
ಹೆಂಡ್ತಿ ಹಾಗೂ ತನ್ನ ಇಬ್ಬರು ಮುದ್ದಾದ ಮಕ್ಕಳಿಗೆ ಗುಂಡಿಕ್ಕಿ ಬಳಿಕ ತಾನು ಗುಂಡು ಹಾರಿಸಿಕೊಂಡು ಗಂಡನೋರ್ವ ಸಾವಿಗೆ ಶರಣಾಗಿರುವಂತಹ ಆಘಾತಕಾರಿ ಘಟನೆ ಪಂಜಾಬ್ ಫಿರೋಜೆಪುರ್ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮರುದಿನ ಗುರುವಾರ ಬೆಳಗ್ಗೆ ಮನೆಗೆ ಮನೆಕೆಲಸದವರು ಬಂದ ನಂತರವೇ ಈ ಭೀಭತ್ಸ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳದಿಂದ ಪೊಲೀಸರು ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ.
ಗುರುವಾರ ಬೆಳಗ್ಗೆ ಇವರ ಮನೆಗೆ ಮನೆಕೆಲಸದಾಕೆ ಬಂದಾಗ ಮನೆಯ ಗೇಟು ಒಳಭಾಗದಿಂದ ಲಾಕ್ ಆಗಿರುವುದು ಗಮನಕ್ಕೆ ಬಂದಿದೆ. ಹಲವು ಬಾರಿ ಕೂಗಿದರು ಯಾವುದೇ ಪ್ರತಿಕ್ರಿಯೆ ಬಾರದೇ ಹೋದಾಗ ಆ ಮನೆಕೆಲಸದಾಕೆ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಆ ಬಾಡಿಗೆ ಮನೆಯಲ್ಲಿ ಇದ್ದವರು ಮತ್ತೊಬ್ಬರು ಪಕ್ಕದ ಮನೆಯವರಿಗೆ ಹೇಳಿದ್ದಾರೆ. ನಂತರ ಎರಡೂ ಕುಟುಂಬಗಳು ಸೇರಿ ಆ ಮನೆಯ ಮಾಲೀಕರಿಗೆ ತಮ್ಮ ಫೋನ್‌ಗಳಿಂದ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದೇ ಹೋದಾಗ ಅವರು ನೆರೆಮನೆಯವರು ಮನೆಯ ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ ನಾಲ್ವರ ದೇಹಗಳು ಮನೆಯ ನೆಲದಲ್ಲಿ ಬಿದ್ದಿರುವುದು ಕಂಡು ಬಂದಿದೆ. ನಂತರ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಹೀಗೆ ಹೆಂಡ್ತಿ ಮಕ್ಕಳನ್ನು ಕೊಂದು ತಾನು ಸಾವಿಗೆ ಶರಣಾದ ವ್ಯಕ್ತಿಯನ್ನು 42 ವರ್ಷದ ಅಮನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಕೊಲೆಯಾದವರನ್ನು ಆತನ ಪತ್ನಿ 40 ವರ್ಷದ ಜಸ್ವೀರ್ ಕೌರ್, ಇಬ್ಬರು ಹೆಣ್ಣು ಮಕ್ಕಳಾದ 10 ವರ್ಷದ ಮನ್ವೀರ್ ಕೌರ್ ಹಾಗೂ 6 ವರ್ಷದ ಪರ್ಮೀತ್ ಕೌರ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಿಂದ ಪಿಸ್ತೂಲ್‌ನ್ನು ವಶಕ್ಕೆ ಪಡೆಯಲಾಗಿದೆ. ಅಮನ್ ದೀಪ್ ಸಿಂಗ್ ಅವರು ಬಿಲ್ಡರ್ ಹಾಗೂ ಹಣಕಾಸು ವ್ಯವಹಾರಗಳನ್ನು ನಡೆಸುವುದರ ಜೊತೆಗೆ ಸಲೂನ್ ಅನ್ನು ಹೊಂದಿದ್ದರು.
ಇದನ್ನೂ ಓದಿ: 1 ವರ್ಷದ ಮಗುವಿಗೆ ಉಸಿರಾಟದ ಸಮಸ್ಯೆ: ಜೈಪುರ ಬೆಂಗಳೂರು ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್: ಆಸ್ಪತ್ರೆಯಲ್ಲಿ ಮಗು ಸಾವು
ಈ ಕೊಲೆ ಹಿಂದಿನ ಕಾರಣ ಏನಿರಬಹುದು ಎಂದು ಪತ್ತೆ ಮಾಡಲು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ನಿಯೋಜಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಫಿರೋಜ್‌ಪುರದ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ.ನೆರೆಹೊರೆಯವರು, ಬಾಡಿಗೆದಾರರು ಮತ್ತು ಇತರರ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಭೂಪಿಂದರ್ ಸಿಂಗ್ ಸಿಧು ಹೇಳಿದ್ದಾರೆ.
ಇದನ್ನೂ ಓದಿ: ಎಪಿ ಧಿಲ್ಲೋನ್ ಕನ್ಸರ್ಟ್ ವೈರಲ್ ವೀಡಿಯೋ ಎಫೆಕ್ಟ್: ಟಾಕ್ಸಿಕ್ ನಟಿ ತಾರಾ ಸುತಾರಿಯಾ ವೀರ್ ಪಹಾರಿಯಾ ಬ್ರೇಕಪ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ