ನವದೆಹಲಿ(ಅ.12): ಕೊರೋನಾ(Coronavirus) ವಿರುದ್ಧದ ಹೋರಾಟದಲ್ಲಿ ಭಾರತ ದಿಟ್ಟ ಹೆಜ್ಜೆ ಇಡುತ್ತಿದೆ. ಲಸಿಕೆ (Vaccine)ಅಭಿಯಾನ ಅತೀವೇಗದಲ್ಲಿ ನಡೆಯುತ್ತಿದೆ. ಇದೀಗ 2 ರಿಂದ 18 ವರ್ಷದವರಿಗೆ ಲಸಿಕೆ ನೀಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಕೋವಾಕ್ಸಿನ್(Covaxin) ಲಸಿಕೆಯನ್ನು 2 ರಿಂದ 18 ವರ್ಷವದವರಿಗೆ ನೀಡಬಹುದು ಎಂದು ತಜ್ಞ ವೈದ್ಯರ ಸಮಿತಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ( (DCGI)ಗೆ ಶಿಫಾರಸು ಮಾಡಿದೆ.
ದೇಶೀಯ ಕೋವ್ಯಾಕ್ಸಿನ್‌ಗೆ ಈ ವಾರ ಡಬ್ಲ್ಯುಎಚ್‌ಒ ಅನುಮೋದನೆ ಸಾಧ್ಯತೆ!
ಮಕ್ಕಳಿಗೆ(Children) ಕೋವಾಕ್ಸಿನ್ ಲಸಿಕೆ ಪ್ರಯೋಗ ನಡೆಸಿದ ಭಾರತ್ ಬಯೋಟೆಕ್(Bharat Biotech) ಸಂಸ್ಥೆ 2/3 ಫೇಸ್ ಕ್ಲಿನಿಕಲ್ ಟ್ರೆಯಲ್ ಯಶಸ್ವಿಯಾಗಿ ಮುಗಿಸಿದೆ. ಲಸಿಕೆ ಪ್ರಯೋಗದ ಸಂಪೂರ್ಣ ವರದಿಯನ್ನು ಭಾರತ್ ಬಯೋಟೆಕ್ ಸಂಸ್ಥೆ ಸಲ್ಲಿಸಿದೆ. ಈ ವರದಿ ಆಧರಿಸಿ ತಜ್ಞರ ಸಮಿತಿ DCGIಗೆ ಮಕ್ಕಳಿಗೆ ಕೋವಾಕ್ಸಿನ್ ನೀಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ.
DCGI ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಿದೆ. 3 ಹಂತದಲ್ಲಿ ಕ್ಲಿನಿಕಲ್ ಟ್ರೆಯಲ್ ನಡೆಸಲಾಗಿದೆ. ಈ ಪ್ರಯೋಗದಲ್ಲಿ ಮಕ್ಕಳಲ್ಲಿ ಇಮ್ಯುನಿಟಿ ಹೆಚ್ಚಿಸಲು ಲಸಿಕೆ ನೆರವಾಗಿದೆ. ಯಾವುದೇ ಅಡ್ಡಪರಿಣಾಣಗಳು ಕಂಡು ಬಂದಿಲ್ಲ. ಹೀಗಾಗಿ ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಡೆಲ್ಟಾ ಪ್ಲಸ್ ಆತಂಕ ಬೇಡ, ಅಪಯಕಾರಿ ವೈರಸ್‌ಗೆ ಕೋವಾಕ್ಸಿನ್ ಪರಿಣಾಮಕಾರಿ; ICMR!
ಮೊದಲ ಹಂತದಲ್ಲಿ 12 ರಿಂದ 18 ವರ್ಷ ವಯಸ್ಸಿನವರ ಮೇಲೆ ಕೋವಾಕ್ಸಿನ ಪ್ರಯೋಗಿಸಿಲಾಗಿತ್ತು, 2ನೇ ಹಂತದಲ್ಲಿ 6 ರಿಂದ 12 ವರ್ಷ ಮಕ್ಕಳ ಮೇಲೆ ಪ್ರಯೋಗ ಮಾಡಲಾಯಿತು. ಇನ್ನು ಮೂರನೇ ಹಂತದಲ್ಲಿ 2 ವರ್ಷದಿಂದ 6 ವರ್ಷದ ಮಕ್ಕಳ ಮೇಲೆ ಕೋವಾಕ್ಸಿನ್ ಲಸಿಕೆ ಪ್ರಯೋಗಿಸಿ ಸಂಪೂರ್ಣ ಪರೀಕ್ಷೆ ನಡೆಸಲಾಗಿದೆ.
ಈ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಹೊರಬಿದ್ದಿದೆ. ಇದೀಗ ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್ ವರದಿ ಶೀಘ್ರದಲ್ಲೇ ಹೊರಬೀಳಲಿದೆ. ತುರ್ತು ಬಳಕೆಗೆ ಅನುಮತಿ ನೀಡಬಹುದು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.
2-6 ವರ್ಷದೊಳಗಿನ ಮಕ್ಕಳಿಗೆ ಮುಂದಿನ ವಾರದಿಂದ ಕೋವಾಕ್ಸಿನ್ 2ನೇ ಡೋಸ್ ಟ್ರಯಲ್!
ಕೋವಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR)ಸಯೋಹಗದಲ್ಲಿ ಲಸಿಕೆ ಅಭಿವೃದ್ಧಿ ಪಡಿಸಿದೆ. 18 ವರ್ಷ ಮೇಲ್ಪಟ್ಟವರಿಗೆ ಭಾರತದಲ್ಲಿ ಯಶಸ್ವಿಯಾಗಿ ಕೊವಾಕ್ಸಿನ್ ಲಸಿಕೆ ಹಾಕಲಾಗಿದೆ. ಇದೀಗ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಶೀಘ್ರದಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ.
ಭಾರತದಲ್ಲಿ ಲಸಿಕಾ ಅಭಿಯಾನ:
ಜನವರಿ 16 ರಿಂದ ಭಾರತದಲ್ಲಿ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಕೋವಿಡ್ ವಾರಿಯರ್ಸ್ ಹಾಗೂ ಫ್ರಂಟ್‌ಲೈನ್ ವರ್ಕಸ್‌ಗೆ ಕೋವಿಡ್ ಲಸಿಕೆ ನೀಡಲಾಯಿತು. ಎರಡನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು. ಬಳಿಕ 45 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಸೆ ಎದುರಿಸುತ್ತಿರುವರಿಗೆ ಲಸಿಕೆ ನೀಡಲಾಯಿತು. ಜೂನ್ 21 ರಿಂದ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ಹೆಚ್ಚಿಸಲಾಯಿತು.
ಡೆಲ್ಟಾವೈರಸ್ ವಿರುದ್ಧ ಕೋವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ? ಅಂತಿಮ ವರದಿ ಬಹಿರಂಗ!
18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲು ಕೇಂದ್ರ ಸರ್ಕಾರ ಘೋಷಿಸಿತು. ಇದೀಗ ಈ ಲಸಿಕಾ ಅಭಿಯಾನ 95 ಕೋಟಿ ಡೋಸ್ ಲಸಿಕೆ ನೀಡಿದೆ. ಈ ಮೂಲಕ ದೇಶದಲ್ಲಿ ಎಲ್ಲರಿಗೂ ಲಸಿಕೆ ನೀಡುವ ಕಾರ್ಯಕ್ಕೆ ಕೇಂದ್ರ ಸರ್ಕಾರ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದೆ.