ಅಖಾರದಿಂದ ಹೊರ ಬಂದ ಐಐಟಿಯನ್ ಬಾಬಾ ಹೇಳಿದ್ದೇನು?

Published : Jan 20, 2025, 01:45 PM ISTUpdated : Jan 20, 2025, 02:17 PM IST
ಅಖಾರದಿಂದ ಹೊರ ಬಂದ ಐಐಟಿಯನ್ ಬಾಬಾ ಹೇಳಿದ್ದೇನು?

ಸಾರಾಂಶ

144 ವರ್ಷಗಳ ಮಹಾ ಕುಂಭಮೇಳದಲ್ಲಿ ಐಐಟಿಯನ್ ಬಾಬಾ ಅಲಿಯಾಸ್ ಅಭಯ್ ಬಾಬಾ, ಗುರುವಿಗೆ ಅವಮಾನ ಮಾಡಿದ್ದಕ್ಕೆ ಜುನಾ ಅಖಾಡದಿಂದ ಹೊರಹಾಕಲ್ಪಟ್ಟಿದ್ದಾರೆ. ಜನಪ್ರಿಯತೆ ಹೆಚ್ಚುತ್ತಿರುವುದೇ ಇದಕ್ಕೆ ಕಾರಣ ಎಂದು ಬಾಬಾ ಆರೋಪಿಸಿದ್ದಾರೆ. ಐಐಟಿ ಪದವೀಧರರಾದ ಬಾಬಾ, ಸನ್ಯಾಸತ್ವ ಸ್ವೀಕರಿಸಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಈಗ ಬೇರೆ ಸಂತರ ಆಶ್ರಯ ಪಡೆದಿದ್ದಾರೆ.

144 ವರ್ಷಗಳ ನಂತ್ರ ನಡೆಯತ್ತಿರುವ ಮಹಾ ಕುಂಭ ಮೇಳ (Maha Kumbh Mela)ದಲ್ಲಿ ಸಾಕಷ್ಟು ವಿಷ್ಯಗಳು ಗಮನ ಸೆಳೆಯುತ್ತಿವೆ. ಒಂದ್ಕಡೆ ಲಕ್ಷಾಂತರ ಮಂದಿ ಭಕ್ತರ ಪುಣ್ಯ ಸ್ನಾನ (holy bath)ವಾದ್ರೆ ಇನ್ನೊಂದು ಕಡೆ ವಿಚಿತ್ರವಾಗಿರುವ ಭಯಂಕರವಾಗಿರುವ ನಾಗಾ ಸಾಧುಗಳು. ಮತ್ತೊಂದು ಕಡೆ ಸನ್ಯಾಸಿ (monk), ಸಾದ್ವಿಗಳು ಪ್ರಸಿದ್ಧಿಗೆ ಬರ್ತಿದ್ದಾರೆ. ನಿರೂಪಕಿಯಾಗಿದ್ದ ಹರ್ಷ ರಿಚಾರಿಯಾ ಒಂದ್ಕಡೆ ಚರ್ಚೆಯಲ್ಲಿದ್ರೆ ಇನ್ನೊಂದು ಕಡೆ ಸುಂದರ ಕಣ್ಣಿನ ಬೆಡಗಿ ಎಲ್ಲರ ಗಮನ ಸೆಳೆದಿದ್ದಾಳೆ. ಈ ಎಲ್ಲರ ಮಧ್ಯೆ ಐಐಟಿಯನ್ ಬಾಬಾ ವಿವಾದಕ್ಕೀಡಾಗಿದ್ದಾರೆ. ಐಐಟಿಯನ್ ಬಾಬಾ (IITian Baba) ಎಂದೇ ಪ್ರಸಿದ್ಧಿ ಪಡೆದಿರುವ ಇಂಜಿನಿಯರ್ ಅಭಯ್ ಬಾಬಾ (Abhay Baba)ರನ್ನು ಜುನಾ ಅಖಾರದಿಂದ ಕಿತ್ತು ಹಾಕಲಾಗಿದೆ ಎಂಬ ಸುದ್ದಿ ಇದೆ. ಅಭಯ್ ಬಾಬಾ, ತಮ್ಮ ಗುರು ಮಹಂತ್ ಸೋಮೇಶ್ವರ ಪುರಿ (Mahant Someshwar Puri)ಗೆ  ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಅವರನ್ನು ಅಖಾರದಿಂದ ಹೊರಗೆ ಕಳುಹಿಸಲಾಗಿದೆ ಎನ್ನಲಾಗ್ತಿದೆ. ಆದ್ರೆ ತಮ್ಮ ಮೇಲೆ ಬಂದ ಆರೋಪವನ್ನು ಅಭಯ್ ಬಾಬಾ ತಳ್ಳಿ ಹಾಕಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅಭಯ್ ಬಾಬಾ, ಜುನಾ ಅಖಾರ ತನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿದೆ. ನನ್ನ ಜನಪ್ರಿಯತೆ ಹೆಚ್ಚುತ್ತಿರುವ ಕಾರಣ, ಸಾಧುಗಳು ನನ್ನನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಭಯ್ ಬಾಬಾ ಆರೋಪಿಸಿದ್ದಾರೆ. ನಾನು ಪ್ರಸಿದ್ಧಿಗೆ ಬರ್ತಿದ್ದೇನೆ, ಅಖಾರದ ಗುಟ್ಟನ್ನು ಬಹಿರಂಗಪಡಿಸಿದ್ರೆ ಎನ್ನುವ ಕಾರಣಕ್ಕೆ ಅವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.  ನಾನು ರಹಸ್ಯ ಧ್ಯಾನಕ್ಕೆ ಹೋಗಿದ್ದೇನೆ ಎಂದು ಅಭಯ್ ಬಾಬಾ ಹೇಳಿದ್ದಾರೆ. 

ಲಕ್ಷಗಟ್ಟಲೆ ವೇತನ ಬಿಟ್ಟು, ಎಲ್ಲವನ್ನು ತೊರೆದು ಆಧ್ಯಾತ್ಮಿಕತೆಗೆ ಜೀವನ ಮುಡಿಪಿಟ್ಟ ಐಐಟಿಯ 12 ಸನ್ಯಾಸಿಗಳು!

ಅಭಯ್ ಬಾಬಾ ಅಲಿಯಾಸ್ ಐಐಟಿಯುನ್ ಬಾಬಾ, ಅವರ ಗುರುವಿಗೆ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು. ಅಖಾರದ ಮಹಂತ್ ಸೋಮೇಶ್ವರ ಪುರಿ ಅವರನ್ನು ಹುಚ್ಚ ಎಂದಿದ್ದರು. ತಮ್ಮ ತಂದೆಯನ್ನು ಹಿರಣ್ಯಕಶಿಪು ಎಂದಿದ್ದರು. ಅವರ ಈ ಹೇಳಿಕೆಗೆ ಅಖಾರ ಪ್ರತಿಕ್ರಿಯೆ ನೀಡಿತ್ತು. ಅವರನ್ನು ಶನಿವಾರ ಅಖಾರದಿಂದ ಹೊರಗೆ ಹಾಕಲಾಗಿತ್ತು. ಗುರುವಿನ ಕಡೆಗೆ ಶಿಸ್ತು ಮತ್ತು ಭಕ್ತಿ ಅತಿ ಮುಖ್ಯ. ಈ ತತ್ವವನ್ನು ಅನುಸರಿಸಲು ವಿಫಲರಾದವರು ಸನ್ಯಾಸಿಯಾಗಲು ಸಾಧ್ಯವಿಲ್ಲ ಎಂದು ಅಖಾಡ ಹೇಳಿದೆ. ಅಭಯ್ ಸಿಂಗ್ ಅವರ ಕೃತ್ಯವು ಗುರು-ಶಿಷ್ಯ ಸಂಪ್ರದಾಯ ಮತ್ತು ಸನ್ಯಾಸಕ್ಕೆ ವಿರುದ್ಧವಾಗಿದೆ. ನೀವು ನಿಮ್ಮ ಗುರುವನ್ನು ಅವಮಾನಿಸಿದ್ದರೆ, ನಿಮಗೆ ಸನಾತನ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ತೋರಿಸಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಧರ್ಮದ ಬಗ್ಗೆ ಗೌರವವಿಲ್ಲ ಎಂದು ಜುನಾ ಅಖಾಡದ ಮುಖ್ಯಸ್ಥ ಮಹಾಂತ ಹರಿ ಗಿರಿ ಹೇಳಿದ್ದರು. ಇದಾದ್ಮೇಲೆ ಅಭಯ್ ಬಾಬಾ ಪ್ರತಿಕ್ರಿಯೆ ನೀಡಿದ್ದಾರೆ.

ಮಹಾಕುಂಭಮೇಳದಲ್ಲಿ ಸಖತ್ ವೈರಲ್ ಆಗಿರುವ ಈ ಕೃಷ್ಣ ಸುಂದರಿ ಯಾರು?

ಈಗ ಅಭಯ್ ಬಾಬಾ ಎಲ್ಲಿದ್ದಾರೆ? : ಮಾಹಿತಿಯ ಪ್ರಕಾರ, ಜುನಾ ಅಖಾರ ಶಿಬಿರದಿಂದ ಹೊರಹಾಕಲ್ಪಟ್ಟ ನಂತರ, ಬಾಬಾ ಅಭಯ್ ಸಿಂಗ್ ಬೇರೊಬ್ಬ ಸಂತರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗ್ತಿದೆ. ಅಭಯ್ ಸಿಂಗ್ ಹರಿಯಾಣದ ನಿವಾಸಿ. ಅವರು ಐಐಟಿ ಬಾಂಬೆಯಿಂದ ಏರೋಸ್ಪೇಸ್‌ನಲ್ಲಿ ಬಿ.ಟೆಕ್ ಮಾಡಿದ್ದರು. ಉನ್ನತ ಶಿಕ್ಷಣ ಪಡೆದಿದ್ದ ಅಭಯ್ ಸಿಂಗ್  ಕೆಲಸ ಬಿಟ್ಟು ಸನ್ಯಾಸಿ ಜೀವನವನ್ನು ಅಳವಡಿಸಿಕೊಂಡರು. ಮಹಾ ಕುಂಭಮೇಳದ ಅಭಯ್ ಸಿಂಗ್ ಮಾಧ್ಯಮದ ಗಮನಕ್ಕೆ ಬಂದಿದ್ದರು. ಮಾಧ್ಯಮಗಳಲ್ಲಿ, ರೀಲ್ಸ್ ಮೂಲಕ ಅವರು ಸದ್ದು ಮಾಡಿದ್ದರು. ಐಐಟಿಯುನ ಬಾಬಾ ಬಗ್ಗೆಯೇ ಎಲ್ಲರೂ ಮಾತನಾಡ್ತಿದ್ದರು. ಪ್ರಸಿದ್ಧಿ ಹೆಚ್ಚಾಗ್ತಿದ್ದಂತೆ ಅಭಯ್ ಬಾಬಾ ವಿವಾದಕ್ಕೀಡಾಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: Gold Silver Price Today - ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?