ಬಿಹಾರ: ಹೇಳಿ ಕೇಳಿ ದೇಶದಲ್ಲಿ ಈಗ ಬಿರು ಬೇಸಿಗೆ ಸಮಯ. ದೇಶದ ವಿವಿಧೆಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದು, ಜನ ಬಿಸಿಲಿನ ದಾಹದಿಂದ ತತ್ತರಿಸಿ ಹೋಗಿದ್ದಾರೆ. ಇದರೊಂದಿಗೆ ಹಲವು ಆರೋಗ್ಯ ಸಮಸ್ಯೆಗಳು ಅನೇಕರನ್ನು ಕಾಡುತ್ತಿದೆ. ತೀವ್ರವಾದ ಶಾಖದ ಅಲೆಯ ನಡುವೆ, ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳೊಂದಿಗೆ ಬರುತ್ತಿದ್ದಾರೆ. ಏತನ್ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಬಿಹಾರದ ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಬಿಸಿಗಾಳಿಯ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಹಾಡು ಹಾಗೂ ಡಾನ್ಸ್ ಮಾಡುವ ಮೂಲಕ ತಿಳಿಸಲು ಹೊರಟಿದ್ದು, ಶಿಕ್ಷಕನ ಈ ವಿಡಿಯೋ ವೈರಲ್ ಆಗಿದೆ.
ಶಿಕ್ಷಕರೊಬ್ಬರು ಮಕ್ಕಳಿಗೆ ವಿಶಿಷ್ಟ ಮತ್ತು ಉಲ್ಲಾಸದ ರೀತಿಯಲ್ಲಿ ಬಿಸಿಲಿನಿಂದ ಪಾರಾಗುವ ಬಗೆಯನ್ನು ಹೇಳುತ್ತಿದ್ದಾರೆ. ಕಪ್ಪು ಹಲಗೆಯ ಮೇಲೆ ಹಿಂದಿಯಲ್ಲಿ ಬರೆಯಲಾದ 'ಲೂ' ಎಂಬ ಪದದೊಂದಿಗೆ ಶಿಕ್ಷಕರೊಬ್ಬರು ಶೈಕ್ಷಣಿಕ ಗೀತೆಯನ್ನು ಪಠಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ನಿಜವಾದ ಸಿನಿಮಾ ಶೈಲಿಯಲ್ಲಿ, ಈ ಶಿಕ್ಷಕರು ಬಾಲಿವುಡ್ ಚಿತ್ರ 'ಕೂಲಿ ನಂ.-1' ನ 'ಜಬ್ ದಿಲ್ ನಾ ಲಗೇ ದಿಲ್ದಾರ್' ಹಾಡಿನ ಟ್ಯೂನ್‌ನಂತೆ ಮಕ್ಕಳಿಗೆ ರಂಜನೀಯವಾಗಿ ಹಾಡನ್ನು ಹಾಡುತ್ತಿದ್ದಾರೆ.
ಹಾಡಿ ನಲಿದು ಕಲಿಸುವ ವಂದನಾ ಟೀಚರ್ ಈಗ ಎಲ್ಲೆಲ್ಲೂ ಫೇಮಸ್
ಶಿಕ್ಷಕ ತನ್ನ ಕುತ್ತಿಗೆಗೆ ಎರಡು ನೀರಿನ ಬಾಟಲಿಗಳನ್ನು ದಾರದಲ್ಲಿ ಕಟ್ಟಿ ಕುತ್ತಿಗೆಗೆ ಹಾಕಿಕೊಂಡಿದ್ದು, 'ಜಬ್ ಧೂಪ್ ರಹೇ ಖೂಬ್ ತೇಜ್, ತೋ ಬಹರ್ ನಾ ಜಾನಾ. ಖುದ್ ಕೋ ರಖನಾ ಘರ್ ಮೈ ಸಾಹೇಜ್ ಕಿ ಬಹರ್ ನ ಜಾನಾ' (ತುಂಬಾ ಬಿಸಿಲು ಇದ್ದಾಗ ಹೊರಗೆ ಹೋಗಬಾರದು ನಿಮ್ಮನ್ನು ನೀವು ಮನೆಯಲ್ಲೇ ಇರಿಸಿಕೊಳ್ಳಬೇಕು ಹೊರಗೆ ಹೋಗಬಾರದು) ಎಂದು ಅವರು ರಾಗವಾಗಿ ಹಾಡುತ್ತಿದ್ದಾರೆ. ಶಿಕ್ಷಕನ ಹಾಡಿಗೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಖುಷಿ ಪಡುತ್ತಿದ್ದಾರೆ.
ಹಾಡಿನಲ್ಲಿಯೇ ಅವರು ತಮ್ಮ ವಿದ್ಯಾರ್ಥಿಗಳಿಗೆ ನೀರು-ಸಮೃದ್ಧ ಹಣ್ಣುಗಳನ್ನು ಸೇವಿಸುವ ಮೂಲಕ ಚೆನ್ನಾಗಿ ತಿನ್ನಲು ಮತ್ತು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಸಲಹೆ ನೀಡಿದ್ದಾರೆ. (ಭೂಖೇ ಕಭಿ ನಾ ತುಮ್ ಸ್ಕೂಲ್ ಆವೋ, ಕಕ್ರಿ-ಖರ್ಬೂಜೆ ಕಾ ಭೋಗ್ ಲಗಾವೋ) ಹಸಿದ ಹೊಟ್ಟೆಯಿಂದ ಶಾಲೆಗೆ ಬರಬೇಡಿ. ಖರ್ಬೂಜಾ ಮುಂತಾದ ಹಣ್ಣುಗಳನ್ನು ತಿನ್ನಿ ಎಂದು ಮೇಷ್ಟು ಹಾಡಿನ ಮೂಲಕ ಮಕ್ಕಳಿಗೆ ಹೇಳುತ್ತಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಶಿಕ್ಷಕರು ನಲಿಯುತ್ತಾ ಕುಣಿಯುತ್ತಾ ಪಾಠ ಮಾಡುತ್ತಿದ್ದರೆ, ಮಕ್ಕಳು ನೆಲದಲ್ಲಿ ಕುಳಿತುಕೊಂಡು ಆನಂದಿಸುತ್ತಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕರ ಈ ನಡೆ ಶ್ಲಾಘನೀಯ ಎನಿಸಿದೆ.
10 ಕ್ಲಾಸ್ ಉತ್ತರ ಪತ್ರಿಕೆಯಲ್ಲಿ ಅಲ್ಲು ಅರ್ಜುನ್ ಪುಷ್ಪ ಡೈಲಾಗ್ ಬರೆದ ಯುವಕ, ಶಿಕ್ಷಕರೇ ಶಾಕ್!
ಈ ವೀಡಿಯೊ ವೈರಲ್ ಆಗಿದೆ, ಮತ್ತು ಶಿಕ್ಷಕರು ಪ್ರಮುಖ ಸಂದೇಶವನ್ನು ಮಕ್ಕಳಿಗೆ ಅರ್ಥ ಮಾಡಿಸಲು ಆಯ್ಕೆ ಮಾಡಿದ ಮನರಂಜನೆ ಮತ್ತು ತಮಾಷೆಯ ಮಾರ್ಗವನ್ನು ಜನರು ಇಷ್ಟಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನ ಶಿಕ್ಷಕರು ಮಕ್ಕಳಿಗೆ ಅರ್ಥ ಮಾಡಿಸಲು ಅನುಸರಿಸಿದ ವಿಧಾನವನ್ನು ಶ್ಲಾಘಿಸಿದ್ದಾರೆ. ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು, ತುಂಬಾ ಧನ್ಯವಾದಗಳು ನೀವು ಮಕ್ಕಳಿಗೆ ತುಂಬಾ ಸರಳವಾಗಿ ಖುಷಿಯಾಗಿ ಹೇಳಿ ಕೊಡುತ್ತಿದ್ದಿರಿ. ನೀವು ಕಲಿಸುವ ರೀತಿ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ