ಇಂದಿರಾರನ್ನು ಗೆಲ್ಲಿಸಿದ್ದ ಎಂಬ ಕ್ಷೇತ್ರ ಎಂಬ ಭಾವನಾತ್ಮಕ ಬೆಸುಗೆಯಲ್ಲೇ, ಹಾಲಿ ತೆಲಂಗಾಣ ರಾಜ್ಯದ ಭಾಗವಾಗಿರುವ ಮೇದಕ್ ಅಥವಾ ಮೆಹಬೂಬ್‌ನಗರದಿಂದ ಪ್ರಿಯಾಂಕಾರನ್ನು ಕಣಕ್ಕಿಳಿಸುವ ಗಂಭೀರ ಚಿಂತನೆಯೊಂದು ಪಕ್ಷದಲ್ಲಿ ನಡೆದಿದೆ ಎನ್ನಲಾಗಿದೆ
ಹೈದ್ರಾಬಾದ್ (ಮೇ 7, 2023): ಸಕ್ರಿಯ ರಾಜಕೀಯಕ್ಕೆ ಇಳಿದು ದಶಕಗಳೇ ಕಳೆದರೂ ಇನ್ನೂ ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಮಾಡ್ದದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, 2024ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಬಳಿಕ 1978ರಲ್ಲಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿ ರಾಜಕೀಯ ಮರು ಜನ್ಮ ಪಡೆದಿದ್ದರು. ನಂತರ 1980ರಲ್ಲಿ ಇಂದಿರಾ ಗಾಂಧಿ ತಮ್ಮ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿದ್ದ ಅಂದಿನ ಆಂಧ್ರಪ್ರದೇಶದ ಮೇದಕ್ ಲೋಕಸಭಾ ಕ್ಷೇತ್ರ. ಆಗ ಇಂದಿರಾ ಗಾಂಧಿ ಜಯ ಕೂಡಾ ಸಾಧಿಸಿದ್ದರು.
ಹೀಗೆ ಇಂದಿರಾರನ್ನು ಗೆಲ್ಲಿಸಿದ್ದ ಎಂಬ ಕ್ಷೇತ್ರ ಎಂಬ ಭಾವನಾತ್ಮಕ ಬೆಸುಗೆಯಲ್ಲೇ, ಹಾಲಿ ತೆಲಂಗಾಣ ರಾಜ್ಯದ ಭಾಗವಾಗಿರುವ ಮೇದಕ್ ಅಥವಾ ಮೆಹಬೂಬ್‌ನಗರದಿಂದ ಪ್ರಿಯಾಂಕಾರನ್ನು ಕಣಕ್ಕಿಳಿಸುವ ಗಂಭೀರ ಚಿಂತನೆಯೊಂದು ಪಕ್ಷದಲ್ಲಿ ನಡೆದಿದೆ ಎನ್ನಲಾಗಿದೆ. ಪ್ರಿಯಾಂಕಾ ಗಾಂಧಿ ಕೂಡಾ ಈ ಬಗ್ಗೆ ಒಲವು ಹೊಂದಿದ್ದು, ಇದೇ ವರ್ಷ ನಡೆಯಲಿರುವ ತೆಲಂಗಾಣ ವಿಧಾನಸಭೆಯ ಉಸ್ತುವಾರಿ ವಹಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಅವರು ತೆಲಂಗಾಣದಲ್ಲಿ ಭರ್ಜರಿ ಪ್ರವಾಸ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಲೆ ಎಬ್ಬಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: From the India Gate: ವಯನಾಡ್‌ನಲ್ಲಿ ಕಣಕ್ಕಿಳೀತಾರಾ ಪ್ರಿಯಾಂಕಾ ಗಾಂಧಿ..? ತಮಿಳುನಾಡಲ್ಲಿ ಬಿಜೆಪಿಯೇ ಪ್ರಮುಖ ವಿಪಕ್ಷ..!
ತೆಲಂಗಾಣದಿಂದ ಒಂದು ವೇಳೆ ಸ್ಪರ್ಧಿಸಿದರೆ ಅದು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇರುವ ಕಾರಣ ಇಂಥದ್ದೊಂದು ಪ್ರಸ್ತಾಪದ ಬಗ್ಗೆ ಪಕ್ಷದ ಹೈಕಮಾಂಡ್ ಮತ್ತು ಪ್ರಿಯಾಂಕಾ ಎರಡೂ ಕಡೆಯಿಂದ ಗಂಭೀರ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಹುಲ್ ಗಾಂಧಿ ಹಾರ್ವರ್ಡ್, ಕೇಂಬ್ರಿಡ್ಜ್‌ನಿಂದ ಪದವಿ ಪಡೆದಿದ್ದಾರೆ, ಆದರೂ ಪಪ್ಪು ಅಂತೀರಿ: ಪ್ರಿಯಾಂಕಾ ಗಾಂಧಿ