ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಭಾರಿ ಸ್ಫೋಟ: ಹಲವು ಯುವತಿಯರಿಗೆ ಗಂಭೀರ ಗಾಯ!

By BK Ashwin  |  First Published May 7, 2023, 1:19 PM IST

ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಶನಿವಾರ ತಡರಾತ್ರಿ ಈ ಸ್ಫೋಟ ಸಂಭವಿಸಿದ್ದು, ಈ ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದ ಕೂಡಲೇ ಸುತ್ತಮುತ್ತಲಿದ್ದ ಜನರು ಗಾಬರಿಯಾಗಿದ್ದಾರೆ.


ಅಮೃತಸರ (ಮೇ 7, 2023): ಪಂಜಾಬ್‌ನ ಅಮೃತಸರದಲ್ಲಿರುವ ಸಿಖ್ಖರ ಧಾರ್ಮಿಕ ಕೆಂದ್ರವಾದ ಹಾಗೂ ಖ್ಯಾತ ಪ್ರವಾಸಿ ತಾಣವಾದ ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಶನಿವಾರ ತಡರಾತ್ರಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ 6 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಸ್ಫೋಟಕ್ಕೆ ಈವರೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಶನಿವಾರ ತಡರಾತ್ರಿ ಈ ಸ್ಫೋಟ ಸಂಭವಿಸಿದ್ದು, ಈ ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದ ಕೂಡಲೇ ಸುತ್ತಮುತ್ತಲಿದ್ದ ಜನರು ಗಾಬರಿಯಾಗಿದ್ದಾರೆ. ಅಲ್ಲದೆ, ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಭಾವಿಸಿ ಭಕ್ತರು ಮತ್ತು ಸ್ಥಳೀಯರು ಭಯಭೀತರಾಗಿದ್ದರು. 

Tap to resize

Latest Videos

ಇದನ್ನು ಓದಿ: ಉಗ್ರರ ಬೇಟೆ ವೇಳೆ 5 ಸೈನಿಕರು ಹುತಾತ್ಮ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ ಸಂದರ್ಭ ಉಗ್ರರಿಂದ ಸ್ಫೋಟ

Several injured in blast near 's

Devotees and locals were gripped with fear presuming a terrorist attack. Police maintained that the blast could be an accident and not any terror incident.

pic.twitter.com/8QEfFJ8RGS

— Oxomiya Jiyori 🇮🇳 (@SouleFacts)

ಆದರೆ, ಈ ಸ್ಫೋಟವು ಅಪಘಾತವಾಗಿರಬಹುದು ಮತ್ತು ಯಾವುದೇ ಭಯೋತ್ಪಾದನೆಯ ಘಟನೆ ಅಲ್ಲ ಎಂದು ಪೊಲೀಸರು ನಂತರ ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೂ, ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಈ ಹಿನ್ನೆಲೆ ಫೋರೆನ್ಸಿಕ್ ತಂಡ ಸ್ಥಳಕ್ಕೆ ಆಗಮಿಸಿದೆ. ಅಲ್ಲದೆ, ಕಿಟಕಿಯ ಬಳಿ ಪೊಲೀಸರು ಕೆಲವು ಪುಡಿಯನ್ನು ವಶಪಡಿಸಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ. 

ಇನ್ನು, ಈ ಬಗ್ಗೆ ಏನನ್ನೂ ಹೇಳಲು ಆಗಲ್ಲ ಎಂದು ಅಮೃತಸರ ಪೊಲೀಸ್ ಕಮಿಷನರ್ ನೌನಿಹಾಲ್ ಸಿಂಗ್ ಘಟನೆಯ ಬಗ್ಗೆ ಹೇಳಿದ್ದಾರೆ. ಆಟೋರಿಕ್ಷಾದಲ್ಲಿದ್ದ ಸುಮಾರು ಆರು ಮಂದಿ ಬಾಲಕಿಯರಿಗೆ ಗಾಜಿನ ಚೂರುಗಳು ತಗುಲಿ ಗಾಯಗಳಾಗಿವೆ ಎಂದು ಸ್ಥಳೀಯ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ಅಮೃತಸರದ ಗೋಲ್ಡನ್‌ ಟೆಂಪಲ್‌ ಬಳಿಯ ರೆಸ್ಟೋರೆಂಟ್‌ನ ಚಿಮಣಿಯಲ್ಲಿ ಸ್ಫೋಟಗೊಂಡಿರಬಹುದು ಎಂದೂ ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: ಐಇಡಿ ಸ್ಫೋಟದಲ್ಲಿ 10 ಜವಾನರು ಹುತಾತ್ಮ; ಚಾಲಕನೂ ಬಲಿ

ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಸಹ ಆಟೋದಲ್ಲಿ ಸಂಭವಿಸಿತ್ತು!
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣ ಆಟೋದಲ್ಲಿ ಸಂಭವಿಸಿತ್ತು. ಈಗ ಅದೆ ರೀತಿ, ಅಮೃತಸರದ ಗೋಲ್ಡನ್‌ ಟೆಂಪಲ್‌ ಬಳಿಯಲ್ಲಿ ನಡೆದ ಸ್ಫೋಟದಲ್ಲೂ ಆಟೋದಲ್ಲಿದ್ದ ಯುವತಿಯರಿಗೆ ಗಾಯಗಳಾಗಿದೆ. ಮಂಗಳೂರು ಹಾಗೂ ಕೊಯಮತ್ತೂರು ಸ್ಫೋಟ ಪ್ರಕರಣದ ಹೊಣೆಯನ್ನು ಜಾಗತಿಕ ಉಗ್ರ ಸಂಘಟನೆ ಐಸಿಸ್‌ ಹೊತ್ತುಕೊಂಡಿದೆ. 

ಈ ನಡುವೆ, ಈಶಾನ್ಯ ರಾಜ್ಯ ಮಣಿಪುರದಲ್ಲಿ ಹಿಂಸಾಚಾರ, ಗಲಭೆಯ ನಡುವೆಯೇ ಪಂಜಾಬ್‌ನ ಅಮೃತಸರದಲ್ಲಿ ಸ್ಫೋಟ ಸಂಭವಿಸಿದೆ. ಆದರೂ, ಈ ಸ್ಫೋಟದಲ್ಲಿ ಉಗ್ರರ ಕೈವಾಡವಿಲ್ಲ ಎಂದು ಪೊಲೀಸರು ಆರಂಭದಲ್ಲಿ ಹೇಳುತ್ತಿದ್ದರೂ, ಈ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಯಬೇಕಿದೆ. 

ಇದನ್ನೂ ಓದಿ: ಶಿಂಜೋ ಅಬೆ ಬಳಿಕ ಜಪಾನ್‌ ಪ್ರಧಾನಿ ಹತ್ಯೆಗೂ ಯತ್ನ: ಕಿಶಿದಾ ಭಾಷಣ ಮಾಡ್ತಿದ್ದ ಸ್ಥಳದಲ್ಲಿ ಬಾಂಬ್‌ ಸ್ಫೋಟ

click me!