ಮನೆಯ ಹೊರಗೆ ನಿಂತ 7 ತಲೆಯ ಶೇಷನಾಗ ಸರ್ಪದ ವಿಡಿಯೋ ವೈರಲ್, 'ಜೈ ವಿಷ್ಣು ಭಗವಾನ್' ಎಂದ ಜನ

Published : Feb 04, 2026, 04:07 PM IST
Sheshnag viral video

ಸಾರಾಂಶ

Sheshnag Viral Video: ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಹಾವು ಹೆಡೆ ಎತ್ತಿ ನಿಂತಿರುವ ದೃಶ್ಯವನ್ನು ರೆಕಾರ್ಡ್ ಮಾಡುವುದನ್ನು ಸಹ ಕಾಣಬಹುದು. ಇದರಿಂದ ವಿಡಿಯೋ ಮತ್ತಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡಿದೆ. 

ನೆಯ ಹೊರಗೆ ದೊಡ್ಡ ಹಾವಿನಂತಹ ಜೀವಿ ನಿಂತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನೇಕ ಜನರು ಇದನ್ನು "ಶೇಷನಾಗ" ಎಂದು ಕರೆಯುತ್ತಿದ್ದಾರೆ. ಈ ವಿಡಿಯೋವನ್ನ ಧಾರ್ಮಿಕ ಭಾವನೆಗಳನ್ನ ಉಲ್ಲೇಖಿಸಿ ಹಂಚಿಕೊಳ್ಳುತ್ತಿದ್ದಾರೆ. ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಹಾವು ಹೆಡೆ ಎತ್ತಿ ನಿಂತಿರುವ ದೃಶ್ಯವನ್ನು ರೆಕಾರ್ಡ್ ಮಾಡುವುದನ್ನು ಸಹ ಕಾಣಬಹುದು. ಇದರಿಂದ ವಿಡಿಯೋ ಮತ್ತಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಆದರೆ ಈ ವಿಡಿಯೋದ ಸ್ಥಳ ಅಥವಾ ಸಮಯದ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಬಿಡುಗಡೆ ಮಾಡಲಾಗಿಲ್ಲ.

ವೈರಲ್ ಆಗಿರುವ "ಶೇಷನಾಗ"ನ ಈ ವಿಡಿಯೋವನ್ನು @JitendraEci ಎಂಬ ಬಳಕೆದಾರರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಮನೆಯ ಹೊರಗೆ ದೊಡ್ಡ ಶೇಷನಾಗನನ್ನ ತೋರಿಸಲಾಗಿದೆ. ಅಷ್ಟೇ ಅಲ್ಲ, "ಶೇಷನಾಗನ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಭಗವಾನ್ ವಿಷ್ಣು ವಿಶ್ವವನ್ನು ಸಮತೋಲನಗೊಳಿಸುತ್ತಿದ್ದಾನೆ. ಜೈ ವಿಷ್ಣು ಭಗವಾನ್" ಎಂಬ ಶೀರ್ಷಿಕೆ ವೀಕ್ಷಕರ ಗಮನವನ್ನು ಮತ್ತಷ್ಟು ಸೆಳೆದಿದೆ. ಇದೇ ಕಾರಣಕ್ಕೆ ವಿಡಿಯೋ ಬಹಳ ಬೇಗ ವೈರಲ್ ಆಯಿತು. ಜನರು ಈಗಲೂ ಶೇರ್ ಮಾಡುತ್ತಲೇ ಇದ್ದಾರೆ.

ಬಳಕೆದಾರರ ಪ್ರತಿಕ್ರಿಯೆಗಳೇನು?

ವಿಡಿಯೋಗೆ ಬಂದಿರುವ ಜನರ ಪ್ರತಿಕ್ರಿಯೆಗಳು ಸಹ ಆಸಕ್ತಿದಾಯಕವಾಗಿವೆ. ಕೆಲವು ಬಳಕೆದಾರರು ಇದನ್ನು ಪವಾಡ ಎಂದು ಕರೆದರೆ, ಮತ್ತೆ ಕೆಲವರು "ಜೈ ಶ್ರೀ ಹರಿ ವಿಷ್ಣು!" ಎಂದಿದ್ದಾರೆ. ಆದರೆ ಇತರರು ಇದು ನಿಜವೇ ಎಂದು ಪ್ರಶ್ನಿಸುತ್ತಿದ್ದಾರೆ. ಹೆಚ್ಚಿನವರು ಭಾವನಾತ್ಮಕವಾಗಿ ಕಾಮೆಂಟ್‌ ಮಾಡಿ ಪೋಸ್ಟ್ ಮಾಡಿ, ಇದನ್ನು ದೇವರ ಮಹಿಮೆಗೆ ಲಿಂಕ್ ಮಾಡಿದ್ದಾರೆ. ಏತನ್ಮಧ್ಯೆ ಕೆಲವು ಬಳಕೆದಾರರು ಇದನ್ನು AI ಅಥವಾ ಎಡಿಟಿಂಗ್ ವರ್ಕ್? ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

ಹಾಗಾದರೆ ವಿಡಿಯೋದ ಸತ್ಯಾಸತ್ಯತೆ ಏನು?

ವಿಡಿಯೋದ ಸತ್ಯಾಸತ್ಯತೆಯ ಕುರಿತು ಪ್ರಸ್ತುತ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಸ್ಥಳವು ಕೂಡ ಸ್ಪಷ್ಟವಾಗಿಲ್ಲ ಮತ್ತು ಇದು ನಿಜವಾದ ಘಟನೆಯೋ ಅಥವಾ ಡಿಜಿಟಲ್ ಆಗಿ ರಚಿಸಲಾದ ವಿಡಿಯೋನಾ ಎಂಬುದೂ ಸ್ಪಷ್ಟವಾಗಿಲ್ಲ. ಕೃತಕ ಬುದ್ಧಿಮತ್ತೆ ಮತ್ತು ಗ್ರಾಫಿಕ್ಸ್‌ನಿಂದ ಇಂತಹ ವಿಡಿಯೋಗಳನ್ನ ಸುಲಭವಾಗಿ ಕ್ರಿಯೇಟ್ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಒಟ್ಟಿನಲ್ಲಿ ವಿಡಿಯೋ ನೋಡಿದ ಜನರು ಕನ್‌ಫ್ಯುಸ್ ಆಗಿದ್ದು, ವೈರಲ್ ವಿಷಯದ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ. ಇಂತಹ ವಿಡಿಯೋಗಳು ಸಾಮಾನ್ಯವಾಗಿ ಭಾವನೆಗಳನ್ನು ಆಕರ್ಷಿಸುತ್ತವೆ. ಒಂಚೂರು ಚೆಕ್ ಮಾಡದೆ ವೇಗವಾಗಿ ಹರಡುತ್ತವೆ. ಆದ್ದರಿಂದ ಯಾವುದೇ ವೈರಲ್ ವಿಡಿಯೋ ನಂಬುವ ಮೊದಲು ಜನರು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಬಹಳ ಮುಖ್ಯ. ಪ್ರಸ್ತುತ 'ಶೇಷನಾಗ್' ನ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಆದರೆ ಅದರ ಸತ್ಯಾಸತ್ಯತೆಯು ಇನ್ನೂ ಪ್ರಶ್ನಾರ್ಹವಾಗಿದೆ.

ಇಲ್ಲಿದೆ ನೋಡಿ ವಿಡಿಯೋ

ಇಂತಹುದೇ ವಿಡಿಯೋ ಈ ಹಿಂದೆಯೂ ವೈರಲ್ ಆಗಿತ್ತು!
ಈ ಹಿಂದೆಯೂ ಇಂತಹುದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X (ಹಿಂದೆ ಟ್ವಿಟರ್) ನಲ್ಲಿ @PlacesMagi15559 ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿತ್ತು.

ಕೇವಲ 10 ಸೆಕೆಂಡುಗಳ ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದರು. ಈ ಶಾಕಿಂಗ್ ವೈರಲ್ ವಿಡಿಯೋದಲ್ಲಿ ಹೆಲಿಕಾಪ್ಟರ್ ಒಳಗಿನಿಂದ ನದಿಯನ್ನು ಕೆಳಗೆ ನೋಡಲಾಗುತ್ತಿದ್ದು, ಅಲ್ಲಿ ಅನೇಕ ದೈತ್ಯ ಅನಕೊಂಡಗಳು (ಹಾವುಗಳು) ನೀರಿನ ಮೇಲ್ಮೈಯಲ್ಲಿ ಈಜುತ್ತಿರುವುದನ್ನು ಕಾಣಬಹುದಾಗಿತ್ತು. ಈ ದೃಶ್ಯವು ಅಂತರ್ಜಾಲದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು.

ವೈರಲ್ ವಿಡಿಯೋದಲ್ಲಿ ಕಂಡುಬರುವ ದೃಶ್ಯವು ತುಂಬಾ ಭಯಾನಕವಾಗಿ ಕಾಣುವುದಲ್ಲದೆ, ಮೈಯೆಲ್ಲಾ ಪುಳಕವಾಗುವಂತೆ ಮಾಡುತ್ತದೆ. ವಿಡಿಯೋ ನೋಡಿದ ಜನರು ಅದನ್ನು 'ಅನಕೊಂಡ ನದಿ' ಎಂದೇ ಕರೆದರು. ಆದರೆ ನಿಜ ಹೇಳಬೇಕೆಂದರೆ ಈ ಫೋಟೋ ರಿಯಲ್ ಅಲ್ಲ, ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Viral Video: ಮಧ್ಯಾಹ್ನ ನಿದ್ದೆ ಮಲಗಿ ಸಂಜೆ ಎಚ್ಚರಗೊಂಡ ಬಾಲಕ; ಬೆಳಗ್ಗೆ ಆಯ್ತು ಅನ್ಕೊಂಡು ಶಾಲೆಗೆ ಹೊರಟೇಬಿಟ್ಟ!
ಪಾಪ ಹೆಣ್ಮಗಳು ಅಂತ ಅಪರಿಚಿತರಿಗೆ ಸಹಾಯ ಮಾಡುವುದಕ್ಕೆ ಹೋದ ಆಟೋ ಚಾಲಕನಿಗೆ ಏನಾಯ್ತು ನೋಡಿ..!