Viral Video: ಮಧ್ಯಾಹ್ನ ಮಲಗಿ, ಸಂಜೆ ಎಚ್ಚರಗೊಂಡ ಬಾಲಕ; ಬೆಳಗ್ಗೆ ಆಯ್ತು ಅನ್ಕೊಂಡು ಶಾಲೆಗೆ ಹೊರಟೇಬಿಟ್ಟ!

Published : Feb 04, 2026, 03:01 PM ISTUpdated : Feb 04, 2026, 04:39 PM IST
School Boy Viral Video

ಸಾರಾಂಶ

ಮಧ್ಯಾಹ್ನದ ನಿದ್ದೆಯಿಂದ ಎದ್ದ ಶಾಲಾ ಬಾಲಕನೊಬ್ಬ, ಸಂಜೆ 7 ಗಂಟೆಯನ್ನು ಬೆಳಗ್ಗೆ 7 ಎಂದು ಭಾವಿಸಿ ಯೂನಿಫಾರ್ಮ್ ಧರಿಸಿ ಶಾಲೆಗೆ ಹೊರಟಿದ್ದಾನೆ. ಈ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ಹುಡುಗನ ಮುಗ್ಧತೆ ಮತ್ತು ಗಂಭೀರತೆಗೆ ನೆಟ್ಟಿಗರು ನಕ್ಕು ಸುಸ್ತಾಗಿದ್ದಾರೆ.

ಕೆಲವೊಂದು ಮಧ್ಯಾಹ್ನದ ನಿದ್ದೆಗಳು ನಮ್ಮನ್ನು ಸರಿಯಾಗೇ ಕನ್ಫ್ಯೂಸ್ ಮಾಡಿಬಿಡುತ್ತವೆ. ರಾತ್ರಿ ಹೊತ್ತು ಎಚ್ಚರವಾದರೆ, 'ಅಯ್ಯೋ ಬೆಳಗ್ಗೆ ಆಗಿಬಿಡ್ತಾ' ಅಂತಾ ಗಾಬರಿಯಾಗಿದ್ದು ನಮ್ಮಲ್ಲಿ ಹಲವರಿಗೆ ಅನುಭವ ಆಗಿರುತ್ತೆ. ಆದರೆ, ಸ್ವಲ್ಪ ಹೊತ್ತಿನಲ್ಲೇ ಸತ್ಯ ಗೊತ್ತಾಗಿ ಮತ್ತೆ ಮಲಗಿಬಿಡ್ತೀವಿ. ಆದ್ರೆ ಇಲ್ಲೊಬ್ಬ ಸ್ಕೂಲ್ ಹುಡುಗ ಮಾತ್ರ, ಇದೇ ರೀತಿ ಕನ್ಫ್ಯೂಸ್ ಆಗಿ ನೇರವಾಗಿ ಶಾಲೆಗೇ ಹೊರಟುಬಿಟ್ಟಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಧ್ಯಾಹ್ನದ ನಿದ್ದೆಯಿಂದ ಸಮಯದ ಗೊಂದಲ

ಚೆನ್ನಾಗಿ ನಿದ್ದೆ ಮಾಡಿ ಎದ್ದ ಈ ಬಾಲಕನಿಗೆ ಆಗ ಸಂಜೆ 7 ಗಂಟೆಯಾಗಿತ್ತು. ಆದರೆ, ಆತ ಬೆಳಗ್ಗೆ 7 ಗಂಟೆ ಎಂದುಕೊಂಡಿದ್ದಾನೆ. ತಕ್ಷಣವೇ ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡು, ಬ್ಯಾಗ್ ಹೆಗಲಿಗೇರಿಸಿ, ಪಕ್ಕಾ ಕಾನ್ಫಿಡೆನ್ಸ್‌ನಿಂದ ಶಾಲೆ ಕಡೆಗೆ ನಡೆಯಲು ಶುರುಮಾಡಿದ್ದಾನೆ. ಅವನಿಗೆ ಸಮಯದ ಪರಿವೆಯೇ ಇರಲಿಲ್ಲ. ಇದನ್ನು ನೋಡಿದ ಊರಿನ ಕೆಲ ಯುವಕರು, ಈ ದೃಶ್ಯವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೋಡ ನೋಡುತ್ತಿದ್ದಂತೆ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ಇಷ್ಟೊಂದು ವೈರಲ್ ಆಗಲು ಮುಖ್ಯ ಕಾರಣ, ಆ ಹುಡುಗನ ಗಂಭೀರತೆ ಮತ್ತು ದೃಢ ನಿರ್ಧಾರ. ಪ್ರತಿದಿನದಂತೆ ಸ್ನಾನ ಮಾಡಿ, ಯೂನಿಫಾರ್ಮ್ ಧರಿಸಿ, ಬ್ಯಾಗ್‌ನೊಂದಿಗೆ ಶಾಲೆಗೆ ಹೊರಟಿದ್ದ. ದಾರಿಯಲ್ಲಿ ಕೆಲವರು ಆ ಬಾಲಕನನ್ನು ತಡೆಯಲು ಪ್ರಯತ್ನಿಸಿದರೂ, ಆತ ಯಾವುದನ್ನೂ ಕೇರ್ ಮಾಡದೆ ಶಾಲೆ ಕಡೆಗೆ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ನಕ್ಕು ಸುಸ್ತಾದ ನೆಟ್ಟಿಗರು

ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ನಗುವನ್ನು ತಡೆಯಲಾಗಲಿಲ್ಲ. ಕಾಮೆಂಟ್ ಸೆಕ್ಷನ್‌ನಲ್ಲಿ ನಗುವ ಇಮೋಜಿಗಳ ಸುರಿಮಳೆಯೇ ಆಗಿದೆ. ಇನ್ನು ಕೆಲವರು, ತಮ್ಮ ಬಾಲ್ಯದಲ್ಲಿ ನಡೆದ ಇಂತಹದೇ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಕೆಲವರು ಹುಡುಗನ ಶಿಸ್ತನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. 'ಯಾವುದೇ ಪ್ಲಾನ್ ಇಲ್ಲದೆ ನಡೆಯುವ ಇಂತಹ ಘಟನೆಗಳೇ ನಿಜವಾದ ಕಂಟೆಂಟ್. ಆದರೆ ಇವತ್ತಿನ ದಿನಗಳಲ್ಲಿ ಎಲ್ಲವೂ ಕೃತಕ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಸರಿಯಾದ ಸಮಯಕ್ಕೆ ವಿಡಿಯೋ ಮಾಡಿದ ಊರಿನ ಯುವಕರನ್ನೂ ಕೆಲವರು ಹೊಗಳಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆಯ ಹೊರಗೆ ನಿಂತ 7 ತಲೆಯ ಶೇಷನಾಗ ಸರ್ಪದ ವಿಡಿಯೋ ವೈರಲ್, 'ಜೈ ವಿಷ್ಣು ಭಗವಾನ್' ಎಂದ ಜನ
ಪಾಪ ಹೆಣ್ಮಗಳು ಅಂತ ಅಪರಿಚಿತರಿಗೆ ಸಹಾಯ ಮಾಡುವುದಕ್ಕೆ ಹೋದ ಆಟೋ ಚಾಲಕನಿಗೆ ಏನಾಯ್ತು ನೋಡಿ..!