ಪಾಪ ಹೆಣ್ಮಗಳು ಅಂತ ಅಪರಿಚಿತರಿಗೆ ಸಹಾಯ ಮಾಡುವುದಕ್ಕೆ ಹೋದ ಆಟೋ ಚಾಲಕನಿಗೆ ಏನಾಯ್ತು ನೋಡಿ..!

Published : Feb 04, 2026, 02:52 PM IST
woman trying to cheat Auto driver

ಸಾರಾಂಶ

ಪ್ರಪಂಚದಲ್ಲಿ ಎಂಥೆಂಥಾ ಚಾಲಾಕಿಗಳು ಇರ್ತಾರೆ ನೋಡಿ, ಒಬ್ಬರನ್ನು ಇಲ್ಲಿ ಒಂದು ಕ್ಷಣಕ್ಕೂ ನಂಬಲು ಸಾಧ್ಯವಿಲ್ಲ, ಇವರಿಂದಾಗಿಯೇ ಜನ ನಿಜವಾಗಿಯೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹಿಂದೇಟು ಹಾಕುತ್ತಾರೆ. ಹಾಗೆಯೇ ಇಲ್ಲೊಬ್ಬಳು ಕಷ್ಟದಲ್ಲಿದ್ದೇನೆ ಎಂದು ಹೇಳಿ ಯಾವ ರೀತಿ ಮೋಸ ಮಾಡಲು ಯತ್ನಿಸಿದಳು ನೋಡಿ…

ಆಟೋ ಚಾಲಕನಿಗೆ ಯಾಮಾರಿಸಲು ಯತ್ನಿಸಿದ ಕಿಲಾಡಿ

ಪ್ರಪಂಚದಲ್ಲಿ ಎಂಥೆಂಥಾ ಚಾಲಾಕಿಗಳು ಇರ್ತಾರೆ ನೋಡಿ, ಒಬ್ಬರನ್ನು ಇಲ್ಲಿ ಒಂದು ಕ್ಷಣಕ್ಕೂ ನಂಬಲು ಸಾಧ್ಯವಿಲ್ಲ, ಇವರಿಂದಾಗಿಯೇ ಜನ ನಿಜವಾಗಿಯೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹಿಂದೇಟು ಹಾಕುತ್ತಾರೆ. ಆನ್‌ಲೈನ್ ಪೇಮೆಂಟ್‌ಗಳು ಚಾಲ್ತಿಗೆ ಬಂದ ನಂತರ ದಿನವೂ ಒಂದೊಂದು ಹೊಸ ಹೊಸ ರೀತಿಯ ಸ್ಕ್ಯಾಮ್‌ಗಳು ನಡೆಯುತ್ತಿವೆ. ಹೀಗಾಗಿ ಜನರು ನಿಜವಾಗಿಯೂ ಕಷ್ಟದಲ್ಲಿರುವ ಅಪರಿಚಿತರಿಗೆ ಸಹಾಯ ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ. ಹಾಗೆಯೇ ಇಲ್ಲೊಂದು ಕಡೆ ಯುವತಿಯೊಬ್ಬಳು ಆಟೋ ಚಾಲಕನಿಗೆ ಯಾಮಾರಿಸುವುದಕ್ಕೆ ಹೋಗಿ ಕಡೆಗೂ ಸಿಕ್ಕಿ ಬಿದ್ದಿದ್ದಾಳೆ. ಹೆಣ್ಣಾಗಿ ಜನಿಸಿದ ಕಾರಣ ಬಹುಶಃ ಆಕೆಯನ್ನು ಜನ ಸುಮ್ಮನೇ ಬಿಟ್ಟಿದ್ದಾರೆ. ಒಂದು ವೇಳೆ ಆಕೆ ಮಾಡಿದ ಕೆಲಸವನ್ನೇ ಯಾರಾದರೂ ಪುರುಷರು ಮಾಡಿದ್ದರೆ ಧರ್ಮದೇಟು ಬೀಳುತ್ತಿದ್ದಿದ್ದು ಗ್ಯಾರಂಟಿ... ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅಪರಿಚಿತರನ್ನು ತಕ್ಷಣ ನಂಬಬಾರದು ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆ.

ಬನರಾಸ್‌ನಲ್ಲಿ ಯುವತಿಯೊಬ್ಬಳು ಆಟೋದಲ್ಲಿ ಪಯಣಿಸುತ್ತಿದ್ದಳು. ಕೆಲ ಆಟೋಚಾಲಕರು ಅಪರಿಚಿತ ಪ್ರಯಾಣಿಕರ ಜೊತೆಗೆ ಮಾತನಾಡುತ್ತಾರೆ. ಕೆಲವರು ಪ್ರಯಾಣಿಕರೇ ಮಾತನಾಡಿಸಿದರೆ ಇನ್ನೂ ಕೆಲವರು ಆಟೋ ಚಾಲಕರೇ ಪ್ರಯಾಣಿಕರನ್ನು ಮಾತನಾಡಿಸುತ್ತಾರೆ. ಅದೇ ರೀತಿ ಇಲ್ಲಿ ಯುವತಿ ಆಟೋ ಚಾಲಕನನ್ನು ಸಹಜವಾಗಿ ಮಾತನಾಡಿಸಿದ್ದಾಳೆ. ಮಾತುಕತೆಯ ನಂತರ ಆಕೆ ಬೈಯಾ (ಸಹೋದರ) ನಾನು ನಿಮಗೆ 20,000 ನಗದು ಹಣ ನೀಡುತ್ತೇನೆ ನನಗೀಗ ಬಹಳ ಅಗತ್ಯವಾಗಿ ಖಾತೆಯಲ್ಲಿ ಹಣ ಬೇಕು. ಆ ಹಣವನ್ನು ನೀವು ನನಗೆ ಗೂಗಲ್ ಪೇ, ಫೋನ್ ಪೇ ಅಥವಾ ಪೇಟಿಎಂ ಮೂಲಕ ಪಾವತಿ ಮಾಡಿ, ನಾನು ನಿಮಗೆ ನಗದು ಹಣ ಕೊಡುತ್ತೇನೆ ಎಂದು ಹೇಳಿದ್ದಾಳೆ.

ಆ ಯುವತಿಯ ಮಾತು ನಂಬಿ ಬಹುಶಃ ಯುವತಿ ಏನೋ ಕಷ್ಟದಲ್ಲಿದ್ದಾಳೆ ಎಂದು ಭಾವಿಸಿದ ಆಟೋ ಚಾಲಕ ಆಕೆ 20000 ಹಣ ನೀಡುವುದಕ್ಕೂ ಮೊದಲೇ ಆಕೆಯ ಖಾತೆಗೆ ತಮ್ಮ ಖಾತೆಯಿಂದ 20,000 ಹಣವನ್ನು ಪೇಟಿಎಂ ಮೂಲಕ ಟ್ರಾನ್ಸ್‌ಫರ್ ಮಾಡಿದ್ದಾರೆ. ಆದರೆ ಆಕೆ ತಾನು ಆಟೋದಲ್ಲಿ ತಲುಪಬೇಕಾದಲ್ಲಿಗೆ ತಲುಪಿದ ಮೇಲೂ ಆಕೆ ಆಟೋ ಚಾಲಕನಿಗೆ ನೀಡುವುದಾಗಿ ಹೇಳಿದ 20 ಸಾವಿರ ನಗದು ಹಣವನ್ನು ನೀಡಿಲ್ಲ, ಆಟೋದಿಂದ ಇಳಿದ ಆಕೆ ಸೀದಾ ನಡೆದುಕೊಂಡು ಮುಂದೆ ಹೋಗಿದ್ದಾಳೆ. ಅಲ್ಲದೇ ಆಟೋ ಚಾಲಕ ಕೇಳಿದರೂ ಹಣ ನೀಡುವುದಕ್ಕೆ ನಿರಾಕರಿಸಿದ್ದಾಳೆ.

ಇದನ್ನೂ ಓದಿ:  ಆಟವಾಡುತ್ತಾ ಆಟಿಕೆಯನ್ನೇ ನುಂಗಿದ ಮಗು: ಶಸ್ತ್ರಚಿಕಿತ್ಸೆ ನಡೆಸದೇ ಆಟಿಕೆ ಹೊರತೆಗೆದ ವೈದ್ಯರು..!

20000 ರೂಪಾಯಿಯೇ ಆಗಲಿ 10 ರೂಪಾಯಿಯೇ ಆಗಲಿ ಹಣ ಹಣವೇ ಅಲ್ಲವೇ, ಆಟೋ ಚಾಲಕನಿಗೆ ಆ ಹಣವೇನು ಸುಲಭವಾಗಿ ಬರುವುದಿಲ್ಲ, 20 ಸಾವಿರ ಹಣ ಎಂದರೆ ಬಹುಶಃ ಅವನಿಗೆ ಅದು ತಿಂಗಳ ಸಂಪಾದನೆಯೂ ಆಗಿರಬಹುದು. ಹೀಗಾಗಿ ಆಟೋ ಚಾಲಕ ಮತ್ತೆ ಮತ್ತೆ ಕೇಳಿದಾಗ ಕಾಯಿರಿ ಕೊಡುತ್ತೇನೆ ಸ್ವಲ್ಪ ಹೊತ್ತಿನ ನಂತರ ಎಂದು ಹೇಳಿದ್ದಾಳೆ. ನಂತರ ಗಲಾಟೆ ನೋಡಿ ಅಲ್ಲಿ ಜನ ಸೇರಿದ್ದು, ಇತರ ಆಟೋ ಚಾಲಕರು ಕೂಡ ಅಲ್ಲಿ ಸೇರಿದ್ದಾರೆ. ಆದರೂ ಹುಡುಗಿ ತನ್ನ ಈ ಮಳ್ಳಾಟ ಮುಂದುವರಿಸಿದ್ದಾಳೆ. ನಂತರ ಅಲ್ಲಿ ಸೇರಿದ ಆಟೋ ಚಾಲಕರು ಕೂಡ ಆಕೆಗೆ ಹಣ ನೀಡುವಂತೆ ಕೇಳಿದ್ದಾರೆ. ನಂತರ ಕಡೆಗೂ ಆ ಯುವತಿ ಅನಿವಾರ್ಯವಾಗಿ ಹಣ ನೀಡಿದ್ದಾಳೆ.

ಇದನ್ನೂ ಓದಿ: ಹೈನುಗಾರಿಕೆಯಿಂದಲೇ ತಿಂಗಳಿಗೆ 6 ಲಕ್ಷ ಗಳಿಕೆ ಮಾಡುತ್ತಿರುವ 18ರ ಯುವಕ

ಒಟ್ಟಿನಲ್ಲಿ ಯಾರೋ ಕಷ್ಟದಲ್ಲಿದ್ದಾರೆ ಪಾಪ ಹೆಣ್ಣು ಮಕ್ಕಳು ಬೇರೆ ಎಂದು ಹಿಂದೆ ಮುಂದೆ ನೋಡದೇ ಸಹಾಯ ಮಾಡುವುದಕ್ಕೆ ಹೋದರೆ ಇದೇ ರೀತಿ ಆಗುತ್ತೇ ನೋಡಿ. ಇಂತಹ ಅದೆಷ್ಟು ಸ್ಕ್ಯಾಮರ್‌ಗಳು ಇದ್ದಾರೋ ಯಾರಿಗೆ ಗೊತ್ತು ಮೋಸ ಹೋದಾಗಲೇ ಇಂತಹ ಘಟನೆಗಳು ಬೆಳಕಿಗೆ ಬರುತ್ತವೆ. ಇಂತಹವರಿಂದಲೇ ಯಾರು ನಿಜವಾಗಿಯೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದಕ್ಕೆ ಜನ ಮುಂದೆ ಬರುವುದಿಲ್ಲ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Airtel Plans: ಏರ್‌ಟೆಲ್‌ನಿಂದ ಬಂಪರ್ ಆಫರ್! ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್‌ಗಳಲ್ಲಿ ಅನ್‌ಲಿಮಿಟೆಡ್ 4G, 5G ಡೇಟಾ!
Viral Video: ರೈಲು ಹಳಿ ಮೇಲೆ ಅಪಾಯಕಾರಿ ರೀಲ್ಸ್ ಮಾಡಿ ಕ್ಷಮೆ ಕೇಳಿದ ಯುವತಿ, ಏನಿದೆ ರೈಲ್ವೆ ನಿಯಮ?