ಮದ್ಯ ಆಗಸದಲ್ಲಿ ಉಸಿರಾಟ ಸಮಸ್ಯೆ: ಜೈಪುರ ಬೆಂಗಳೂರು ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್: ಆಸ್ಪತ್ರೆಯಲ್ಲಿ ಮಗು ಸಾವು

Published : Jan 09, 2026, 02:49 PM IST
air india pilot detained vancouver alcohol smell flight delay 2025

ಸಾರಾಂಶ

ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಒಂದು ವರ್ಷದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವಿಮಾನವನ್ನುಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯ್ತು. ಆದರೂ ಮಗು ಸಾವನ್ನಪ್ಪಿದಂತಹ ಘಟನೆ ನಡೆದಿದೆ.

ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಒಂದು ವರ್ಷದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವಿಮಾನವನ್ನುಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯ್ತು. ಆದರೂ ಮಗು ಸಾವನ್ನಪ್ಪಿದಂತಹ ಘಟನೆ ನಡೆದಿದೆ. ವಿಮಾನ ಆಗಸದಲ್ಲಿ ಹಾರಾಡುತ್ತಿದ್ದಾಗ ಒಂದು ವರ್ಷದ ಮಗು ಮೊಹಮ್ಮದ್ ಅಬ್ರಾರ್‌ಗೆ ಉಸಿರಾಟದ ಸಮಸ್ಯೆಯಾಗಿದೆ. ವಿಮಾನದಲ್ಲಿದ್ದ ವಿಮಾನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಕೂಡಲೇ ಆತನ ರಕ್ಷಣೆಗೆ ಆಗಮಿಸಿದ್ದರು. ಆದರೂ ಮಗುವಿನ ಸ್ಥಿತಿ ವಿಷಮಿಸುತ್ತಿದ್ದ ಹಿನ್ನೆಲೆ ಕೂಡಲೇ ವಿಮಾನವನ್ನು ಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯ್ತು. ಇಂದೋರ್ ವಿಮಾನ ನಿಲ್ದಾಣಕ್ಕೆ ಮೊದಲೇ ತಿಳಿಸಿದ್ದರಿಂದ ವೈದ್ಯರನ್ನು ವಿಮಾನ ನಿಲ್ದಾಣದಲ್ಲಿ ಮಗುವಿನ ತಪಾಸಣೆಗೆ ಸಿದ್ಧವಾಗಿ ನಿಂತಿದ್ದರು. ಆದರೂ ಮಗು ಬದುಕುಳಿಯಲಿಲ್ಲ. ಅಲ್ಲಿಗೆ ತಲುಪುವ ಮೊದಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಜನವರಿ 6ರಂದು IX 1240 ಸಂಖ್ಯೆಯ ಜೈಪುರದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಈ ಅನಾಹುತ ನಡೆದಿದೆ. ವಿಮಾನದ ಪೈಲಟ್ ವೈದ್ಯಕೀಯ ಸಹಾಯಕ್ಕಾಗಿ ಸಮೀಪವಿದ್ದ ಏರ್‌ಪೋರ್ಟ್‌ನತ್ತ ವಿಮಾನ ತಿರುಗಿಸಿದ್ದಾರೆ ಆದರೆ ಯಾವ ಪ್ರಯತ್ನಗಳು ಫಲ ಕೊಡದೆ ಮಗು ಸಾವನ್ನಪ್ಪಿದೆ.

ಈ ಘಟನೆಯ ವೇಳೆ ವಿಮಾನದಲ್ಲಿನ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆಯೇ ಎಂದು ಕಂಡುಹಿಡಿಯಲು ಅಧಿಕಾರಿಗಳು ಘಟನೆಯನ್ನು ಪರಿಶೀಲಿಸುತ್ತಿದ್ದಾರೆ. ವಿಮಾನವು ಸಂಜೆ 5.30 ಕ್ಕೆ ಜೈಪುರದಿಂದ ಹೊರಟು ರಾತ್ರಿ ಬೆಂಗಳೂರು ತಲುಪಬೇಕಿತ್ತು. ಆದರೆ ಘಟನೆಯಿಂದಾಗಿ ವಿಮಾನವು ರಾತ್ರಿ 8 ಗಂಟೆಗೆ ಇಂದೋರ್ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಮೃತಪಟ್ಟ ಮಗು ತನ್ನ ಪೋಷಕರು ಮತ್ತು ಅಣ್ಣನೊಂದಿಗೆ ಬೆಂಗಳೂರಿಗೆ ಪ್ರಯಾಣಿಸುತ್ತಿತ್ತು. ಇಂದೋರ್‌ನಲ್ಲಿ ವಿಮಾನ ಲ್ಯಾಂಡಿಂಗ್ ಆಗ್ತಿದ್ದಂತೆ ಅವನನ್ನು ಏರ್‌ಪೋರ್ಟ್‌ನ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದರು.

ಇದನ್ನೂ ಓದಿ: ಎಪಿ ಧಿಲ್ಲೋನ್ ಕನ್ಸರ್ಟ್ ವೈರಲ್ ವೀಡಿಯೋ ಎಫೆಕ್ಟ್: ಟಾಕ್ಸಿಕ್ ನಟಿ ತಾರಾ ಸುತಾರಿಯಾ ವೀರ್ ಪಹಾರಿಯಾ ಬ್ರೇಕಪ್

ಕೆಲವು ವರದಿಗಳ ಪ್ರಕಾರ, ವಿಮಾನದಲ್ಲಿದ್ದ ವೈದ್ಯರಾಗಿರುವ ಸಹ ಪ್ರಯಾಣಿಕರೊಬ್ಬರು ವಿಮಾನದಲ್ಲಿದ್ದಾಗ ಮಗುವಿಗೆ ಸಿಪಿಆರ್ ಕೂಡ ನೀಡಿದ್ದರು. ಆದರೆ ಆ ಮಗುವಿಗೆ ಈಗಾಗಲೇ ಕೆಲವು ವೈದ್ಯಕೀಯ ಸಮಸ್ಯೆಗಳಿದ್ದವು ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಶಿಶುವಿಗೆ ಈಗಾಗಲೇ ವೈದ್ಯಕೀಯ ಸಮಸ್ಯೆಗಳಿದ್ದವು ಮತ್ತು ವಿಮಾನ ಹೊರಟ ತಕ್ಷಣ ಮಗು ಅಳಲು ಪ್ರಾರಂಭಿಸಿತು ಮತ್ತು ಮಗುವಿಗೆ ಅಸ್ವಸ್ಥತೆ ಕಂಡುಬಂದ ಕಾರಣ ಅವನ ತಾಯಿ ತಕ್ಷಣ ಸಿಬ್ಬಂದಿಗೆ ಕರೆ ಮಾಡಿದರು. ವಿಮಾನದಲ್ಲಿ ಸಹಾಯ ಮಾಡಲು ವೈದ್ಯರಿದ್ದರು. ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವನ್ನು ತಕ್ಷಣ ಇಂದೋರ್‌ಗೆ ತಿರುಗಿಸಲಾಯಿತು. ಮಗು ಇಳಿಯುವವರೆಗೂ ಮತ್ತು ಇಳಿದ ನಂತರ ಚೆನ್ನಾಗಿತ್ತು, ಆದರೆ ದುರದೃಷ್ಟವಶಾತ್ ಮಗು ಆಸ್ಪತ್ರೆಗೆ ತಲುಪಿದ ನಂತರ ಸಾವನ್ನಪ್ಪಿತು ಎಂದು ಏರ್ ಇಂಡಿಯಾದ ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿ: ಪಕ್ಕದ ಮನೆಯವನಿಗಾಗಿ 7 ಮಕ್ಕಳ ಬಿಟ್ಟು ಬಂದವಳಿಗೆ ಮಸಣ ತೋರಿಸಿದ ಪ್ರಿಯಕರ: ಅನೈತಿಕ ಸಂಬಂಧದ ದುರಂತ ಅಂತ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
ಬೆಂಗಳೂರಿಗೆ ಡೆಲಿವರಿ ಬಾಯ್ ಕೆಲಸಕ್ಕೆ ಬಂದ ಬಿಹಾರ ಕಾರ್ಮಿಕ; ತನ್ನದಲ್ಲದ ತಪ್ಪಿಗೆ ಪೆಟ್ಟುತಿಂದು ವಾಪಸ್ ಹೋದ!