
ನವದೆಹಲಿ: 'ಸಾಮಾನ್ಯ ಜನರ ಸಹಭಾಗಿತ್ವ' ಥೀಮ್ ಅಡಿಯಲ್ಲಿ ಆಯೋಜಿಸಲಾಗುತ್ತಿರುವ ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ವೇದಿಕೆ ಮುಂಭಾಗದ ಸಾಲುಗಳನ್ನು ವಿಐಪಿಗಳ ಬದಲಾಗಿ ಶ್ರಮಜೀವಿಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ರಿಕ್ಷಾ ಎಳೆಯುವವರು, ತರಕಾರಿ ಮಾರುವವರು, ದಿನಸಿ ವ್ಯಾಪಾರಿಗಳು ಮತ್ತು ನವೀಕೃತ ಸೆಂಟ್ರಲ್ವಿಸ್ತಾ ನಿರ್ಮಾಣದಲ್ಲಿ ಭಾಗಿಯಾದ ಕಾರ್ಮಿಕರು ಹಾಗೂ ಅವರ ಕುಟುಂಬ, ಕರ್ತವ್ಯಪಥದ ನಿರ್ವಹಣಾ ಕಾರ್ಮಿಕರಿಗೆ ಮೊದಲ ಸಾಲನ್ನು ಮೀಸಲಿರಿಸಲಾಗಿದೆ. ಇವರುಗಳು ನಿಜವಾಗಲೂ ಗಣರಾಜ್ಯ ದೇಶದ ಪ್ರತಿನಿಧಿಗಳಾಗಿದ್ದಾರೆ. ಹಾಗಾಗಿ ಈ ಬಾರಿ ಸಾಮಾನ್ಯರಿಗೆ ಈ ಬಾರಿ ಅವಕಾಶ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ(chief guest of the Republic Day) ಈಜಿಫ್ಟ್ನ ಅಧ್ಯಕ್ಷ (President of Egypt) ಅಬೆಲ್ ಫತಾಹ್ ಅಲ್-ಸಿಸಿ (Abel Fattah Al-Sisi) ಅವರು ಭಾಗವಹಿಸುತ್ತಿದ್ದಾರೆ. ಇವರೊಂದಿಗೆ ಈಜಿಫ್ಟ್ನಿಂದ (Egypt) ಆಗಮಿಸುತ್ತಿರುವ 120 ಮಂದಿಯ ತಂಡ ಸಹ ಭಾಗಿಯಾಗುತ್ತಿದೆ. ಇದು ರಾಜಪಥ ಎಂಬ ಹೆಸರನ್ನು ಕರ್ತವ್ಯಪಥ ಎಂದು ಬದಲಾಯಿಸಿದ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವವಾಗಿದೆ. ಈ ಬಾರಿ ಪರೇಡ್ನ ವೇಳೆ ಒದಗಿಸಲಾಗುತ್ತಿದ್ದ ಸೀಟುಗಳನ್ನು 45 ಸಾವಿರಕ್ಕೆ ಇಳಿಕೆ ಮಾಡಲಾಗಿದೆ. ಇದರಲ್ಲಿ 32 ಸಾವಿರ ಸೀಟುಗಳು ಹಾಗೂ ಬೀಟಿಂಗ್ ರಿಟ್ರೀಟ್‌ನ ಶೇ.10ರಷ್ಟು ಸೀಟುಗಳು ಆನ್ಲೈನ್ನಲ್ಲಿ ಲಭ್ಯವಿದೆ.
Republic Day : ಪಾಲಕರೇ…ಮಕ್ಕಳಲ್ಲಿ ದೇಶ ಪ್ರೇಮ ಹೆಚ್ಚಿಸಿ, ರಾಷ್ಟ್ರೀಯ ಹಬ್ಬದ ಮಹತ್ವ ತಿಳಿಸಿ
Republic Day 20 ರಿಂದ 10 ದಿನ ಲಾಲ್‌ಬಾಗಲ್ಲಿ ಪುಷ್ಪ ಪ್ರದರ್ಶನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ