ಅಹ್ಮದಾಬಾದ್(ಏ.7): ಇಲಿಯ ಆಟಕ್ಕೆ ಮನೆ ಬೆಂಕಿಗಾಹುತಿಯಾದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದಿದೆ. ಮನೆಯಲ್ಲಿ ದೇವರ ದೀಪ ಉರಿಸಲು ಬತ್ತಿ ಇಟ್ಟು ದೀಪ ಹಚ್ಚಲಾಗಿತ್ತು. ಈ ದೀಪ ಉರಿಯುತ್ತಿರುವಾಗಲೇ ಇಲಿಯೊಂದು ಬತ್ತಿಯನ್ನು ಹೊತ್ತೊಯ್ದಿದೆ. ಅಲ್ಲದೇ ಬೆಂಕಿ ಉರಿಯುತ್ತಿದ್ದ ಬತ್ತಿಯೊಂದಿಗೆ ಮನೆ ತುಂಬೆಲ್ಲಾ ಓಡಾಡಿದೆ. ಪರಿಣಾಮ ಬಟ್ಟೆಗೆ ಬತ್ತಿಯಿಂದ ಬೆಂಕಿ ಹೊತ್ತಿಕೊಂಡಿದ್ದು, ಮನೆಯೆಲ್ಲಾ ಬೆಂಕಿ ಆವರಿಸಿದೆ. ಪರಿಣಾಮ ಮನೆಯಲ್ಲಿ ಇಟ್ಟಿದದ ಎರಡು ಲಕ್ಷ ನಗದು ಹಾಗೂ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.
ಕರ್ಮಭೂಮಿ ಸೊಸೈಟಿಯಲ್ಲಿರುವ ಉದ್ಯಮಿ ವಿನೋದ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಬೆಂಕಿ ಹೊತ್ತಿ ಉರಿಯಲಾರಂಭಿಸಿದ ನಂತರ ಅಗ್ನಿಶಾಮಕ ಸಿಬ್ಬಂದಿಗ ಮಾಹಿತಿ ನೀಡಿದ್ದು, ಬಳಿಕ ಅವರು ಬಂದು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಬುಧವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಚೈತ್ರ ನವರಾತ್ರಿಯ ನಿಮಿತ್ತ ವಿನೋದ್ ಭಾಯ್ ಅವರ ಮನೆಯಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಈ ಹಿನ್ನೆಲೆ ದೀಪಗಳನ್ನು ಬೆಳಗಿಸಲಾಯಿತು. ನಂತರ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಅಷ್ಟರಲ್ಲಿ ಕೋಣೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಯಾರೋ ಬೊಬ್ಬೆ ಹೊಡೆಯಲು ಶುರು ಮಾಡಿದರು. ನಂತರ ಎಲ್ಲರೂ ಮನೆಯಿಂದ ಹೊರಬಂದರೂ ಗೃಹೋಪಯೋಗಿ ವಸ್ತುಗಳನ್ನು ಉಳಿಸುವಲ್ಲಿ ವಿಫಲರಾದರು. ಅಕ್ಕಪಕ್ಕದವರು ನೀರಿನ ಮೋಟರ್ ಹಾಕಿ ಬೆಂಕಿ ನಂದಿಸಲು ಯತ್ನಿಸಿದರಾದರೂ ವಿಫಲವಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ನೆಲಬಾಂಬ್ ಪತ್ತೆ ಮಾಡುತ್ತಿದ್ದ ಇಲಿ ಮಗಾವಾ ಇನ್ನಿಲ್ಲ..
ಸಾಮಾನ್ಯವಾಗಿ ಮನೆಗಳಲ್ಲಿ ಹೆಚ್ಚು ಸಮಯದವರೆಗೆ ವಸ್ತುಗಳನ್ನು ಒಂದೆಡೆ ರಾಶಿ ಹಾಕಿದ್ದರೆ ಅಲ್ಲಿ ಇಲಿಗಳು (rats) ಸೇರಿಕೊಳ್ಳುತ್ತವೆ. ನಿಮ್ಮ ಮನೆಯಲ್ಲಿ ಇಲಿಗಳು ಭೀತಿಯನ್ನು ಸೃಷ್ಟಿಸಿದ್ದರೆ ಚಿಂತಿಸಬೇಕಾಗಿಲ್ಲ. ಇಲಿಗಳು ಮನೆಯಿಂದ ಓಡಿಹೋಗಲು ಕೆಲವು ಸಲಹೆಗಳು ಇಲ್ಲಿವೆ. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಈ ಮನೆಮದ್ದುಗಳನ್ನು ಬಳಸುವುದರಿಂದ ಇಲಿಗಳನ್ನು ಕೊಲ್ಲದೆ ಮನೆಯಿಂದ ಹೊರಗೆ ಓಡಿಸಬಹುದು. ಅನೇಕ ಜನರು ಇಲಿಗಳಿಂದ ತೊಂದರೆಗೊಳಗಾಗುತ್ತಾರೆ. ಹಳ್ಳಿ ಪ್ರದೇಶಗಳಲ್ಲಿ ಮಾತ್ರವಲ್ಲದೆ ನಗರಗಳಲ್ಲಿ ಇಲಿಗಳು ಜನರ ಸಂಕಟಗಳನ್ನು ಹೆಚ್ಚಿಸುತ್ತವೆ. ಮನೆಯಲ್ಲಿ ಬಟ್ಟೆ, ಅಡುಗೆ ಮನೆಯ ವಸ್ತುಗಳಂತಹ ವಸ್ತುಗಳು ಹೆಚ್ಚಾಗಿ ಇಲಿಗಳಿಂದ ನಾಶವಾಗುತ್ತವೆ. ತಿಳಿಯದೆ ಇಲಿಗಳು ಸ್ಪರ್ಶಿಸಿದ ಆಹಾರವನ್ನು ನಾವೇನಾದರೂ ತಿಂದರೆ ಅದು ನಮ್ಮ ದೇಹಕ್ಕೆ ಅಪಾಯಕಾರಿಯೂ (dangerouse) ಆಗಬಹುದು.
ಮಾರುಕಟ್ಟೆಯಲ್ಲಿ ಇಲಿಗಳನ್ನು ಕೊಲ್ಲಲು ಅನೇಕ ವಿಷಕಾರಿ ಔಷಧಿಗಳಿವೆ (rat poison). ಬಳಸಿದಾಗ ಅವು ಸಾಯುತ್ತವೆ, ಆದರೆ ವಾಸನೆ ಮನೆಯಲ್ಲಿ ಹರಡುತ್ತದೆ ಮತ್ತು ಅದನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ, ನೀವು ಇಲಿಗಳನ್ನು ಕೊಲ್ಲದೆ ಮನೆಯಿಂದ ಹೊರಗೆ ಓಡಿಸಬಹುದು. ಇಲಿಗಳನ್ನು ಕೊಲ್ಲದೆ ಮನೆಯಿಂದ ಓಡಿಹೋಗಲು ಇಲ್ಲಿ ಒಂದಿಷ್ಟು ಸರಳ ಮನೆಮದ್ದುಗಳಿವೆ.
ಕೊಪ್ಪಳ: ಇಲ್ಲಿ ಇಲಿಗೂ ಸಲ್ಲುತ್ತೆ ಪೂಜೆ..!
ಪುದೀನಾ (mint leaves): ನಿಮ್ಮ ಮನೆಯಲ್ಲಿರುವ ಇಲಿಗಳು ಭಯವನ್ನು ಹರಡಿದ್ದರೆ, ಈ ಸಮಸ್ಯೆಯನ್ನು ತೊಡೆದು ಹಾಕಲು ಪುದೀನಾ ಎಲೆ ಅಥವಾ ಹೂವನ್ನು ತೆಗೆದುಕೊಳ್ಳಿ ಮತ್ತು ಅದನ್ನು ಇಲಿ ಬಿಲದ ಬಳಿ ಅಥವಾ ಮುಂಬರುವ ಸ್ಥಳಗಳ ಬಳಿ ಇರಿಸಿ. ಅದರ ವಾಸನೆಯನ್ನು ಕಂಡುಕೊಂಡ ನಂತರ ಇಲಿಗಳು ತಕ್ಷಣ ಓಡಿಹೋಗುತ್ತದೆ. ಮತ್ತೆ ವಾಪಸ್ ಬರೋದಿಲ್ಲ. ಪಲಾವ್ ಎಲೆ (bay leaves): ಸಾಮಾನ್ಯವಾಗಿ ಪಲಾವ್, ಬಿರಿಯಾನಿಗಳಲ್ಲಿ ಬಳಕೆ ಮಾಡಲಾಗುವ ಪಲಾವ್ ಎಲೆ ಅಥವಾ ಬೇ ಲೀಪ್ ಉತ್ತಮ ಔಷಧವಾಗಿದೆ. ಮಸಾಲೆಗಳಾಗಿ ಬಳಸುವ ಬೇ ಲೀಫ್ ಇಲಿಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇದರ ಸುಗಂಧವು ತುಂಬಾ ತೀಕ್ಷ್ಣವಾಗಿದೆ. ಆದ್ದರಿಂದ ಇಲಿಗಳು ಹೆಚ್ಚು ಬರುವ ಮನೆಯಲ್ಲಿ ನೀವು ಬೇ ಲೀಫ್ ಅನ್ನು ಇಡಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ