16.3 ಕೋಟಿ ಜನರಿಂದ ಅಯೋಧ್ಯೆ ಮಂದಿರ ಪೂಜೆ ಕಾರ‍್ಯಕ್ರಮ ವೀಕ್ಷಣೆ

By Suvarna NewsFirst Published Aug 28, 2020, 4:53 PM IST
Highlights

ಆಗಸ್ಟ್ 05ರಂದು ಅಯೋಧ್ಯೆಯಲ್ಲಿ ನಡೆದ ಭೂಮಿ ಪೂಜೆ ಕಾರ್ಯಕ್ರಮವನ್ನು ದೇಶದ ಸುಮಾರು 16 ಕೋಟಿ ಮಂದಿ ವೀಕ್ಷಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ(ಆ.28): ಹಿಂದುಗಳ ಶತಮಾನದ ಕನಸಾದ ಅಯೋಧ್ಯೆ ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸುವ ಕಾರ್ಯಕ್ರಮವನ್ನು 198 ಟೀವಿ ಚಾನಲ್‌ಗಳಲ್ಲಿ ಬರೋಬ್ಬರಿ 16.3 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. 

ಇದೇ ವೇಳೆ, ಮನರಂಜನಾ ವಾಹಿನಿಗಳಿಂದ ವೀಕ್ಷಕರು ಸುದ್ದಿ ವಾಹಿನಿಗಳಿಗೆ ವರ್ಗವಾಗುತ್ತಿದ್ದಾರೆ. ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣವನ್ನು ಹೆಚ್ಚಿನ ಜನರು ನೋಡುತ್ತಿದ್ದಾರೆ ಎಂದು ಟೀವಿ ವಾಹಿನಿಗಳ ರೇಟಿಂಗ್‌ ಸಂಸ್ಥೆಯಾದ ಬಾರ್ಕ್ ತಿಳಿಸಿದೆ. ಅಯೋಧ್ಯೆ ಕಾರ್ಯಕ್ರಮವನ್ನು ಹೆಚ್ಚಿನ ಜನರು ವೀಕ್ಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ ಭಾಷಣಗಳಿಗಿಂತ ಹೆಚ್ಚು ಜನರು ಇದನ್ನು ನೋಡಿದ್ದಾರೆ ಎಂದು ಹೇಳಿದೆ.

ಬೆಳಗಾವಿಯಿಂದ ಅಯೋಧ್ಯೆಗೆ ರೈಲು: ಕೇಂದ್ರ ಸಚಿವ ಅಂಗಡಿ

ಆಗಸ್ಟ್ 05ರಂದು ಅಯೋಧ್ಯೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ 135 ಧಾರ್ಮಿಕ ಮುಖಂಡರು ಸೇರಿದಂತೆ 175 ಮಂದಿ ಗಣ್ಯರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಳೆದ ವರ್ಷದ ನವೆಂಬರ್‌ನಲ್ಲಿ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಸುಪ್ರೀಂ ಕೋರ್ಟ್ ಬಗೆಹರಿಸಿತ್ತು.

ಆದರೆ ಬಾರ್ಕ್ ವರದಿಯ ಪ್ರಕಾರ ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಎರಡನೇ ಹಂತದ ಲಾಕ್‌ಡೌನ್ ಘೋಷಣೆ ಸಂದರ್ಭದಲ್ಲಿ ಆದ ವೀಕ್ಷಣೆಯನ್ನು ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ಏಪ್ರಿಲ್ 14ರಂದು ಮೋದಿ ಭಾಷಣವನ್ನು 199 ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದ್ದವು, ಆಗ ಆ ಭಾಷಣವನ್ನು 20.3 ಕೋಟಿ ಮಂದಿ ವೀಕ್ಷಿಸಿದ್ದರು.

"

click me!