ಇತ್ತೀಚಿನ ದಿನಗಳಲ್ಲಿ ಪಾಕ್ ಮೂಲದ ಭಯೋತ್ಪಾದಕರ ದಾಳಿಯಿಂದ ನಲುಗಿರುವ ಜಮ್ಮು-ಕಾಶ್ಮೀರದ ರಜೌರಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಜಮ್ಮು (ಮೇ 7, 2023): ಅಪ್ಪಾ ನೀನೇಕೆ ಏಳುತ್ತಿಲ್ಲ? ನನಗೆ ಏನೂ ಬೇಡ, ಪಾಪಾ ಪ್ಲೀಸ್ ನೀನು ಮರಳಿ ಬಾ...10 ವರ್ಷದ ಪವನಾ ಚಿಬ್ ತನ್ನ ಮೃತ ತಂದೆಯ ಶವದೆದರು ಹೀಗೆ ಕಣ್ಣೀರಿಟ್ಟು ಗೋಗರೆಯುತ್ತಿದ್ದರೆ, ನೆರೆದವರ ಕಣ್ಣಲ್ಲಿ ನೀರು ತುಂಬಿ ಬಂದಿತ್ತು.
ಶುಕ್ರವಾರ ಕಾಶ್ಮೀರದ ಕಂಡಿ ಪ್ರದೇಶದಲ್ಲಿ ಉಗ್ರ ದಾಳಿಗೆ ಬಲಿಯಾದ ನೀಲಂ ಸಿಂಗ್ ಅವರ ದೇಹವನ್ನು ಶನಿವಾರ ದಲ್ಬಾತ್‌ಗೆ ತರುತ್ತಿದ್ದಂತೆ ಅವರ ಪುತ್ರಿ ಕಣ್ಣೀರಿಟ್ಟು ಅಪ್ಪನನ್ನು ಎಬ್ಬಿಸುವ ಯತ್ನ ಮಾಡಿದರು. ಬಾಲಕಿಯ ಈ ಆಕ್ರಂದನ ಕಂಡು ನೆರೆದಿದ್ದವರೂ ಕಣ್ಣೀರಿಟ್ಟರು.
ಇದನ್ನು ಓದಿ: ಉಗ್ರರ ಬೇಟೆ ವೇಳೆ 5 ಸೈನಿಕರು ಹುತಾತ್ಮ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ ಸಂದರ್ಭ ಉಗ್ರರಿಂದ ಸ್ಫೋಟ
ಉಗ್ರರ ದಾಳಿ ಬೆನ್ನಲ್ಲೇ ಕಾಶ್ಮೀರಕ್ಕೆ ರಾಜ್‌ನಾಥ್ ದೌಡು: 17 ತಿಂಗಳಲ್ಲಿ ಉಗ್ರ ದಾಳಿಗೆ 26 ಯೋಧರು ಬಲಿ
ರಜೌರಿ/ಜಮ್ಮು: ಇತ್ತೀಚಿನ ದಿನಗಳಲ್ಲಿ ಪಾಕ್ ಮೂಲದ ಭಯೋತ್ಪಾದಕರ ದಾಳಿಯಿಂದ ನಲುಗಿರುವ ಜಮ್ಮು-ಕಾಶ್ಮೀರದ ರಜೌರಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಶುಕ್ರವಾರ 5 ಯೋಧರು ಉಗ್ರರ ದಾಳಿಗೆ ಹುತಾತ್ಮರಾಗಿದ್ದರು. ಇನ್ನು ಕಳೆದ ವಾರ ಕೂಡ ಐವರು ಸೇನಾ ಯೋಧರನ್ನು ಪಾಕ್ ಉಗ್ರರು ಹತ್ಯೆ ಮಾಡಿದ್ದರು. ಒಟ್ಟಾರೆ 2021ರ ಅಕ್ಟೋಬರ್ ಬಳಿಕ 26 ಯೋಧರು ಸೇರಿ 35 ಜನರು ಪೂಂಛ್ ಹಾಗೂ ರಜೌರಿ ಜಿಲ್ಲೆಗಳಲ್ಲಿ ಉಗ್ರ ದಾಳಿಗೆ ಬಲಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಲ ಹೊತ್ತು ಜಮ್ಮು ಭೇಟಿ ಬಳಿಕ ರಜೌರಿಗೆ ಬಂದ ರಾಜನಾಥ್, ಸೇನಾ ಕಾರ್ಯಾಚರಣೆ ಕೈಗೊಂಡಿರುವ ಪಡೆಗಳ ಜತೆ ಮಾತುಕತೆ ನಡೆಸಿ ಆತ್ಮಸ್ಥೈರ್ಯ ತುಂಬಿದರು. ಈ ವೇಳೆ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಹಾಗೂ ಕಾಶ್ಮೀರ ಉಪರಾಜ್ಯಪಾಲ ಮನೋಜ್ ಸಿನ್ಹಾ, ಇತರ ಸೇನಾಧಿಕಾರಿಗಳು ಇದ್ದರು. ಶುಕ್ರವಾರವಷ್ಟೇ ಕಾಶ್ಮೀರ ದಾಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಪ್ರತಿಕ್ರಿಯಿಸದೇ ಏಕೆ ಸುಮ್ಮನಿದ್ದಾರೆ?’ ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದರು.
ಇದನ್ನೂ ಓದಿ: Amit Shah Interview: ಮೋದಿ ಬಂದ ಬಳಿಕ ಈಶಾನ್ಯ ಭಾರತ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ತೀವ್ರ ಕಡಿಮೆಯಾಗಿದೆ: ಅಮಿತ್ ಶಾ
ಆಪರೇಷನ್ ತ್ರಿನೇತ್ರಕ್ಕೆ ಓರ್ವ ಉಗ್ರ ಬಲಿ: ಶುಕ್ರವಾರ ರಜೌರಿಯಲ್ಲಿ ದಾಳಿ ನಡೆಸಿ 5 ಯೋಧರನ್ನು ಬಲಿ ಪಡೆದ ಉಗ್ರರಿಗಾಗಿ ಭಾರತೀಯ ಸೇನೆ ಆಪರೇಷನ್ ತ್ರಿನೇತ್ರ ಎಂಬ ಕಾರ್ಯಾಚರಣೆ ಆರಂಭಿಸಿದೆ. ಇದರ ಭಾಗವಾಗಿ ನಡೆದ ಕಾರ್ಯಾಚರಣೆ ವೇಳೆ ಓರ್ವ ಉಗ್ರ ಸೇನೆಯ ಗುಂಡಿಗೆ ಬಲಿಯಾಗಿದ್ದಾನೆ. ಈ ವೇಳೆ ಇನ್ನೋರ್ವ ಉಗ್ರ ಗಾಯಗೊಂಡರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ವೇಳೆ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಪೂಂಚ್ ಅಟ್ಯಾಕ್ ಹೊಣೆ ಹೊತ್ತ ಜೈಷ್ ಸಹವರ್ತಿ ಸಂಘಟನೆ: ಸೈನಿಕರ ಮೇಲಿನ ದಾಳಿ ವಿಡಿಯೋ ಮಾಡಿದ್ದ ಉಗ್ರರು!