ಅಹಮದಾಬಾದ್: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಕಾರು ಹತ್ತಿಸಲು ಯತ್ನಿಸಿದ ಆರೋಪದ ಮೇಲೆ ಗುಜರಾತ್ ಎಎಪಿಯ ಯುವ ನಾಯಕ ಯುವರಾಜ್‌ಸಿಂಹ ಜಡೇಜಾ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಗಾಂಧಿನಗರ ಪೊಲೀಸರು (Gandhinagar police) ಆರೋಪಿ ಯುವರಾಜ್‌ಸಿಂಹ ಜಡೇಜಾ (Yuvrajsinh Jadeja) ಅವರನ್ನು ಬಂಧಿಸಿದ್ದಾರೆ. ಈತನ ಕೃತ್ಯವು ಕಾನ್‌ಸ್ಟೆಬಲ್‌ನ ಸಾವಿಗೆ ಕಾರಣ ಆಬಹುದಾಗಿದದರಿಂದ ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಇನ್‌ಸ್ಪೆಕ್ಟರ್ ಜನರಲ್ (ಗಾಂಧಿನಗರ ರೇಂಜ್) ಅಭಯ್ ಚೂಡಾಸಮ (Abhay Chudasama) ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪೊಲೀಸರು ಆತನನ್ನು ಕಸ್ಟಡಿಗೆ ಕೋರದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಡಿ ಜೈಲಿಗೆ ಕಳುಹಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಎಂಕೆ ರಾಣಾ (MK Rana) ತಿಳಿಸಿದ್ದಾರೆ. ಐಜಿ ಚುಡಾಸಮಾ ಅವರ ಪ್ರಕಾರ, ಮಂಗಳವಾರ ಶಾಲಾ ಸಹಾಯಕ ಶಿಕ್ಷಕ ಅಥವಾ ವಿದ್ಯಾ ಸಹಾಯಕ ಹುದ್ದೆಯ ಆಕಾಂಕ್ಷಿಗಳು ಉದ್ಯೋಗಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇವರು ಪ್ರತಿಭಟನೆಗೆ ಅನುಮತಿ ಪಡೆದುಕೊಳ್ಳದ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿತ್ತು. ಈ ಬಂಧಿತ ಉದ್ಯೋಗಾಕಾಂಕ್ಷಿಗಳನ್ನು ಬೆಂಬಲಿಸುವ ಸಲುವಾಗಿ ಯುವರಾಜ್ ಸಿಂಹ ಜಡೇಜಾ ಪೊಲೀಸ್ ಠಾಣೆಗೆ ಬಂದಿದ್ದರು.
Gujarat AAP youth wing leader Yuvrajsinh Jadeja held for attacking cops, dragging constable on his car's bonnet. pic.twitter.com/ap5INyGybd
— My Vadodara (@MyVadodara)ಈ ವೇಳೆ ಠಾಣೆಯ ಆವರಣದಲ್ಲಿ ಪೊಲೀಸರು ಹಾಗೂ ಜಡೇಜಾ ಮಧ್ಯೆ ಬಿಸಿ ಬಿಸಿ ಚರ್ಚೆ ನಡೆದಿದ್ದು, ಜಡೇಜಾ ಕೆಲವು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದರು ಮತ್ತು ಹೆಚ್ಚಿನ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ ನಂತರ ಅವರು ಕಾರಿನ ಕಡೆಗೆ ಓಡಿಹೋದರು. ನಂತರ ಅವರು ತಮ್ಮ ಕಾರಿನಲ್ಲಿ ಕುಳಿತು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದರು. ಈ ವೇಳೆ ಕಾನ್ಸ್‌ಟೇಬಲ್ ಕಾರು ನಿಲ್ಲಿಸುವಂತೆ ಸೂಚಿಸಿದಾಗ ಅವರು ತಮ್ಮ ಕಾರನ್ನು ನಿಲ್ಲಿಸದೇ ಕಾನ್ಸ್‌ಟೇಬಲ್ ಮೇಲೆ ಕಾರು ಹತ್ತಿಸಿ ಮುಂದೆ ಹೋಗಲು ಯತ್ನಿಸಿದರು ಎಂದು ಐಪಿಎಸ್ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು. ವೇಗವಾಗಿ ಬಂದ ಕಾರಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಾನ್‌ಸ್ಟೆಬಲ್ ಲಕ್ಷ್ಮಣ ವಾಸವ (Laxman Vasava) ಕಾರಿನ ಬಾನೆಟ್ ಮೇಲೆ ಹಾರಿದರು ಎಂದು ಅವರು ಹೇಳಿದರು.
ಸ್ವಲ್ಪ ದೂರ ಕ್ರಮಿಸಿದ ನಂತರ ಜಡೇಜಾ ತನ್ನ ಕಾರನ್ನು ನಿಲ್ಲಿಸಿದರು ಮತ್ತು ಕಾನ್ಸ್‌ಟೇಬಲ್ ಹೇಗೋ ಬಾನೆಟ್‌ನಿಂದ ಇಳಿದು ಪ್ರಾಣ ಉಳಿಸಿಕೊಂಡರು ಐಜಿ ಚುಡಾಸಮಾ ಹೇಳಿದರು. ಇಡೀ ಘಟನೆ ಜಡೇಜಾ ಅವರ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಘಟನೆಯಲ್ಲಿ ಕಾನ್‌ಸ್ಟೆಬಲ್ ಸಾವನ್ನಪ್ಪುವ ಸಾಧ್ಯತೆ ಇತ್ತು. ಫೋರೆನ್ಸಿಕ್ ವಿಶ್ಲೇಷಣೆಗಾಗಿ ನಾವು ಕ್ಯಾಮೆರಾ ಮತ್ತು ಜಡೇಜಾ ಅವರ ಮೊಬೈಲ್ ಫೋನ್‌ಗಳನ್ನು ಕಳುಹಿಸಿದ್ದೇವೆ ಎಂದು ಇನ್‌ಸ್ಪೆಕ್ಟರ್ ಜನರಲ್ ಹೇಳಿದರು.
ಹಲ್ಲೆ ಆರೋಪಿಗಳನ್ನ ಬಂಧಿಸಲು ಹೋದ ಪೊಲೀಸ್ ಮೇಲೆ ಹಲ್ಲೆ
ಘಟನೆ ಬಗ್ಗೆ ಮಾತನಾಡಿದ ಮತ್ತೊಬ್ಬ ಗುಜರಾತ್ ಎಎಪಿ ನಾಯಕ ಪ್ರವೀಣ್ ರಾಮ್ (Pravin Ram), ತಮ್ಮ ಪಕ್ಷದ ಸಹವರ್ತಿ ಯುವರಾಜ್ ಸಿಂಹ ಜಡೇಜಾ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಬಿಜೆಪಿ ಸರ್ಕಾರವು ಜಡೇಜಾಗೆ ಹೆದರಿದೆ ಎಂದು ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗುಜರಾತ್ ಶಿಕ್ಷಣ ಸಚಿವ ಹಾಗೂ ಸರ್ಕಾರದ ವಕ್ತಾರರೂ ಆಗಿರುವ ಜಿತು ವಘಾನಿ (Jitu Vaghani) ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು.
ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಆಪಾದಿತ ಅಕ್ರಮಗಳನ್ನು ಬಹಿರಂಗಪಡಿಸಿದ ನಂತರ ಜಡೇಜಾ ಅವರು ಮತ್ತಷ್ಟು ಜನಮನ್ನಣೆ ಗಳಿಸಿದ್ದಾರೆ. ಪರೀಕ್ಷಾ ಅಕ್ರಮಗಳು ಮತ್ತು ಪೇಪರ್ ಸೋರಿಕೆಯ ಅವರ ದೂರುಗಳ ಪರಿಣಾಮವಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಗುಮಾಸ್ತರ ನೇಮಕಾತಿಗಾಗಿ ಆಯೋಜಿಸಿದ್ದ ಎರಡು ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಇತ್ತೀಚೆಗೆ ಅರಣ್ಯ ಸಿಬ್ಬಂದಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಜಡೇಜಾ ಹೇಳಿಕೊಂಡಿದ್ದರು ಇದನ್ನು ರಾಜ್ಯ ಸರ್ಕಾರ ನಿರಾಕರಿಸಿದೆ.
ಗಾಂಜಾ ಮತ್ತಲ್ಲಿ ಬೆಂಗಳೂರು 'ಬುಲೆಟ್ ಬಸ್ಯರು' ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ!