ಬೆಂಗಳೂರು: ಪ್ರಾಣಿಗಳು ಅದರಲ್ಲೂ ವಿಶೇಷವಾಗಿ ಆನೆಗಳು ಸೌಮ್ಯ ಸ್ವಭಾವದ ಜೊತೆ ಬುದ್ಧಿವಂತಿಕೆಯನ್ನು ಹೊಂದಿರುವ ದೈತ್ಯ ಪ್ರಾಣಿಗಳು. ಸ್ನೇಹಮಯಿಗಳಾಗಿರುವ ಅವುಗಳು ಅವರಿಗೆ ಅಪಾಯವಾಗುವವರೆಗೂ ಅಥವಾ ಅವುಗಳನ್ನು ಪ್ರಚೋದಿಸುವವರೆಗೂ ಅವು ಯಾರ ಮೇಲೂ ದಾಳಿಗೆ ಮುಂದಾಗುವುದಿಲ್ಲ. ಆದರೆ ಪ್ರಚೋದಿಸಿದ ನಂತರ ಮಾತ್ರ ಬದುಕಿ ಉಳಿಯುವುದೇ ಸಂಶಯ. ಹೌದು ಆನೆಗಳು ಎಷ್ಟು ಸೌಮ್ಯವೋ ಕೋಪಗೊಂಡರೆ ಅಷ್ಟೇ ಉಗ್ರ ಸ್ವರೂಪವನ್ನು ತಾಳುತ್ತವೆ. ಕೆಣಕಿದವನ ಮಸಣಕ್ಕೆ ಅಟ್ಟುವವರೆಗೂ ಅವುಗಳು ಸುಮ್ಮನೇ ಕೂರುವುದೇ ಇಲ್ಲ.
ಇಂತಹ ಆನೆಯನ್ನು ಯುವತಿಯೊಬ್ಬಳು ಕೆಣಕಲು ಹೋಗಿದ್ದು, ಆಕೆಯ ಗತಿ ಏನಾಯ್ತು ನೋಡಿ? ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ (IFS) ಸುಶಾಂತ್ ನಂದಾ (Sushant Nanda)ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನೋಡುಗರ ಮೈ ಝುಮ್ಮೆನಿಸುತ್ತಿದೆ. ವೀಡಿಯೋದಲ್ಲಿ ಮಿನಿ ಸ್ಕರ್ಟ್ ಧರಿಸಿದ್ದ ಮಹಿಳೆಯೊಬ್ಬಳು ಕೈಯಲ್ಲಿ ಬಾಳೆಗೊನೆಯನ್ನು ಹಿಡಿದು ಒಂಟಿ ಸಲಗವೊಂದರ (tusker) ಸಮೀಪ ಬಂದಿದ್ದಾಳೆ. ಬಂದವಳೇ ಆನೆಗೆ ಬಾಳೆಗೊನೆಯನ್ನು ಕೊಡುವ ಬದಲು ಕಾಲನ್ನೆತ್ತಿ ತುಳಿಯಲು ನೋಡಿದ್ದಾಳೆ.
ಶೃಂಗೇರಿ ಆನೆಗೆ ಸೇಬು ತಿನ್ನಿಸಿದ ಪ್ರಿಯಾಂಕ ಗಾಂಧಿ: ಕೆಲವು ವಿಶೇಷ ಫೋಟೋಗಳು ಇಲ್ಲಿವೆ ನೋಡಿ.!
ಇದನ್ನು ಕ್ಷಣಕಾಲ ಗಮನಿಸಿದ ಆನೆ ಆಕೆಯನ್ನು ಎತ್ತಿ ದೂರ ಎಸೆದಿದೆ. ಈ ವಿಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದು, ಕರ್ಮಕ್ಕೆ (Fate) ತಕ್ಕ ಫಲ ಸಿಕ್ಕಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಈ 14 ಸೆಕೆಂಡ್‌ಗಳ ವಿಡಿಯೋ ಶೇರ್ ಮಾಡಿದ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಹೀಗೆ ಬರೆದುಕೊಂಡಿದ್ದಾರೆ. 'ನೀವು ಆನೆಯನ್ನು ಪಳಗಿಸಿದರೂ ಅದನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಮಾನವನ ಸೆರೆಯಲ್ಲಿರುವ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ (Intelligent Animal) ಆನೆಯೂ ಒಂದು ಎಂದು ಅವರು ವೀಡಿಯೋ ಪೋಸ್ಟ್ ಮಾಡಿ ಬರೆದಿದ್ದಾರೆ.
ಬಾಳೆಗೊನೆಯನ್ನು ಹಿಡಿದಿದ್ದ ಮಹಿಳೆ ಆನೆಯನ್ನು ಕರೆದಿದ್ದು, ಈ ವೇಳೆ ಬಾಳೆಗೊನೆ ನೋಡಿ ಅವಳತ್ತ ಬಂದಿದೆ. ಈ ವೇಳೆ ಮಹಿಳೆ ಇಡೀ ಗೊನೆಯನ್ನು ಆನೆಗೆ ನೀಡುವ ಬದಲು ಅದರಿಂದ ಒಂದು ಬಾಳೆಹಣ್ಣನ್ನು ಮಾತ್ರ ತೆಗೆದು ಆನೆಗೆ ನೀಡಿ ಆನೆಯ ತಾಳ್ಮೆಯನ್ನು ಪರೀಕ್ಷಿಸಿದ್ದಾಳೆ. ಅಲ್ಲದೇ ಆಕೆ ತನ್ನ ಒಂದು ಕಾಲನ್ನು ಎತ್ತಿ ಆನೆಗೂ ಹಾಗೆ ಮಾಡುವಂತೆ ಸೂಚಿಸಿದ್ದಾಳೆ. ಆದರೆ ಕೆಲ ಹೊತ್ತು ಆಕೆಯನ್ನು ಗಮನಿಸಿದ ದೈತ್ಯ ಆನೆ ಆಕೆಯ ಅವಾತರಕ್ಕೆ ಕೋಪಗೊಂಡಿದ್ದು ಒಮ್ಮೆಲೇ ಎತ್ತಿ ಎಸೆದಿದ್ದು, ಅದರೊಂದಿಗೆ ವಿಡಿಯೋ ಕೊನೆಯಾಗಿದೆ.
ಬೇಸಿಗೆ ರಜೆಯಲ್ಲಿ ಮಕ್ಕಳ ಜಗಳ ಬಿಡಿಸಿ ಸುಸ್ತಾಗಿದ್ಯಾ... ಹಾಗಿದ್ರೆ ಈ ವಿಡಿಯೋ ನೋಡಿ
ಈ ವಿಡಿಯೋವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 500ಕ್ಕೂ ಹೆಚ್ಚು ಜನ ರಿಟ್ವಿಟ್ ಮಾಡಿದ್ದಾರೆ. ಅನೇಕ ಪ್ರವಾಸಿಗರು ದೈತ್ಯ ಆನೆಯನ್ನು ಸಾಕು ನಾಯಿಯಂತೆ ನಡೆಸಿಕೊಳ್ಳಲು ನೋಡುತ್ತಾರೆ. ಇದು ನಿಮ್ಮ ಜೀವವನ್ನು ಕೆಲ ಸೆಕೆಂಡುಗಳಲ್ಲಿ ಬಲಿ ಪಡೆಯಬಹುದು. ವನ್ಯಜೀವಿ (Wildlife) ಯಾವಾಗಲೂ ವನ್ಯಜೀವಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ
ಅವುಗಳ ಇರುವಿಕೆ, ಸಂಖ್ಯೆ, ಬುದ್ಧಿವಂತಿಕೆ,ಶಕ್ತಿಯನ್ನು ಲೆಕ್ಕ ಹಾಕಿದಾಗ ಭಾರತೀಯ ಕಾಡಿನಲ್ಲಿ ಆನೆಗಳು ಅತ್ಯಂತ ಅಪಾಯಕಾರಿ ಪ್ರಾಣಿಗಳಾಗಿವೆ. , ನಾನು ಯಾವಾಗಲೂ ಕಾಡಿನಲ್ಲಿ ಮತ್ತು ಸುತ್ತಮುತ್ತ ಸುತ್ತಾಡುತ್ತಿರುತ್ತೇನೆ ಮತ್ತು ಇವುಗಳನ್ನು ನಾನು ಗಮನಿಸುತ್ತಿರುತ್ತೇನೆ ಮತ್ತು ಯಾವಾಗಲೂ ಅವುಗಳಿಂದ ಕನಿಷ್ಠ 100 ಮೀಟರ್ ದೂರದಲ್ಲಿರುತ್ತೇನೆ ಎಂದು ಒಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ನೋಡುಗರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, 'ನಾನು ಮತ್ತು ನನ್ನ ಸೋದರ ಸಂಬಂಧಿ ಎಳೆಯ ಪ್ರಾಯದ ಆನೆಗೆ ಆಹಾರ ನೀಡಲು ಹೋಗಿದ್ದೆವು. ಈ ವೇಳೆ ಯಾವುದೋ ಕಾರಣದಿಂದ ಕೋಪಗೊಂಡ ಆನೆ ನನ್ನ ಸೋದರ ಸಂಬಂಧಿಯನ್ನು ಲಘುವಾಗಿ ಎಳೆದು ಆತನನ್ನು ಕೆಲವು ಗಜಗಳಷ್ಟು ದೂರ ಎಸೆದಿತ್ತು. ಇದರಿಂದ ಆತನ ಕಣ್ಣಿಗೆ ಗಾಯವಾಗಿತ್ತು. ತೀವ್ರ ಗಾಯ ಮತ್ತು ಗೀರುಗಳೊಂದಿಗೆ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆನೆಗಳ ಸೊಂಡಿಲಿನ ಶಕ್ತಿಯೇ ಅಂತಹದ್ದು ಎಂದು ಅವರು ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ