ಸರ್ಕಾರ 'ಸುಳ್ಳುಸುದ್ದಿ' ಎಂದಿದ್ದನ್ನು ಆನ್ಲೈನಿಂದ ತೆಗೆಯಬೇಕು: ಕೇಂದ್ರ

By Kannadaprabha NewsFirst Published Jan 20, 2023, 9:31 AM IST
Highlights

ಪಿಐಬಿ ಸುದ್ದಿಗಳ ಸಾಚಾತನ ಪರಿಶೀಲಿಸಿ ‘ಇದು ಸುಳ್ಳು ಸುದ್ದಿ’ ಎಂದು ಹೇಳಿರುತ್ತದೆಯೋ ಅಂತಹ ಸುದ್ದಿಗಳನ್ನು ಯಾರಾದರೂ ಪೋಸ್ಟ್‌ ಮಾಡಿದ್ದರೆ ಫೇಸ್‌ಬುಕ್‌, ಟ್ವೀಟರ್‌ನಂತಹ ಸಾಮಾಜಿಕ ಜಾಲತಾಣಗಳು ತಕ್ಷಣ ತೆಗೆಯಬೇಕು ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ.

ನವದೆಹಲಿ: ಕೇಂದ್ರ ಸರ್ಕಾರದ ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೋ (ಪಿಐಬಿ) ಯಾವ ಸುದ್ದಿಗಳ ಸಾಚಾತನ ಪರಿಶೀಲಿಸಿ ‘ಇದು ಸುಳ್ಳು ಸುದ್ದಿ’ ಎಂದು ಹೇಳಿರುತ್ತದೆಯೋ ಅಂತಹ ಸುದ್ದಿಗಳನ್ನು ಯಾರಾದರೂ ಪೋಸ್ಟ್‌ ಮಾಡಿದ್ದರೆ ಫೇಸ್‌ಬುಕ್‌, ಟ್ವೀಟರ್‌ನಂತಹ ಸಾಮಾಜಿಕ ಜಾಲತಾಣಗಳು ತಕ್ಷಣ ತೆಗೆಯಬೇಕು ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ.

2021ರಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯ (Union Ministry of Electronics and IT) ಪ್ರಕಟಿಸಿದ್ದ ‘ಮಾಹಿತಿ ತಂತ್ರಜ್ಞಾನ (Information Technology)(ಮಧ್ಯವರ್ತಿ ಮಾರ್ಗದರ್ಶಿ ಮತ್ತು ಡಿಜಿಟಲ್‌ ಮೀಡಿಯಾ ನೀತಿಸಂಹಿತೆ) ನಿಯಮಗಳ’ ಕರಡು ಪ್ರತಿಗೆ ಈ ನಿಯಮವನ್ನು ಸೇರ್ಪಡೆ ಮಾಡಿ ಹೊಸ ಪರಿಷ್ಕೃತ ಕರಡು ಪ್ರಕಟಿಸಲಾಗಿದೆ. ಅದರಲ್ಲಿ, ಪಿಐಬಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಫ್ಯಾಕ್ಟ್ ಚೆಕರ್‌ಗಳು ‘ಸುಳ್ಳುಸುದ್ದಿ’ ಎಂದು ಹೇಳಿದ ಸುದ್ದಿ ಅಥವಾ ಲೇಖನಗಳನ್ನು ಜನರು ಸೋಷಿಯಲ್‌ ಮೀಡಿಯಾಗಳಲ್ಲಿ (social media) ಹಂಚಿಕೊಂಡಿದ್ದರೆ ಸೋಷಿಯಲ್‌ ಮೀಡಿಯಾಗಳು ತೆಗೆದುಹಾಕುವುದು ಕಡ್ಡಾಯವಾಗಿದೆ.

ಪರಿಷ್ಕೃತ ಕರಡು ನಿಯಮಕ್ಕೆ ಕಾಂಗ್ರೆಸ್‌ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ವಾಕ್‌ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ರಹಸ್ಯ ದಾಳಿ ಎಂದು ಹೇಳಿದೆ. ಕೂಡಲೇ ಈ ಪರಿಷ್ಕೃತ ನಿಯಮ ವಾಪಸ್‌ ಪಡೆಯುವಂತೆಯೂ ಆಗ್ರಹಿಸಿದೆ.

ಅಭಿವ್ಯಕ್ತಿ- ವಾಕ್ ಸ್ವಾತಂತ್ರ್ಯ ಯಾರಿಗೂ ಸಂಪೂರ್ಣ ಅಧಿಕಾರ ನೀಡುವುದಿಲ್ಲ; ಹೈಕೋರ್ಟ್!

 

click me!