಗ್ರ ಭಾರತದಲ್ಲಿ ಭಯೋತ್ಪಾದಕರ ಪಡೆಯನ್ನು ಸಜ್ಜುಗೊಳಿಸುತ್ತಿದ್ದ. ಮೌಲ್ವಿ ವೇಷದಲ್ಲಿದ್ದುಕೊಂಡು ಈತ ಎಲ್ಲಾ ಉಗ್ರ ಚಟುವಟಿಕೆಯನ್ನು ಸುಲಭವಾಗಿ ಮಾಡಿ ಮುಗಿಸುತ್ತಿದ್ದ. 

click me!