ಸಂಸತ್‌ನಲ್ಲಿ ಕನ್ನಡ ಡಿಂಡಿಮ, ಅಖಂಡ ಭಾರತದ ನಕ್ಷೆ: 5000 ಕ್ಕೂ ಹೆಚ್ಚು ವಿವಿಧ ಕಲಾಕೃತಿಗಳ ಸಂಗಮ

By Kannadaprabha NewsFirst Published May 29, 2023, 9:06 AM IST
Highlights

ಸಂಸತ್ತಿನ ಮೂರು ಸಭಾಂಗಣಗಳಲ್ಲಿ ಮಹಾತ್ಮಾ ಗಾಂಧೀಜಿ, ಚಾಣಕ್ಯ, ಗಾರ್ಗಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಬಿ ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರಗಳಿವೆ. ಅದರೊಂದಿಗೆ ಕೊನಾರ್ಕ್‌ ಸೂರ್ಯದೇವಾಲಯದ ರಥದ ಚಕ್ರದ ಬೃಹತ್‌ ಹಿತ್ತಾಳೆ ಕಲಾಕೃತಿ ಇದೆ.

ನವದೆಹಲಿ (ಮೇ 29, 2023): ಉದ್ಘಾಟನೆಗೊಂಡ ನೂತನ ಸಂಸತ್‌ ಭವನದಲ್ಲಿ ವೈದಿಕ ಸಂಸ್ಕೃತಿ ಕಾಲದಿಂದ ಹಿಡಿದು ಪ್ರಸ್ತುತ ಭಾರತದವರೆಗಿನ ಪ್ರಜಾಪ್ರಭುತ್ವದ ಸಾಂಪ್ರದಾಯಕ ಹಾದಿ ನಿರೂಪಿಸುವ ಅನೇಕ ಕಲಾಕೃತಿಗಳಿವೆ. ಸಂವಿಧಾನ ಭವನವು ಹಿಂದೂ ಸಂಪ್ರದಾಯದ ಪೂಜೆಗಳಲ್ಲಿ ಬಳಸಲಾಗುವ ಹಾಗೂ ಶಕ್ತಿಯ ಮೂಲವೆಂದು ಪರಿಗಣಿಸಲಾಗಿರುವ ‘ಶ್ರೀ ಯಂತ್ರ’ ದಿಂದ ಪ್ರೇರಿತವಾಗಿದೆ. ಇಲ್ಲಿ ಡಿಜಿಟಲ್‌ ಸಂವಿಧಾನ ಪ್ರತಿಯನ್ನು ಹಾಗೂ ಭೂಮಿಯ ಪ್ರದಕ್ಷಿಣಾ ಪಥವನ್ನು ತಿಳಿಸುವ ಲೋಲಕವನ್ನು ಇಲ್ಲಿ ಇರಿಸಲಾಗಿದೆ.

ಸಂಸತ್ತಿನ ಮೂರು ಸಭಾಂಗಣಗಳಲ್ಲಿ ಮಹಾತ್ಮಾ ಗಾಂಧೀಜಿ, ಚಾಣಕ್ಯ, ಗಾರ್ಗಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಬಿ ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರಗಳಿವೆ. ಅದರೊಂದಿಗೆ ಕೊನಾರ್ಕ್‌ ಸೂರ್ಯದೇವಾಲಯದ ರಥದ ಚಕ್ರದ ಬೃಹತ್‌ ಹಿತ್ತಾಳೆ ಕಲಾಕೃತಿ ಇದೆ. ಭವನದಲ್ಲಿರುವ ಮೂರು ಸಾರ್ವಜನಿಕ ಗ್ಯಾಲರಿಗಳಲ್ಲಿ ಒಂದಾದ ಸಂಗೀತ ಗ್ಯಾಲರಿಯಲ್ಲಿ ಭಾರತದ ನೃತ್ಯ, ಹಾಡು ಮತ್ತು ಸಂಗೀತ ಸಂಪ್ರದಾಯಗಳನ್ನು ಪ್ರದರ್ಶಿಸಲಾಗಿದೆ. ದೇಶದ ಪ್ರಸಿದ್ಧ ಸಂಗೀತಗಾರರಾದ ಉಸ್ತಾದ್‌ ಅಮ್ಜದ್‌ ಅಲಿ ಖಾನ್‌, ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ, ಉಸ್ತಾದ್‌ ಬಿಸ್ಮಿಲ್ಲಾ ಖಾನ್‌, ಪಂಡಿತ್‌ ರವಿ ಶಂಕರ್‌ ಅವರ ಸಂಗೀತ ಉಪಕರಣಗಳನ್ನು ಇಲ್ಲಿರಿಸಲಾಗಿದ್ದು ಅವುಗಳನ್ನು ಅವರ ಕುಟುಂಬಸ್ಥರು ಹಸ್ತಾಂತರಿಸಿದ್ದಾರೆ. ಇನ್ನು ಸ್ಥಾಪತ್ಯ ಗ್ಯಾಲರಿಯಲ್ಲಿ ಭಾರತದ ವಾಸ್ತುಶಿಲ್ಪ ಶೈಲಿಯನ್ನು ಬಿತ್ತರಿಸಲಾಗಿದೆ. ಉಳಿದಂತೆ ಶಿಲ್ಪ ಗ್ಯಾಲರಿಯಲ್ಲಿ ದೇಶದ ವಿವಿಧ ರಾಜ್ಯಗಳ ಕರಕುಶಲ ಕಲೆಯ ಸಂಪ್ರದಾಯವನ್ನು ಪ್ರದರ್ಶಿಸಲಾಗಿದೆ.

Latest Videos

ಇದನ್ನು ಓದಿ: ನೂತನ ಸಂಸತ್‌ ಭವನ ಉದ್ಘಾಟನೆ ರಾಜನ ಪಟ್ಟಾಭಿಷೇಕದಂತಿತ್ತು: ವಿಪಕ್ಷಗಳ ಟೀಕೆ

ಇನ್ನು ನೂತನ ಸಂಸತ್‌ ಕಟ್ಟಡವು, ಗೋಡೆಯ ಫಲಕಗಳು, ಕಲ್ಲಿನ ಶಿಲ್ಪಗಳು, ಗೋಡೆ ಬರಹ, ವರ್ಣಚಿತ್ರಗಳು ಸೇರಿದಂತೆ 5,000 ಕ್ಕೂ ಹೆಚ್ಚು ಕಲಾಕೃತಿಗಳನ್ನು ಹೊಂದಿದೆ. ಲೋಕಸಭೆಯು ರಾಷ್ಟ್ರಪಕ್ಷಿ ನವಿಲು ಮತ್ತು ರಾಜ್ಯಸಭೆಯು ರಾಷ್ಟ್ರೀಯ ಪುಷ್ಪ ಕಮಲದಿಂದ ಪ್ರೇರಿತವಾಗಿ ನಿರ್ಮಾಣಗೊಂಡಿವೆ.

ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿರುವ ತೇಗವನ್ನು ಮಹಾರಾಷ್ಟ್ರದ ನಾಗ್ಪುರದಿಂದ ಪಡೆಯಲಾಗಿದೆ. ಇನ್ನು ಬಿಳಿ ಮತ್ತು ಕೆಂಪು ಮರಳುಗಲ್ಲುಗಳನ್ನು ರಾಜಸ್ಥಾನದ ಸರ್ಮಥುರಾದಿಂದ ತೆಗೆದುಕೊಳ್ಳಲಾಗಿದೆ. ಇನ್ನು ಕೇಶರಿಯಾ ಹಸಿರು ಕಲ್ಲನ್ನು ಉದಯಪುರ, ಕೆಂಪು ಗ್ರಾನೈಟ್‌ ಅನ್ನು ಅಜ್ಮೇರ್‌ ಬಳಿಯ ಲಾಖಾದಿಂದ ಹಾಗೂ ಬಿಳಿ ಮಾರ್ಬಲ್‌ ಅನ್ನು ರಾಜಸ್ಥಾನದ ಅಂಬಾಜಿಯಿಂದ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ನೂತನ ಸಂಸತ್‌ ಭವನ ಲೋಕಾರ್ಪಣೆ: ಶೃಂಗೇರಿ ಶಾರದಾ ಪೀಠದ ಪುರೋಹಿತರಿಂದ ಪೂಜಾ ಕೈಂಕರ್ಯ

ಹೊಸ ಸಂಸತ್ತಿನಲ್ಲಿ ಅಖಂಡ ಭಾರತದ ನಕ್ಷೆ
ಸಂಸತ್ತಿನ ಹೊಸ ಕಟ್ಟಡದಲ್ಲಿ ಭಾರತದ ನೆರೆ ಹೊರೆಯ ದೇಶಗಳನ್ನೂ ಒಳಗೊಂಡ ಅಖಂಡ ಭಾರತದ ಪರಿಕಲ್ಪನೆಯ ನಕ್ಷೆಯನ್ನು ರಚಿಸಲಾಗಿದ್ದು, ಗಮನಸೆಳೆಯುತ್ತಿದೆ. ಭಾರತೀಯ ಪುರಾತನ ಪ್ರಭಾವವನ್ನು ಬಿಂಬಿಸುವ ಚಿತ್ರ ಇದಾಗಿದ್ದು, ಮಹತ್ವದ ರಾಜಸಂಸ್ಥಾನ ಹಾಗೂ ಹಳೆಯ ನಗರಗಳನ್ನು ನಕ್ಷೆಯಲ್ಲಿ ಕೆತ್ತಲಾಗಿದೆ. ಆರ್‌ಎಸ್‌ಎಸ್‌ ಚಿಂತನೆಯಲ್ಲಿ ಅಖಂಡ ಭಾರತ ಎಂದರೆ, ಪುರಾತನ ಅವಿಭಜಿತ ಭಾರತ. ಇಂದಿನ ಅಪಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಮ್ಯಾನ್ಮಾರ್‌ ಹಾಗೂ ಥಾಯ್ಲೆಂಡ್‌ನ ಭೂಪ್ರದೇಶಗಳನ್ನೂ ಇದು ಒಳಗೊಂಡಿದೆ.

ಇದನ್ನೂ ಓದಿ: ನೂತನ ಸಂಸತ್‌ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ: ಬ್ರಾಹ್ಮಣತ್ವ ಸ್ಥಾಪನೆಗೆ ಬಿಜೆಪಿ ಯತ್ನ ಎಂದ ಎಸ್‌ಪಿ

click me!