
ನವದೆಹಲಿ(ಜ.26): 71ನೇ ಗಣರಾಜ್ಯೋತ್ಸವಕ್ಕೆ ಅಧಿಕೃತ ತೆರೆ ಬಿದ್ದಿದ್ದು, ನವದೆಹಲಿ ರಾಜಪಥದಲ್ಲಿ ನಡೆಯುತ್ತಿದ್ದ ಪಥಸಂಚಲನ ಮುಕ್ತಾಯ ಕಂಡಿದೆ.
ಪಥಸಂಚಲನ ಮುಕ್ತಾಯವಾಗುತ್ತಿದ್ದಂತೇ ವೇದಿಕೆ ಮೇಲಿದ್ದ ಪ್ರಧಾನಿ ಮೋದಿ, ಕೆಳಗಿಳಿದು ಬಂದು ಜನರತ್ತ ಕೈ ಬೀಸಿ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.
ಹಿಮ ಪರ್ವತ ಗೆದ್ದ ಯೋಧರು: 17 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದರು!
ಪಥಸಂಚಲನ ಮುಗಿದ ಬಳಿಕ ವೇದಿಕೆ ಮೇಲಿದ್ದ ಗಣ್ಯರನ್ನು ಬೀಳ್ಕೊಟ್ಟ ಪ್ರಧಾನಿ ಮೋದಿ, ಬಳಿ ರಾಜಪಥ್’ದಲ್ಲಿ ನೆರೆದಿದ್ದ ಜನಸಮೂಹದ ಬಳಿ ನಡೆದುಕೊಂಡು ಹೋದರು.
ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದ ಜನತೆಯತ್ತ ಕೈಬೀಸಿದ ಪ್ರಧಾನಿ ಮೋದಿ, ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು. ಈ ವೇಳೆ ಜನ ಮೋದಿ ಮೋದಿ ಎಂದು ಕೂಗಿ ಸಂಭ್ರಮಿಸಿದರು.
ಈ ಸಲದ ಗಣರಾಜ್ಯೋತ್ಸವದ ಪ್ರಥಮಗಳು..!
ರಾಜಪಥ್’ದಲ್ಲಿ ಕೆಲವು ಕಾಲ ನಡೆದುಕೊಂಡು ಹೋದ ಪ್ರಧಾನಿ ಮೋದಿ ಅವರಿಗೆ ಭದ್ರತಾ ಸಿಬ್ಬಂದಿ ಸಾಥ್ ನೀಡಿದರು.
ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ