ಕೊರೋನಾದಿಂದಾಗಿ ಮಗನ ಕೆಲಸ ಹೋಯ್ತು | ಕುಟುಂಬ ಸಾಕಲು ಮತ್ತೆ ಕೆಲಸ ಆರಂಭಿಸಿದ 73ರ ವೃದ್ಧ
ಅಹಮದಾಬಾದ್(ಮೇ.06): 73 ವರ್ಷದ ಜೀವರಾಜ್ ಪಟ್ಟಾನಿ ಆಕ್ಸಿಜನ್ ಪ್ಲಾಂಟ್‌ನಲ್ಲಿ ಕೆಲಸ ಮಾಡೋ ವೃದ್ಧ. ''ಇದು ಕಷ್ಟದ ಸಮಯ, ಎಲ್ಲರೂ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಕೊರೋನಾ ತನ್ನ ಹಿಡಿತ ಬಿಗಿ ಮಾಡುತ್ತಿದೆ. ಸದ್ಯದಲ್ಲಂತೂ ಈ ಹಿಡಿತ ಬಿಡುವಂತೆ ಕಾಣುತ್ತಿಲ್ಲ...'' 500 ಲೀಟರ್ ಆಕ್ಸಿಜನ್ ಸಿಲಿಂಡರ್ ತುಂಬಿಸುತ್ತಾ ಹೀಗನ್ನುತ್ತಾರೆ ಪಟ್ಟಾನಿ.
50 ವರ್ಷಗಳ ಕಾಲ ದುಡಿದ ಇವರು 60ನೇ ವಯಸ್ಸಿನಲ್ಲಿ ನಿವೃತ್ತಿಯಾಗಿದ್ದರು. ನಿವೃತ್ತಿಯಾಗಿ 13 ವರ್ಷದ ನಂತರ ಮತ್ತೆ ಕೆಲಸಕ್ಕೆ ಮರಳಿದ್ದಾರೆ ಪಟ್ಟಾನಿ. ನನ್ನ ಮಗ ಎಂಎ ಓದಿದ್ದಾನೆ. ಆದರೆ ಕೊರೋನಾದಿಂದಾಗಿ ಅವನು ಕೆಲಸ ಕಳೆದುಕೊಂಡ. ನಮ್ಮನೆಯಲ್ಲಿ 7 ಜನರ ಹೊಟ್ಟೆ ತುಂಬಿಸಬೇಕಾಗಿದೆ. ನಾನು ಮತ್ತೆ ನಾನು ಕೆಲಸ ಮಾಡುತ್ತಿದ್ದವರನ್ನು ಸಂಪರ್ಕಿಸಿ ಕೆಲಸ ಪಡೆದೆ ಎಂದಿದ್ದಾರೆ.
ಆರಂಭದಲ್ಲೇ ಸ್ಟಿರಾಯ್ಡ್ ಬಳಕೆಯಿಂದ ರೋಗಿಗಳಲ್ಲಿ ಆಕ್ಸಿಜನ್ ಕುಸಿತ: ಗುಲೇರಿಯಾ
ಪ್ರತಿದಿನ 400 ರಿಂದ 450 ಸಿಲಿಂಡರ್ ಫಿಲ್ ಮಾಡುತ್ತಾರೆ ಇವರು. ಖಂಡಿತವಾಗಿಯೂ ಕೆಲಸದ ಹೊರೆ ಹೆಚ್ಚಾಗಿದೆ. ಆಕ್ಸಿಜನ್ ಫಿಲ್ಲಿಂಗ್ ಸ್ಟೇಷನ್ ಹೊರಗಡೆ ಉದ್ದುದ್ದದ ಕ್ಯೂಗಳಿರುತ್ತವೆ. ನಾವು ನಮ್ಮಿಂದಾದಷ್ಟು ಮಟ್ಟಿಗೆ ಕೆಲಸ ಮಾಡುತ್ತೇವೆ, ಯಾರೂ ಆಕ್ಸಿಜನ್ ಸಿಗದೆ ಸಾಯುವಂತಾಗಬಾರದು ಎಂಬುದೇ ನಮ್ಮ ಕಾಳಜಿ ಎಂದಿದ್ದಾರೆ.
ನಾನು 1970ರಲ್ಲಿ ಕೆಲಸ ಆರಂಭಿಸಿದೆ. ಆಗ ಕೆಲಸ ಭಿನ್ನವಾಗಿತ್ತು. ತಂತ್ರಜ್ಞಾನವೂ ಭಿನ್ನವಾಗಿತ್ತು. ಈಗ ಸಂಪೂರ್ಣ ಮೆಷಿನ್ ಪ್ರಕ್ರಿಯೆ. ಕೆಲವೊಮ್ಮೆ ಸುಸ್ತಾಗಿ ಬಿಡುತ್ತದೆ. ಆಗೆಲ್ಲಾ ನಾನು ತುಂಬಿಸುವ ಪ್ರತಿ ಸಿಲಿಂಡರ್ ಯಾರದೋ ಒಬ್ಬರ ಜೀವ ತುಂಬಿಸುತ್ತದೆ ಎಂಬುದು ನೆನಪಾಗುತ್ತದೆ ಎಂದಿದ್ದಾರೆ.
ವಾಣಿಜ್ಯ ನಗರಿ ಮುಂಬೈ ಕೊರೋನಾ ಸುನಾಮಿ ಗೆದ್ದಿದ್ದು ಹೇಗೆ? ಆಯುಕ್ತ ಬಿಚ್ಚಿಟ್ಟ ಸೀಕ್ರೆಟ್!
ಕಳೆದೊಂದು ವರ್ಷದಲ್ಲಿ ಬಹಳಷ್ಟು ಪ್ರೀತಿಪಾತ್ರರನ್ನು ಕೊರೋನಾದಿಂದ ಕಳೆದುಕೊಂಡಿದ್ದೇನೆ. ಇದು ನನ್ನನ್ನು ಹೆಚ್ಚು ಆಧ್ಯಾತ್ಮಿಕದತ್ತ ಸೆಳೆದಿದೆ. ನಾನು ಸಾಮಾಜಿಕ ಸಂಘಟನೆಯೊಂದಿಗೂ ಕೈಜೋಡಿಸಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona