ರಾಹುಲ್ ಗಾಂಧಿಗೆ ಕೊರೋನಾ, ಲವ್ ರಹಸ್ಯ ಬಿಚ್ಚಿಟ್ಟ ಕಂಗನಾ; ಏ.20ರ ಟಾಪ್ 10 ಸುದ್ದಿ!

Published : Apr 20, 2021, 04:59 PM ISTUpdated : Apr 20, 2021, 05:02 PM IST
ರಾಹುಲ್ ಗಾಂಧಿಗೆ ಕೊರೋನಾ, ಲವ್ ರಹಸ್ಯ ಬಿಚ್ಚಿಟ್ಟ ಕಂಗನಾ; ಏ.20ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ವೈರಸ್ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅಂಟಿಕೊಂಡಿದೆ. ಇತ್ತ ಭಾರತದ ವಿಮಾನಗಳಿಗೆ 2 ವಾರಗಳ ಕಾಲ ಹಾಂಗ್‌ಕಾಂಗ್‌ ನಿಷೇಧ ಹೇರಿದೆ. ಫಿಟ್ನೆಸ್ ಕುರಿತು  ಧೋನಿ ಹೊಸ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇತ್ತ ಚೀನಾದಿಂದ ಹಲವು ಕಂಪನಿಗಳು ಹೊರಬರಲು ಆರಂಭಿಸಿವೆ. ಪೋಷಕರ ಲವ್ ರಹಸ್ಯ ಬಿಚ್ಚಿಟ್ಟ ಕಂಗನಾ, ರೆಮ್‌ಡೆಸಿವಿರ್ ಮ್ಯಾಜಿಕ್‌ ಬುಲೆಟ್‌ ಅಲ್ಲ ಸೇರಿದಂತೆ ಏಪ್ರಿಲ್ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ರಾಹುಲ್ ಗಾಂಧಿಗೆ ಕೊರೋನಾ, ಸಂಪರ್ಕದಲ್ಲಿದ್ದವರು ಟೆಸ್ಟ್‌ ಮಾಡಿಸಿ ಎಂದು ಮನವಿ!...

ಕೊರೋನಾ ಎರಡನೇ ಅಲೆ ಭಾರತದಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಮೊದಲನೇ ಅಲೆಗಿಂತಲೂ ವೇಗವಾಗಿ ಹರಡುತ್ತಿರುವ ಮಹಾಮಾರಿ, ಅನೇಕ ಜೀವಗಳನ್ನು ಬಲಿ ಪಡೆದುಕೊಂಡಿದೆ. ಲಸಿಕಾ ಅಭಿಯಾನದ ನಡುವೆಯೂ ಈ ಮಹಾಮಾರಿ ನಿಯಂತ್ರಿಸೋದೇ ಕಷ್ಟವಾಗಿದೆ. ಜನ ಸಾಮಾನ್ಯರ ನಿದ್ದೆಗೆಡಿಸಿರುವ ಈ ಸೋಂಕು, ಸರ್ಕಾರಕ್ಕೂ ಗಾಬರಿ ಹುಟ್ಟಿಸಿದೆ. ಸದ್ಯ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಗೂ ಈ ಸೋಂಕು ತಗುಲಿದೆ.

ಭಾರತದ ವಿಮಾನಗಳಿಗೆ 2 ವಾರಗಳ ಕಾಲ ಹಾಂಗ್‌ಕಾಂಗ್‌ ನಿಷೇಧ!...

ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್‌ನಿಂದ ಹೊರಡುವ ಮತ್ತು ಈ ದೇಶಗಳ ಮೂಲಕ ಬರುವ ವಿಮಾನಗಳಿಗೆ ನಿಷೇಧ| ಏ.20ರಿಂದ ಅನ್ವಯವಾಗುವಂತೆ ಮುಂದಿನ ಎರಡು ವಾರಗಳ ಕಾಲ ಹಾಂಗ್‌ಕಾಂಗ್‌ ನಿಷೇಧ 

ಪ್ರದರ್ಶನದ ಬಗ್ಗೆ ಗ್ಯಾರಂಟಿ ಕೊಡಲ್ಲ, ಆದ್ರೆ ಫಿಟ್ನೆಸ್‌ ಬಗ್ಗೆ ಯಾರೂ ಬೆಟ್ಟು ಮಾಡುವಂತಿಲ್ಲ: ಧೋನಿ...

ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ ಎಸ್ ಧೋನಿ ತಮ್ಮ ಫಿಟ್ನೆಸ್‌ ಬಗ್ಗೆ ತುಟಿಬಿಚ್ಚಿದ್ದು, ಯಾರೂ ತಮ್ಮ ಫಿಟ್ನೆಸ್‌ ಕುರಿತಂತೆ ಬೆಟ್ಟು ಮಾಡಿ ಟೀಕಿಸದಿದ್ದರೇ ಅದೇ ನನ್ನ ಪ್ಲಸ್‌ ಪಾಯಿಂಟ್‌ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪೋಷಕರ ಲವ್ ರಹಸ್ಯ ಬಿಚ್ಚಿಟ್ಟ ಕಂಗನಾ; ಮಕ್ಕಳಿಗೆ ಸುಳ್ಳು ಹೇಳಿದ್ರಾ?...

ನಟಿ ಕಂಗನಾ ಪೋಷಕರಿಗೆ ಮದುವೆ ವಾರ್ಷಿಕೋತ್ಸವ ಶುಭಾಶಯಗಳನ್ನು ತಿಳಿಸಿ, ಸೋಷಿಯಲ್ ಮೀಡಿಯಾದಲ್ಲಿ ಅವರಿಬ್ಬರ ಲವ್‌ ಸ್ಟೋರಿ ಹಂಚಿಕೊಂಡಿದ್ದಾರೆ. 

ಮಂಗಳನಿಂದ ಹಾರಿದ ನಾಸಾದ ಪುಟ್ಟ ಹೆಲಿಕಾಪ್ಟರ್!...

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮಹತ್ವಾಕಾಂಕ್ಷಿ ಪ್ರಾಯೋಗಿಕ ಮಿನಿ ಹೆಲಿಕಾಪ್ಟರ್‌ ಮಂಗಳ ಗ್ರಹದ ನೆಲದಿಂದ ಟೇಕ್‌ ಆಫ್‌ ಆಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಇದು ಅನ್ಯಗ್ರಹದ ನೆಲದಿಂದ ಹಾರಿದ ಜಗತ್ತಿನ ಮೊದಲ ನೌಕೆಯಾಗಿದೆ.

ಚೀನಾಗೆ ಗುಡ್‌ ಬೈ ಹೇಳ್ತಿವೆ ಕಂಪನಿಗಳು, ಪಲಾಯನ ತಡೆಯಲು ಡ್ರ್ಯಾಗನ್ ಹರಸಾಹಸ!...

ಚೀನಾದಿಂದ ವಿದೇಶೀ ಕಂಪನಿಗಳ ಪಲಾಯನ| ಡ್ರ್ಯಾಗನ್‌ ಮುಷ್ಠಿಯಿಂದ ತಮ್ಮನ್ನು ತಾವು ಮುಕ್ತಗೊಳಿಸಲಾರಂಭಿಸಿ ಕಂಪನಿಗಳು| ಕೊರೋನಾ ಬಳಿಕ ಆರ್ಥಿಕ ಚೇತರಿಕೆ ಮೇಲೂ ಭಾರೀ ಪ್ರಭಾವ

ಭಾರತದ ಅತ್ಯಂತ ಕಡಿಮೆ ಬೆಲೆ ಬೈಕ್ ಹೀರೋ HF 100 ಬಿಡುಗಡೆ!...

ಭಾರತದಲ್ಲಿ ಬೈಕ್ , ಸ್ಕೂಟರ್ ಸೇರಿದಂತೆ ಎಲ್ಲಾ ವಾಹನಗಳ ಬೆಲೆ ಹೆಚ್ಚಾಗಿದೆ. 60, 70 ಸಾವಿರ ರೂಪಾಯಿಗೆ ಸಿಗುತ್ತಿದ್ದ ಸ್ಕೂಟರ್ ಇದೀಗ 1 ಲಕ್ಷ ರೂಪಾಯಿ ಆಗಿದೆ. ಇದರ ನಡುವೆ ಭಾರತದ ಅತೀ ಕಡಿಮೆ ಬೆಲೆಯ ಬೈಕ್‌ನ್ನು ಹೀರೋ ಮೋಟಾರ್ ಬಿಡುಗಡೆ ಮಾಡಿದೆ. 

ರೆಮ್‌ಡೆಸಿವಿರ್ ಮ್ಯಾಜಿಕ್‌ ಬುಲೆಟ್‌ ಅಲ್ಲ: ಏಮ್ಸ್ ನಿರ್ದೇಶಕ ಡಾ. ಗುಲೇರಿಯಾ!...

ದೇಶಾದ್ಯಂತ ಕೊರೋನಾ ಭೀತಿ| ಪ್ರಾಣ ಬಲಿ ಪಡೆದುಕೊಳ್ಳುತ್ತಿದೆ ಮಹಾಮಾರಿ| ಸೋಂಕು ನಿವಾರಿಸಲು ಸರ್ಕಾರ ಹರಸಾಹಸ| ರೆಮ್‌ಡೆಸಿವಿರ್ ಮ್ಯಾಜಿಕ್‌ ಬುಲೆಟ್‌ ಅಲ್ಲ ಎಂದ ಏಮ್ಸ್ ನಿರ್ದೇಶಕ

ರಶ್ಮಿಕಾ ಮಂದಣ್ಣ ತಬ್ಬಿಕೊಂಡಿರುವ ಈ ಹುಡುಗ ಯಾರೆಂದು ಹುಡುಕಾಡಿದ ಅಭಿಮಾನಿಗಳು?...

ಮಿಷನ್ ಮಜ್ನೂ, ಗುಡ್ ಬಾಯ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ  ಕೆಲವು ದಿನಗಳಿಂದ ಮುಂಬೈನಲ್ಲಿ ಸಮಯ ಕಳೆಯುತ್ತಿದ್ದಾರೆ. ಕಾರ್ತಿ ಜೊತೆ ಅಭಿನಯಿಸಿದ 'ಸುಲ್ತಾನ್' ಸಿನಿಮಾವನ್ನೂ ಮುಂಬೈನಲ್ಲಿ ವೀಕ್ಷಿಸಿದ್ದಾರೆ. ಈ ವೇಳೆ ಚಿತ್ರಮಂದಿರದ ಹೊರ ಪಾಪ್ಪರಾಜಿಗಳ ಎದುರು ರಶ್ಮಿಕಾ ಒಬ್ಬ ಹುಡುಗನನ್ನು ತಬ್ಬಿಕೊಂಡು, ಪೋಸ್ ಕೊಟ್ಟಿದ್ದಾರೆ. ಅ ಹುಡುಗ ಯಾರೆಂದು ಅಭಿಮಾನಿಗಳು ಹುಡುಕಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು