ಫೈನಲ್ ಡಿಗ್ರಿ ಪರೀಕ್ಷೆ ಕಡ್ಡಾಯ: ಸೆ.30ರೊಳಗೆ ಪರೀಕ್ಷೆಗೆ ಕಟ್ಟಪ್ಪಣೆ!

Published : Aug 29, 2020, 07:30 AM ISTUpdated : Aug 29, 2020, 10:16 AM IST
ಫೈನಲ್ ಡಿಗ್ರಿ ಪರೀಕ್ಷೆ ಕಡ್ಡಾಯ: ಸೆ.30ರೊಳಗೆ ಪರೀಕ್ಷೆಗೆ ಕಟ್ಟಪ್ಪಣೆ!

ಸಾರಾಂಶ

ಅಂತಿಮ ವರ್ಷದ ಪರೀಕ್ಷೆ ಕಡ್ಡಾಯ| ಪರೀಕ್ಷೆ ನಡೆಸದೆ ಪಾಸು ಮಾಡುವಂತಿಲ್ಲ: ಸುಪ್ರೀಂ| ಸೆ.30ರೊಳಗೆ ಪರೀಕ್ಷೆಗೆ ಕಟ್ಟಪ್ಪಣೆ| ಪರೀಕ್ಷೆ ನಡೆಸಲು ಸಾಧ್ಯವಾಗದಿದ್ದರೆ ಮುಂದೂಡಿ, ಹೊಸ ದಿನಾಂಕ ಪಡೆದುಕೊಳ್ಳಿ

ನವದೆಹಲಿ(ಆ.29): ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಸುಪ್ರೀಂಕೋರ್ಟ್‌, ಯುಜಿಸಿ ನಿಯಮದಂತೆ ಸೆ.30ರೊಳಗೆ ಈ ಪರೀಕ್ಷೆಗಳನ್ನು ನಡೆಸಬೇಕು ಎಂದು ಎಲ್ಲಾ ರಾಜ್ಯಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ತಾಕೀತು ಮಾಡಿದೆ.

ಬಾಂಬೆ ಐಐಟಿಯ ಡಿಜಿಟಲ್ ಘಟಿಕೋತ್ಸವ: ವರ್ಚುವಲ್ ವಿದ್ಯಾರ್ಥಿಗಳಿಗೆ ಡಿಗ್ರಿ, ಪದಕ!

ಸೆ.30ರೊಳಗೆ ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳು ಅಂತಿಮ ವರ್ಷದ ಕೋರ್ಸ್‌ಗಳಿಗೆ ಪರೀಕ್ಷೆಗಳನ್ನು ನಡೆಸಬೇಕು ಎಂದು ಈ ಹಿಂದೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತ್ತು. ಆದರೆ, ದೆಹಲಿ, ಮಹಾರಾಷ್ಟ್ರ ಮುಂತಾದ ಸರ್ಕಾರಗಳು ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಪರೀಕ್ಷೆಗಳನ್ನೇ ರದ್ದುಪಡಿಸಿದ್ದವು. ಮಹಾರಾಷ್ಟ್ರದ ಆಡಳಿತಾರೂಢ ಪಕ್ಷವಾಗಿರುವ ಶಿವಸೇನೆಯ ಯುವ ಘಟಕವಾದ ಯುವ ಸೇನೆಯು ಸುಪ್ರೀಂಕೋರ್ಟ್‌ನಲ್ಲಿ ಯುಜಿಸಿಯ ಮಾರ್ಗದರ್ಶಿ ಸೂತ್ರಗಳನ್ನು ಪ್ರಶ್ನಿಸಿತ್ತು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಶುಕ್ರವಾರ ಮೇಲಿನ ಆದೇಶ ನೀಡಿದೆ.

ಶೇ.27ರಷ್ಟುವಿದ್ಯಾರ್ಥಿಗಳ ಬಳಿ ಇಲ್ಲ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌ಗಳು!!

ಕೊರೋನಾ ವೈರಸ್‌ನಿಂದಾಗಿ ಸೆ.30ರೊಳಗೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎನ್ನುವ ರಾಜ್ಯ ಸರ್ಕಾರಗಳು ಯುಜಿಸಿಗೆ ಮನವಿ ಮಾಡಿ ಹೊಸ ದಿನಾಂಕ ಪಡೆದುಕೊಳ್ಳಬೇಕು. ವಿಪತ್ತು ನಿರ್ವಹಣಾ ಕಾಯ್ದೆಯಡಿ ಪರೀಕ್ಷೆಗಳನ್ನು ಮುಂದೂಡಲು ರಾಜ್ಯಗಳಿಗೆ ಅಧಿಕಾರವಿದೆ. ಆದರೆ, ಪರೀಕ್ಷೆ ನಡೆಸದೆ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಪಾಸು ಮಾಡುವಂತಿಲ್ಲ ಎಂದು ನ್ಯಾ| ಆರ್‌.ಎಸ್‌.ರೆಡ್ಡಿ ಮತ್ತು ಎಂ.ಆರ್‌.ಶಾ ಅವರ ಪೀಠ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಂಡ ಇಸ್ರೇಲ್‌ನಲ್ಲಿ ಶವವಾಗಿ ಪತ್ತೆಯಾದ ಬಳಿಕ ಭಾರತದಲ್ಲಿ ದುರಂತ ಅಂತ್ಯಕಂಡ ಪತ್ನಿ, ಮಗು ಅನಾಥ
ಡ್ರೋನ್ ಪ್ರತಾಪ್ ಮೊಬೈಲ್‌ 'wallpaper'ನಲ್ಲಿ ಕಿಚ್ಚ ಸುದೀಪ್-ಪ್ರಿಯಾ ಸುದೀಪ್.. ಏನ್ ಇದರ ರಹಸ್ಯ?