ಕೋಲ್ಕತ್ತಾ ವೈದ್ಯೆಯ ರೇಪ್‌ & ಮರ್ಡರ್‌: ದೋಷಿ ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್‌

Published : Jan 20, 2025, 02:57 PM ISTUpdated : Jan 20, 2025, 03:09 PM IST
ಕೋಲ್ಕತ್ತಾ ವೈದ್ಯೆಯ ರೇಪ್‌ & ಮರ್ಡರ್‌: ದೋಷಿ ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್‌

ಸಾರಾಂಶ

ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಲಾಗಿದೆ. ಈ ಪ್ರಕರಣವು ಮರಣದಂಡನೆಗೆ ಅರ್ಹವಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೋಲ್ಕತ್ತಾ (ಜ.20): ಕೋಲ್ಕತ್ತಾದ ಟ್ರೈನಿ ವೈದ್ಯೆ ಮೇಲಿನ ರೇಪ್‌ & ಮರ್ಡರ್ ಕೇಸ್‌ ಪ್ರಕರಣದಲ್ಲಿ ದೋಷಿ ಎಂದು ಹೇಳಲಾಗಿರುವ ಸಂಜಯ್‌ ರಾಯ್‌ಗೆ ಕೋಲ್ಕತ್ತಾದ ಕೋರ್ಟ್‌ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದು ಮರಣದಂಡನೆ ವಿಧಿಸುವಂತ ಅಪರೂಪದಲ್ಲಿ ಅಪರೂಪದ ಪ್ರಕರಣವಲ್ಲ ಎಂದು ಈ ವೇಳೆ ಕೋರ್ಟ್‌ ಹೇಳಿದೆ. ಕೋಲ್ಕತ್ತಾದ ಸೀಲ್ಡಾ ಸಿಬಿಐ ಕೋರ್ಟ್ ಸೋಮವಾರ ತನ್ನ ತೀರ್ಪು ಪ್ರಕಟ ಮಾಡಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಕೋಲ್ಕತ್ತಾದ ಆರ್‌ಜಿ ಖಾರ್‌ ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆಯ ರೇಪ್‌ & ಮರ್ಡರ್‌ ನಡೆದಿತ್ತು. ಅದರ ಮರುದಿನ ಪೊಲೀಸರು ಆರೋಪಿ ಸಂಜಯ್‌ ರಾಯ್‌ರನ್ನು ಬಂಧಿಸಿತ್ತು. ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಂಜಯ್‌ ರಾಯ್‌ ಕೆಲಸ ಮಾಡುತ್ತಿದ್ದ.ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌, ಕಳೆದ ಶನಿವಾರ ಈತನನ್ನು ದೋಷಿ ಎಂದು ತೀರ್ಪು ನೀಡಿತ್ತು. ಸೀಲ್ಡಾ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಈ ತೀರ್ಪನ್ನು ಪ್ರಕಟಿಸಿದರು.

ಕೋಲ್ಕತಾ ವೈದ್ಯೆ ಕೇಸ್ ತೀರ್ಪು ಪ್ರಕಟಿಸುತ್ತಿದ್ದಂತೆ ಆರೋಪಿ ಸಂಜಯ್ ರುದ್ರಾಕ್ಷಿ ಧರಿಸುತ್ತೇನೆ ಎಂದಿದ್ಯಾಕೆ?

"ಇದು ಅಪರೂಪದ ಪ್ರಕರಣಗಳಲ್ಲಿ ಅಪರೂಪದ ಪ್ರಕರಣವಲ್ಲ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ನಾನು ನಿಮಗೆ ಸಾಯುವವರೆಗೂ ಜೈಲು ಶಿಕ್ಷೆಯನ್ನು ವಿಧಿಸುತ್ತಿದ್ದೇನೆ" ಎಂದು ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುತ್ತಾ ಹೇಳಿದರು. ಶನಿವಾರದ ವಿಚಾರಣೆಯ ಸಮಯದಲ್ಲಿ ಶಿಕ್ಷೆಯ ಪ್ರಮಾಣದ ಬಗ್ಗೆ ಏನಾದರೂ ಹೇಳಲು ಇದೆಯೇ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾಗ, ಸಂಜಯ್ ರಾಯ್ ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದರು.

ಕೋಲ್ಕತ್ತಾ ವೈದ್ಯೆಯ ರೇಪ್‌ & ಮರ್ಡರ್‌ ಕೇಸ್‌: ಸಂಜಯ್‌ ರಾಯ್‌ ದೋಷಿ ಎಂದ ಕೋರ್ಟ್‌, 20ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

"ಯಾವುದೇ ಕಾರಣವಿಲ್ಲದೆ ನನ್ನನ್ನು ಆರೋಪಿಸಲಾಗಿದೆ. ನಾನು ಯಾವಾಗಲೂ ರುದ್ರಾಕ್ಷ ಸರಪಳಿಯನ್ನು ಧರಿಸುತ್ತೇನೆ ಎಂದು ನಾನು ನಿಮಗೆ ಮೊದಲೇ ಹೇಳಿದ್ದೆ. ನಾನು ಅಪರಾಧ ಮಾಡಿದ್ದರೆ, ಅದು ಅಪರಾಧದ ಸ್ಥಳದಲ್ಲಿ ಮುರಿಯುತ್ತಿತ್ತು. ನನಗೆ ಮಾತನಾಡಲು ಅವಕಾಶವಿರಲಿಲ್ಲ. ಅವರು ನನ್ನನ್ನು ಅನೇಕ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದರು. ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ನೀವು ಇದನ್ನೆಲ್ಲಾ ನೋಡಿದ್ದೀರಿ ಸರ್. ನಾನು ನಿಮಗೆ ಮೊದಲೇ ಹೇಳಿದ್ದೆ, ”ಎಂದು ರಾಯ್ ನ್ಯಾಯಾಲಯದಲ್ಲಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ