ಮುಂದಿನ 20 ವರ್ಷ ಭಾರತದ ಆರ್ಥಿಕತೆ ವಿಶ್ವದಲ್ಲೇ ಅತ್ಯಂತ ವೇಗದ ಪ್ರಗತಿ

By Kannadaprabha News  |  First Published Jan 20, 2023, 9:48 AM IST

ಮುಂದಿನ 10-20 ವರ್ಷಗಳ ಕಾಲ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾದ ಆರ್ಥಿಕ ಪ್ರಗತಿ ಸಾಧಿಸುವ ದೇಶವಾಗಿ ಹೊರಹೊಮ್ಮಲಿದೆ ಎಂದು ಖ್ಯಾತ ಆರ್ಥಿಕ ತಜ್ಞ ಮಾರ್ಟಿನ್‌ ವೋಲ್ಫ್ ಖಚಿತ ನುಡಿಗಳಲ್ಲಿ ಹೇಳಿದ್ದಾರೆ. 


ದಾವೋಸ್‌: ಮುಂದಿನ 10-20 ವರ್ಷಗಳ ಕಾಲ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾದ ಆರ್ಥಿಕ ಪ್ರಗತಿ ಸಾಧಿಸುವ ದೇಶವಾಗಿ ಹೊರಹೊಮ್ಮಲಿದೆ ಎಂದು ಖ್ಯಾತ ಆರ್ಥಿಕ ತಜ್ಞ ಮಾರ್ಟಿನ್‌ ವೋಲ್ಫ್ ಖಚಿತ ನುಡಿಗಳಲ್ಲಿ ಹೇಳಿದ್ದಾರೆ. 

‘ಫೈನಾನ್ಷಿಯಲ್‌ ಟೈಮ್ಸ್‌’ ಪತ್ರಿಕೆಯಲ್ಲಿ ಮುಖ್ಯ ಆರ್ಥಿಕ ವಿಶ್ಲೇಷಕರೂ ಆಗಿರುವ ಮಾರ್ಟಿನ್‌ ಇಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಮಾತನಾಡಿ ‘ಭಾರತದ ಆರ್ಥಿಕತೆಯನ್ನು ನಾನು 70ರ ದಶಕದಿಂದಲೂ ಗಮನಿಸುತ್ತಾ ಬಂದಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಮುಂದಿನ 10-20 ವರ್ಷಗಳ ಅವಧಿಯಲ್ಲಿ ಜಗತ್ತಿನ ದೊಡ್ಡ ಆರ್ಥಿಕತೆಗಳ ಪೈಕಿ ಭಾರತ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಲಿರುವ ದೇಶವಾಗಿ ಹೊರಹೊಮ್ಮಲಿದೆ. ಇದು ಖಚಿತ’ ಎಂದು ಹೇಳಿದ್ದಾರೆ. ಇದುವರೆಗೆ ಭಾರತದಲ್ಲಿ ಯಾರು ಉದ್ಯಮ ಹೊಂದಿಲ್ಲವೋ ಮತ್ತು ಮುಂದಿನ ದಿನಗಳಲ್ಲಿ ಭಾರತವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ. ಭಾರತದ ಬೆಳವಣಿಗೆ ಅಸಾಧಾರಣವಾಗಿರಲಿದೆ. ಈ ವಿಷಯ ಬಹುತೇಕರಿಗೆ ಗೊತ್ತಾಗಿರಬಹುದು. ಆದರೂ ಈ ವೇದಿಕೆಯಲ್ಲಿ ನಾನು ಮತ್ತೊಮ್ಮೆ ಆ ವಿಷಯವನ್ನು ಪ್ರಸ್ತಾಪಿಸ ಬಯಸುತ್ತೇನೆ ಎಂದು ಹೇಳಿದ್ದಾರೆ.

Tap to resize

Latest Videos

ವಿಶ್ವದಲ್ಲಿ ಆರ್ಥಿಕ ಹಿಂಜರಿತ ಆದರೂ ಲಾಭದಲ್ಲಿ ಭಾರತ

ಚಿಲ್ಲರೆ ಹಣದುಬ್ಬರ ಡಿಸೆಂಬರ್‌ನಲ್ಲಿ ವರ್ಷದಲ್ಲಿಯೇ ಅತ್ಯಂತ ಕಡಿಮೆ!

click me!