ಕಿತ್ತಾಟದ ಮಧ್ಯೆ ಧಾರ್ಮಿಕ ಸಾಮರಸ್ಯ: ಮಸೀದಿಗೆ ಬಣ್ಣ ಹೊಡೆಸಿದ ಹಿಂದೂ ವ್ಯಕ್ತಿ

Published : Apr 07, 2022, 10:29 AM IST
ಕಿತ್ತಾಟದ ಮಧ್ಯೆ ಧಾರ್ಮಿಕ ಸಾಮರಸ್ಯ: ಮಸೀದಿಗೆ ಬಣ್ಣ ಹೊಡೆಸಿದ ಹಿಂದೂ ವ್ಯಕ್ತಿ

ಸಾರಾಂಶ

ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾದ ಕೇರಳದ ಊರು ಮಸೀದಿಗೆ ಬಣ್ಣ ಹೊಡೆಸಿದ ಸೂರ್ಯನಾರಾಯಣ ಹಲವು ವರ್ಷಗಳಿಂದ ಬಣ್ಣವಿಲ್ಲದೇ ಮಸುಕಾಗಿದ್ದ ಮಸೀದಿ

ಕೋಝಿಕೋಡ್‌(ಏ.7): ಹಿಂದೂ ಮುಸ್ಲಿಂ ಸಮುದಾಯದ ಮಧ್ಯೆ ಸಾಮರಸ್ಯ ಮರೆಯಾಗಿ ದ್ವೇಷ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೇರಳದ ಕೋಝಿಕೋಡ್‌ನಲ್ಲಿ ಹಿಂದೂ ಮುಸ್ಲಿಂ ಧಾರ್ಮಿಕ ಸಾಮರಸ್ಯ ಮೆರೆದ ಘಟನೆಯೊಂದು ನಡೆದಿದೆ. ರಂಜಾನ್ ಆಚರಣೆಗೆ ಮೊದಲು ತಮ್ಮ ಊರಿನ ಮಸೀದಿಗೆ ಹಿಂದೂ ಸಮುದಾಯದ ವ್ಯಕ್ತಿಯೊಬ್ಬರು ಪೇಂಟಿಂಗ್‌ ಮಾಡಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ.

ರಂಜಾನ್‌ (Ramzan) ಹಬ್ಬಕ್ಕೆ ಮೊದಲು ಶುಭ ಮಾಸದಲ್ಲಿ ಮಸೀದಿಗಳಿಗೆ ಬಣ್ಣ ಹೊಡೆಸುವುದು ಸಂಪ್ರದಾಯ. ಆದರೆ ಕೋವಿಡ್‌ (Covid) ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಉಂಟಾದ ಪರಿಣಾಮ ಕೇರಳದ (Kerala) ಮಲ್ಲಪುರಂ (Mallapuram) ಜಿಲ್ಲೆಯ ವಟ್ಟಲೂರಿನಲ್ಲಿರುವ (Vattaloor) ಮಸ್ಜಿದುಲ್ ಉಮರುಲ್ ಫಾರುಕ್‌ ಮಸೀದಿಗೆ ಹಲವು ವರ್ಷಗಳಿಂದ ಬಣ್ಣ ಹೊಡೆಸಲು ಸಾಧ್ಯವಾಗಿರಲಿಲ್ಲ. ಇದು ಹಿಂದೂ ಸಮುದಾಯದ ಪಿ.ವಿ ಸೂರ್ಯ ನಾರಾಯಣ ಅವರ ಗಮನಕ್ಕೆ ಬಂದಿದೆ.

Koppal: ಹಿಂದೂ ಸಂಪ್ರದಾಯದಂತೆ ಮುಸ್ಲಿಂ ವ್ಯಕ್ತಿಯ ಅಂತ್ಯಕ್ರಿಯೆ

ಕತ್ತಾರ್‌ನಲ್ಲಿ ಉದ್ಯೋಗದಲ್ಲಿರುವ 58 ವರ್ಷದ ಪಿ.ವಿ ಸೂರ್ಯನಾರಾಯಣ (soory Narayan)ಅವರು ಒಂದು ತಿಂಗಳ ರಜೆಗಾಗಿ ತಮ್ಮ ಊರಿಗೆ ಬಂದಿದ್ದರು. ಈ ವೇಳೆ ಅವರಿಗೆ ರಂಜಾನ್‌ಗೆ ಕೇವಲ ಎರಡು ವಾರಗಳಿದ್ದರೂ ಗ್ರಾಮದ ಮಸೀದಿಗೆ ಇನ್ನೂ ಬಣ್ಣ ಹೊಡೆಸದೇ ಇರುವುದು ಅವರ ಗಮನಕ್ಕೆ ಬಂದಿದೆ. ಬಳಿಕ ಅವರು ಬಣ್ಣ ಹೊಡೆಸಲು ಮುಂದಾಗಿದ್ದಾರೆ. ನಂತರ ಮಸೀದಿಯ ಆಡಳಿತ ಮಂಡಳಿ ಬಳಿ ಈ ಬಗ್ಗೆ ವಿಚಾರಿಸಿದ ಅವರು ಬಣ್ಣ ಹೊಡೆಸುವ ವ್ಯವಸ್ಥೆ ಮಾಡಿದ್ದಾರೆ. 

ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ತಮ್ಮ ಸೋದರ ಸಂಬಂಧಿ ಪಿ.ವಿ ಅಜಯ್‌ ಕುಮಾರ್ (P V Ajayakumar) ಅವರಿಗೆ ಈ ವಿಚಾರ ತಿಳಿಸಿ ಬಣ್ಣ ಹೊಡೆಸುವ ಕೆಲಸ ಮಾಡುವಂತೆ ಹೇಳಿದ್ದಾರೆ. ಪರಿಣಾಮ ಹಲವು ವರ್ಷಗಳಿಂದ ಬಣ್ಣವಿಲ್ಲದೇ ಮಂಕಾಗಿದ್ದ ಮಸೀದಿ ಬಣ್ಣದಿಂದ ಪಳ ಪಳನೇ ಹೊಳೆಯುತ್ತಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ. 

ಇತ್ತೀಚೆಗೆ ಇಡೀ ರಾಜ್ಯವೇ ಕೋಮು ದಳ್ಳೂರಿಯಲ್ಲಿ ಹೊತ್ತಿ ಉರಿಯುತ್ತಿದೆ. ಆದರೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನಲ್ಲಿ 130 ವರ್ಷಗಳಿಂದ ತೀವ್ರ ವಿವಾದ ಹುಟ್ಟಿಸಿದ್ದ ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿದ್ದ ಕ್ರೈಸ್ತ ಸಮುದಾಯದ (Christian community) ಸಮಾಧಿಯನ್ನ (grave ) ಕ್ರೈಸ್ತರು ಶಾಂತಿಯುತವಾಗಿ ಬಗೆಹರಿಸಿಕೊಂಡ ಘಟನೆ ಇತ್ತೀಚೆಗೆ ನಡೆದಿತ್ತು.

ಹಿಂದೂಗಳಿಗೆ ಅಲ್ಲಮಪ್ರಭು, ಮುಸ್ಲಿಮರಿಗೆ ಅಹಮದ್ ಶಾ ವಲಿ: ಸಾಮರಸ್ಯದ ಪ್ರತೀಕ ಬೀದರ್ ಅಷ್ಟೂರು ಜಾತ್ರೆ!

ಮೂಡಿಗೆರೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗಲ್ಲಿದ್ದ ಕ್ರೈಸ್ತ ಸಮುದಾಯದ ಶಿಲುಬೆಯನ್ನ ಸಮುದಾಯದ ಮುಖಂಡರು ಹಾಗೂ ಪಟ್ಟಣ ಪಂಚಾಯಿತಿ ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಂಡು ಸ್ಥಳಾಂತರಿಸಿದೆ. 1884ರಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಸ್ಯಾಮುಯಲ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. 

ಸ್ಯಾಮುಯಲ್, ಬಡಜನರ ಕಷ್ಟಕ್ಕೆ ಮರುಗುತ್ತಿದ್ದು, ಸದಾ ಸಮಾಜಮುಖಿ ಕೆಲಸ-ಕಾರ್ಯಗಳಲ್ಲಿ ತೊಡಗಿದ್ದರು ಎಂಬ ಕಾರಣಕ್ಕೆ ಸ್ಥಳಿಯ ಕ್ರೈಸ್ತ ಸಮುದಾಯ ಬಸ್ ನಿಲ್ದಾಣದ ಮುಂಭಾಗದ ಜಾಗದಲ್ಲೇ ಅವರ ಅಂತ್ಯ ಸಂಸ್ಕಾರ ಮಾಡಿತ್ತು. ಅಂದಿನಿಂದಲೂ ಈ ಜಾಗ ವಿವಾದದಿಂದ ಕೂಡಿತ್ತು. ಹಲವು ಭಾರೀ ತೆರೆವುಗೊಳಿಸುವ ಪ್ರಕ್ರಿಯೆಗೆ ಪಟ್ಟಣ ಪಂಚಾಯಿತಿ ಮುಂದಾಗಿತ್ತು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ನಾಲ್ಕೈದು ದಶಕಗಳಿಂದ ಮಳಿಗೆ ನಿರ್ಮಿಸಲು ಈ ವಿವಾದಿತ ಶಿಲುಬೆಯನ್ನ ತೆರವುಗೊಳಿಸಲು ಮುಂದಾದರೂ ಸಾಧ್ಯವಾಗಿರಲಿಲ್ಲ. ಶಿಲುಬೆ ತೆರವುಗೊಳಿಸಲು ಕ್ರೈಸ್ತ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಈಗ ಪಟ್ಟಣ ಪಂಚಾಯಿತಿಯ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿರೋ ಕ್ರೈಸ್ತ ಸಮುದಾಯ ಶಾಂತಿಯುತವಾಗಿ ಶಿಲುಬೆಯನ್ನ ಸ್ಥಳಾಂತರಿಸಿದೆ. ಚರ್ಚ್ ನ ಪಾದ್ರಿಗಳ ಸಮ್ಮುಖದಲ್ಲಿ ಕ್ರೈಸ್ತ ಸಮುದಾಯದವರು ಪೂಜೆ ಮಾಡಿ ಶಿಲುಬೆಯನ್ನ ಸ್ಥಳಾಂತರಿಸಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿದ್ದ ಶಿಲುಬೆಯನ್ನ ಸ್ಥಳಾಂತರಿಸಿ ಕ್ರೈಸ್ತರ ಸ್ಮಶಾನದಲ್ಲಿ ಪೂಜೆ ಮಾಡಿ ಮತ್ತೊಮ್ಮೆ ಸಮಾಧಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ