ಕೊನೆಗೂ ರಾಹುಲ್‌ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್: ಇಂದು ಅಮೆರಿಕ ಪ್ರವಾಸಕ್ಕೆ 'ಕೈ' ನಾಯಕ

By BK AshwinFirst Published May 29, 2023, 11:37 AM IST
Highlights

ರಾಹುಲ್‌ ಅವರಿಗೆ ಪಾಸ್‌ಪೋರ್ಟ್‌ ನೀಡಲು ಯಾವುದೇ ಆಕ್ಷೇಪ ಇಲ್ಲ ಎಂದು ಸ್ಥಳೀಯ ನ್ಯಾಯಾಲಯ ಎರಡು ದಿನಗಳ ಹಿಂದಷ್ಟೇ ಹೇಳಿತ್ತು. ಅದರಂತೆ ಭಾನುವಾರ ಮಧ್ಯಾಹ್ನ ರಾಹುಲ್‌ ಅವರಿಗೆ ಪಾಸ್‌ಪೋರ್ಟ್‌ ಸಿಕ್ಕಿದೆ.

ನವದೆಹಲಿ (ಮೇ 29, 2023): ಮೋದಿ ಉಪನಾಮ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಕಾರಣಕ್ಕೆ ಶಿಕ್ಷೆಗೆ ಒಳಗಾಗಿ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ ಅವರಿಗೆ ಮೂರು ವರ್ಷಗಳ ಅವಧಿಯ ಸಾಧಾರಣ ಪಾಸ್‌ಪೋರ್ಟ್‌ ಭಾನುವಾರ ಸಿಕ್ಕಿದೆ. ಸೋಮವಾರದಿಂದ ರಾಹುಲ್‌ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದು, ಅದಕ್ಕೆ ಒಂದು ದಿನ ಮುನ್ನ ಅವರಿಗೆ ಮಹತ್ವದ ಪ್ರವಾಸಿ ದಾಖಲೆ ಲಭ್ಯವಾದಂತಾಗಿದೆ.

ರಾಹುಲ್‌ ಅವರಿಗೆ ಪಾಸ್‌ಪೋರ್ಟ್‌ ನೀಡಲು ಯಾವುದೇ ಆಕ್ಷೇಪ ಇಲ್ಲ ಎಂದು ಸ್ಥಳೀಯ ನ್ಯಾಯಾಲಯ ಎರಡು ದಿನಗಳ ಹಿಂದಷ್ಟೇ ಹೇಳಿತ್ತು. ಭಾನುವಾರ ಸಾಧಾರಣ ಪಾಸ್‌ಪೋರ್ಟ್‌ ಒದಗಿಸುವುದಾಗಿ ಪಾಸ್‌ಪೋರ್ಟ್‌ ಕಚೇರಿ ಹೇಳಿತ್ತು. ಅದರಂತೆ ಭಾನುವಾರ ಮಧ್ಯಾಹ್ನ ರಾಹುಲ್‌ ಅವರಿಗೆ ಪಾಸ್‌ಪೋರ್ಟ್‌ ಸಿಕ್ಕಿದೆ. ಸೋಮವಾರ ಸಂಜೆ ಅವರು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋಗೆ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಇದನ್ನು ಓದಿ: ರಾಹುಲ್‌ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್‌: 10 ವರ್ಷದ ಬದಲು 3 ವರ್ಷಕ್ಕೆ ಮಾತ್ರ ಅನುಮತಿ!

ಸಂಸದರಾಗಿದ್ದಾಗ ರಾಹುಲ್‌ ಅವರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌ ನೀಡಲಾಗಿತ್ತು. ಅವರು ಅನರ್ಹರಾಗಿರುವ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಪಾಸ್‌ಪೋರ್ಟ್‌ ಮರಳಿಸಿ ಹೊಸ ಪಾಸ್‌ಪೋರ್ಟ್‌ ಅನ್ನು ಪಡೆದಿದ್ದಾರೆ.

ಸಾಮಾನ್ಯವಾಗಿ ಸಾಧಾರಣ ಪಾಸ್‌ಪೋರ್ಟ್‌ 10 ವರ್ಷ ಅವಧಿಯನ್ನು ಹೊಂದಿರುತ್ತದೆ. ಆದರೆ ಈ ಪಾಸ್‌ಪೋರ್ಟ್‌ ವಿತರಿಸದಂತೆ ರಾಹುಲ್‌ ಗಾಂಧಿ ವಿರುದ್ಧ ನ್ಯಾಷನಲ್‌ ಹೆರಾಲ್ಡ್‌ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಆಕ್ಷೇಪ ತೆಗೆದಿದ್ದರು. ಹೀಗಾಗಿ ರಾಹುಲ್‌ ಅವರಿಗೆ 3 ವರ್ಷಗಳ ಅವಧಿಯ ಪಾಸ್‌ಪೋರ್ಟ್‌ ದೊರೆತಿದೆ.

ಇದನ್ನೂ ಓದಿ: ಸಂಸತ್‌ ಸ್ಥಾನ ಕಳ್ಕೊಂಡ ರಾಹುಲ್‌ ಗಾಂಧಿಗೆ ಈಗ ಹೊಸ ಪಾಸ್‌ಪೋರ್ಟ್‌ ಪಡೆಯಲೂ ಸಂಕಷ್ಟ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೊಸ ಪಾಸ್‌ಪೋರ್ಟ್‌ ಪಡೆಯಲು ಅರ್ಜಿ ಸಲ್ಲಿಸಲು ನಿರಾಕ್ಷೇಪಣಾ ಪತ್ರ ಪಡೆಯಲು ಕಳೆದ ಮಂಗಳವಾರ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದ ಮೊರೆ ಹೋಗಿದ್ದರು. ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೊಳಗಾಗಿದ್ದ ರಾಹುಲ್‌ ಗಾಂಧಿ ಸದ್ಯ ಜಾಮೀನಿನ ಮೇಲೆ ಇದ್ದಾರೆ. ಶಿಕ್ಷೆ ಬಳಿಕ ಸಂಸತ್‌ ಸ್ಥಾನವನ್ನು ಕಳೆದುಕೊಂಡಿದ್ರು. ಈ ಹಿನ್ನೆಲೆ ಸಾಮಾನ್ಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ಆದರೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಇದಕ್ಕೆ ವಿರೋಧಿಸಿದ್ದರು.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ಅವರ ಮುಂದೆ ಹಾಜರಾದ ರಾಹುಲ್‌ ಗಾಂಧಿ ಪರ ವಕೀಲರು, ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿಲ್ಲ ಮತ್ತು ಆದ್ದರಿಂದ ಅವರಿಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಬಹುದು ಎಂದು ಹೇಳಿದ್ದರು.  

ರಾಹುಲ್ ಜನಪ್ರಿಯತೆ ಹೆಚ್ಚಿರುವ ನಡುವೆ ರಾಷ್ಟ್ರ ರಾಜಕಾರಣದಲ್ಲಿ ಊಹಿಸಲಾಗದ ತಿರುವು: ಯಾರಾಗ್ಬೇಕಂತೆ ಮುಂದಿನ ಪ್ರಧಾನಿ..?

ಆದರೆ, ರಾಹುಲ್‌ ಗಾಂಧಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದರೆ, ನ್ಯಾಷನಲ್ ಹೆರಾಲ್ಡ್‌ನ ಮಾಲೀಕ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (ಎಜೆಎಲ್) ಕಾಂಗ್ರೆಸ್ ಪಕ್ಷವು ₹ 90 ಕೋಟಿ ಸಾಲವನ್ನು ₹ 50 ಲಕ್ಷ ಪರಿಗಣನೆಗೆ ಯಂಗ್ ಇಂಡಿಯನ್‌ಗೆ ನೀಡುವುದಕ್ಕೆ ಸಂಬಂಧಿಸಿದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಗೆ ಅಡ್ಡಿಯಾಗಬಹುದು ಎಂದು ಸುಬ್ರಮಣಿಯನ್‌ ಸ್ವಾಮಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಅಮೇಥಿಗೆ ಆದ ಗತಿಯೇ ವಯನಾಡ್‌ಗೆ ಆಗಲಿದೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಚ್ಚರಿಕೆ

click me!