2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾದ ಬಳಿಕ ಲೋಕ ಸಭೆ ಹಾಗೂ ವಿಧಾನ ಸಭೆ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಹೆಸರು ಹೇಳಿ ಹಲವು ಬಿಜೆಪಿ ನಾಯಕರು ಗೆಲುವು ಸಾಧಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಕೇವಲ ಮೋದಿ ಹೆಸರು ಹೇಳಿ ಮತದಾರರನ್ನ ಗೆಲ್ಲಬಹುದು ಎಂಬ ಅತೀಯಾದ ಆತ್ಮವಿಶ್ವಾಸ ಬೇಡ, ಕೆಲಸ ಮಾಡಿ ಮತದರಾರರನ್ನು ಗೆಲ್ಲಿ ಎಂದು ರಾಜ್ಯಧ್ಯಕ್ಷ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಉತ್ತರಖಂಡ(ಆ.28): ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ಭಾರತದಲ್ಲಿ ನಡೆದ ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ನಾಯಕರು ಮೋದಿ ಹೆಸರು ಬಳಸಿದ್ದಾರೆ. ಲೋಕಸಭೆ, ವಿಧಾನಸಭೆ ಮಾತ್ರವಲ್ಲ, ಪಂಚಾಯತ್ ಮಟ್ಟದಲ್ಲಿ ನಡೆದ ಚುನಾವಣೆಗಳಲ್ಲೂ ಮೋದಿ ಹೆಸರು ಬಳಕೆ ಮಾಡಿದ ಬಿಜೆಪಿ ಮುಖಂಡರು ನಿರಾಯಾಸವಾಗಿ ಗೆದ್ದಿದ್ದಾರೆ. ಗೆದ್ದ ಬಳಿಕ ಮುಂದಿನ ಚುನಾವಣೆಗೆ ಪ್ರತ್ಯಕ್ಷರಾದ ಹಲವು ಮುಖಂಡರು ಇದ್ದಾರೆ. ಇದೀಗ ಉತ್ತರಖಂಡ ಬಿಜೆಪಿ ರಾಜ್ಯಾಧ್ಯಕ್ಷ ಬನ್ಸಿಧರ್ ಭಗತ್, ಬಿಜೆಪಿ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕೊರೋನಾ ಸಮರಕ್ಕೆ ಸರ್ಕಾರದ ದಿಟ್ಟ ಹೆಜ್ಜೆ: ಎಲ್ಲಾ ಶಾಸಕರ ವೇತನ ಕಡಿತ, ಸುಗ್ರೀವಾಜ್ಞೆ!
ಪ್ರತಿ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿ ಗೆಲುವು ಸಾಧಿಸುವುದನ್ನು ನಿಲ್ಲಿಸಿ. ಜನರ ಸಮಸ್ಸೆ ಆಲಿಸಿ, ಆಯಾ ಕ್ಷೇತ್ರದಲ್ಲಿ ಜನಪರ ಕೆಲಸ ಕಾರ್ಯಗಳನ್ನು ಮಾಡಿ. ಹೆಚ್ಚು ಸಕ್ರೀಯವಾಗಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಿ. ಹೀಗಾದರೆ ಮಾತ್ರ ಗೆಲುವು ಸಾಧ್ಯ ಎಂದು ಬನ್ಸಿಧರ್ ಭಗತ್ ಎಚ್ಚರಿಕೆ ನೀಡಿದ್ದಾರೆ.
ಉತ್ತರಾಖಂಡ್‌ನಲ್ಲಿನ್ನು ಚೈನೀಸ್ ವಸ್ತು ಬಳಕೆ ಇಲ್ಲ..!
2022ರಲ್ಲಿ ಉತ್ತರಖಂಡ ಚುನಾವಣೆ ನಡಯಲಿದೆ. ಜನರು ಈಗಾಗಲೇ ಮೋದಿ ಹೆಸರಿಗೆ ಮತ ನೀಡಿದ್ದಾರೆ. ಮೋದಿ ಹೆಸರು ಹೇಳಿ ಮತ ಪಡೆದ ಎಲ್ಲರು ಜನರಿಗೆ ಏನು ಮಾಡಿದ್ದೀರಿ? ಮತ್ತೆ ಮೋದಿ ಹೆಸರು ಹೇಳಿ ಮತಕೇಳಲು ಹೋದರೆ ಜನರು ಮತ ನೀಡುವುದಿಲ್ಲ. ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿ, ಕ್ಷೇತ್ರದ ಅಭಿವೃದ್ದಿಯತ್ತ ಕೆಲಸಗಳನ್ನು ಮಾಡಿ ಎಂದು ಬನ್ಸೀಧರ್ ಹೇಳಿದ್ದಾರೆ.
ಮುಖಂಡರ ಕೆಲಸ ಕಾರ್ಯಗಳು, ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗೆ ಪರಿಹಾರ ಎಲ್ಲಾ ಆಯಾಮಗಳನ್ನು ಗಮನಿಸಿ ಮುಂಬರುವ ಚುನಾವಣೆಗೆ ಟಿಕೆಟ್ ನೀಡಲಾಗುವುದು ಎಂದಿದ್ದಾರೆ. ಬನ್ಸೀಧರ್ ಹೇಳಿಕೆಯನ್ನು ಉತ್ತರಖಂಡ್ ಕಾಂಗ್ರೆಸ್ ಶ್ಲಾಘಿಸಿದೆ. ಈಗಲಾದರೂ ಉತ್ತರಖಂಡ ಬಿಜೆಪಿಗರಿಗೆ ಮೋದಿ ಅಲೆ ಅಂತ್ಯವಾಗಿದೆ ಎಂದು ಅರ್ಥವಾಗಿದೆ. ಈ ಕುರಿತು ದಿಟ್ಟ ಹೇಳಿಕೆ ನೀಡಿದ ಬನ್ಸೀಧರ್‌ಗೆ ಅಭಿನಂದನೆಗಳು ಎಂದು ಉತ್ತರಖಂಡ ಕಾಂಗ್ರೆಸ್ ಉಪಾಧ್ಯಕ್ಷ ಸೂರ್ಯಕಾಂತ್ ದಾಸ್ಮಮಾನ ಹೇಳಿದ್ದಾರೆ
2017ರ ಚುನಾವಣೆ:
2017ರಲ್ಲಿ ನಡೆದ ಉತ್ತರಖಂಡ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತ್ತು. 70 ಸ್ಥಾನದಲ್ಲಿ 57 ಸ್ಥಾನ ಗೆಲ್ಲೋ ಮೂಲಕ ಅತೀ ದೊಡ್ಡ ಪಕ್ಷವಾಗಿ ಬೆಜೆಪಿ ಅಧಿಕಾರಕ್ಕೆ ಬಂದಿತ್ತು. ಆಡಳಿತಾರೂಢ ಕಾಂಗ್ರೆಸ್ ಕೇವಲ 11 ಸ್ಥಾನಗಳನ್ನು ಗೆದ್ದು ತೀವ್ರ ಮುಖಭಂಗ ಅನುಭವಿಸಿ್ತ್ತು. ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಎರಡು ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು.
ಕೋವಿಡ್ ಹಗರಣ, ಗಲಭೆಯಲ್ಲಿ ಭಿಎಸ್‌ವೈ ಸರ್ಕಾರದ ವೈಫಲ್ಯ: ಕಟೀಲ್ ಬಿಚ್ಚಿಟ್ರು ವಿಷ್ಯ...