ಕುಡಿದು ತೂರಾಡಿದ ಮಹಿಳಾ ಅಧಿಕಾರಿ : ವಿಡಿಯೋ ವೈರಲ್‌

Published : May 03, 2022, 09:40 AM ISTUpdated : May 03, 2022, 10:05 AM IST
ಕುಡಿದು ತೂರಾಡಿದ ಮಹಿಳಾ ಅಧಿಕಾರಿ : ವಿಡಿಯೋ ವೈರಲ್‌

ಸಾರಾಂಶ

ಮಹಿಳಾ ಅಧಿಕಾರಿಯ ವಿಡಿಯೋ ವೈರಲ್ ಕುಡಿದು ತೂರಾಡಿದ ಮಹಿಳಾ ಅಧಿಕಾರಿ ಉಪ ಕಾರ್ಮಿಕ ಆಯುಕ್ತೆ ರಚನಾ ಕೇಸರ್ವಾನಿ

ಜನ ಸಾಮಾನ್ಯರು ಕುಡಿದು ತೂರಾಡುವುದು ಸಾಮಾನ್ಯ. ಕುಡಿದು ಚರಂಡಿಯಲ್ಲಿ ರಸ್ತೆಯಲ್ಲಿ ಬಸ್‌ ನಿಲ್ದಾಣದಲ್ಲಿ ಹೀಗೆ ಎಲ್ಲೆಂದರಲ್ಲಿ ಬಿದ್ದಿರುವ ಸಾಮಾನ್ಯ ವ್ಯಕ್ತಿಗಳನ್ನು ನೀವು ನೋಡಿರಬಹುದು. ಆದರೆ ಉತ್ತರ ಪ್ರದೇಶದಲ್ಲಿ ಮಹಿಳಾ ಅಧಿಕಾರಿಯೇ ಕುಡಿದು ತೂರಾಡಿದ್ದಲ್ಲದೆ. ಮಹಿಳಾ ಪೊಲೀಸ್ ಅಧಿಕಾರಿಗೆ ಕಿರುಕುಳ ನೀಡಿದ್ದಾರೆ. ಉತ್ತರಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ ಈ ಘಟನೆ ನಡೆದಿದೆ. ಕುಡಿದು ತೂರಾಡುತ್ತಿರುವ ಮಹಿಳಾ ಅಧಿಕಾರಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ  ಉತ್ತರ ಪ್ರದೇಶದ ಆಡಳಿತವು ತನಿಖೆಗೆ ಆದೇಶಿಸಿದೆ.

ಇನ್ನು ಹೀಗೆ ಕುಡಿದು ತೂರಾಡಿದ ಮಹಿಳಾ ಅಧಿಕಾರಿಯನ್ನು ದೇವಿಪತನ್ ಮಂಡಲ್‌ನ (Devipatan Mandal) ಉಪ ಕಾರ್ಮಿಕ ಆಯುಕ್ತೆ ರಚನಾ ಕೇಸರ್ವಾನಿ (Rachna Kesarwani) ಎಂದು ಗುರುತಿಸಲಾಗಿದೆ. ಈಕೆ ಕುಡಿದು ತೂರಾಡಿದ್ದಲ್ಲದೇ ಪೊಲೀಸರಿಗೂ ಬೆದರಿಕೆಯೊಡ್ಡಿದ್ದಾರೆ ಎಂದು ಆದೇಶಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ. 

ಬಹ್ರೈಚ್ ಜಿಲ್ಲೆಯ ಜರ್ವಾಲ್ ರಸ್ತೆ (Jarwal Road) ಪೋಲಿಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವೀಡಿಯೊದಲ್ಲಿ ಮಹಿಳಾ ಅಧಿಕಾರಿ ರಚನಾ ಕೇಸರ್ವಾನಿ ಕುಡಿದು ಪೊಲೀಸ್ ಅಧಿಕಾರಿಗಳೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು. ನಾನು ವಿಭಾಗೀಯ ಮಟ್ಟದ ಅಧಿಕಾರಿ, ಜಿಲ್ಲಾ ಮಟ್ಟದಲ್ಲ; ನಾನು ಕಮಿಷನರ್ ಜೊತೆ ಮಾತನಾಡುತ್ತೇನೆ ಎಂದು ಹೇಳುತ್ತಾ ಅಧಿಕಾರಿ ರಚನಾ ಕೇಸರ್ವಾನಿ ಬಹ್ರೈಚ್ ಪೊಲೀಸರಿಗೆ ಬೆದರಿಕೆ ಹಾಕುತ್ತಿರುವುದು ಮತ್ತು ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ಗಲಾಟೆಯನ್ನು ಸೃಷ್ಟಿಸುತ್ತಿರುವುದನ್ನು ಕಾಣಬಹುದು. ಏತನ್ಮಧ್ಯೆ, ಒಬ್ಬ ಮಹಿಳಾ ಕಾನ್ಸ್‌ಟೇಬಲ್, ಈ ಅಧಿಕಾರಿಯನ್ನು  ಕಾರಿನಲ್ಲಿ ಕೂರಿಸಲು ಪ್ರಯತ್ನಿಸುತ್ತಾರೆ. ಆದರೆ ಅಧಿಕಾರಿ ಪದೇ ಪದೇ ಹೊರಬರಲು ಮತ್ತು ಡ್ರೈವಿಂಗ್ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಾರೆ ಅಲ್ಲದೇ ನಾನು ಬೀಳುವುದಿಲ್ಲ ಎಂದು ಹೇಳುತ್ತಾರೆ.

ವಿದೇಶದಲ್ಲಿ ಲಕ್ಷಗಟ್ಟಲೆ ಸಂಪಾದನೆಯ ಕೆಲಸ ಬಿಟ್ಟು ದೇಶ ಸೇವೆಗಾಗಿ ಪೊಲೀಸ್‌ ಆದ Neha Pachisia

ಘಟನೆಯ ನಂತರ, ಪೊಲೀಸರು ಭಾನುವಾರ (ಏ.1) ವೈರಲ್ ವೀಡಿಯೊವನ್ನು ಉತ್ತರ ಪ್ರದೇಶದ ಕಾರ್ಮಿಕ ಇಲಾಖೆಗೆ ನೀಡಿ ಅಧಿಕಾರಿಯ ವಿರುದ್ಧ ತನಿಖೆಗೆ ವಿನಂತಿಸಿದ್ದಾರೆ. ಈ ಬಗ್ಗೆ ಜರ್ವಾಲ್ ರೋಡ್ ಪೊಲೀಸ್ ಠಾಣೆ (Jarwal Road Police Station) ಪ್ರಭಾರಿ ರಾಜೇಶ್ ಕುಮಾರ್ ಸಿಂಗ್ (Rajesh Kumar Singh) ಮಾತನಾಡಿ, ಏಪ್ರಿಲ್ 27 ರಂದು ಮಹಿಳಾ ಅಧಿಕಾರಿ ಲಕ್ನೋದಿಂದ (Lucknow) ಗೊಂಡಾದಲ್ಲಿರುವ (Gonda) ತನ್ನ ಕಚೇರಿಗೆ ತನ್ನದೇ ಆದ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದಳು. ಆದರೆ ಈ ವೇಳೆ ದಾರಿ ತಪ್ಪಿದ್ದು, ನಂತರ ಮಹಿಳೆಯ ಕಾರು ಬಹ್ರೈಚ್ ಕಡೆಗೆ ತಿರುಗಿ ಬಹ್ರೈಚ್ ರಸ್ತೆಯಲ್ಲಿ (Bahraich road) ಡಿವೈಡರ್‌ಗೆ (divider) ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು.

ಮಂಡ್ಯದಲ್ಲಿ ಎಸಿಬಿ ಬಲೆಗೆ ಬಿದ್ದ ಲೇಡಿ ಆಫಿಸರ್.. ಎಷ್ಟು ತಗೋತಿದ್ರು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ