ರಾಜ್ಯಪಾಲರ ವಿರುದ್ಧವೇ ಕೇರಳದಲ್ಲಿ ಗೊತ್ತುವಳಿ?

By Suvarna NewsFirst Published Jan 26, 2020, 11:30 AM IST
Highlights

ಪೌರತ್ವ ಕಾಯ್ದೆ ಬಳಿಕ, ಈಗ ರಾಜ್ಯಪಾಲರ ವಿರುದ್ಧವೇ ಕೇರಳದಲ್ಲಿ ಗೊತ್ತುವಳಿ?| ರಾಜ್ಯಪಾಲರು ಎಲ್ಲ ಸಾಂವಿಧಾನಿಕ ತತ್ವಗಳನ್ನು ಉಲ್ಲಂಘಿಸಿ ಬಹಿರಂಗವಾಗಿಯೇ ವಿಧಾನಸಭೆಯ ಅಧಿಕಾರ ಪ್ರಶ್ನಿಸುತ್ತಿದ್ದಾರೆ

ಕೊಚ್ಚಿ[ಜ.26]: ಇತ್ತೀಚೆಗಷ್ಟೇ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಗೊತ್ತುವಳಿ ಅಂಗೀಕರಿಸಿದ್ದ ಕೇರಳ ವಿಧಾನಸಭೆ, ಇದೀಗ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ವಿರುದ್ಧವೇ ಗೊತ್ತುವಳಿ ಅಂಗೀಕರಿಸುವ ಸಾಧ್ಯತೆ ಇದೆ.

ಈ ಬಗ್ಗೆ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ರಮೇಶ್‌ ಚೆನ್ನಿಥಲ, ರಾಜ್ಯಪಾಲರು ಎಲ್ಲ ಸಾಂವಿಧಾನಿಕ ತತ್ವಗಳನ್ನು ಉಲ್ಲಂಘಿಸಿ ಬಹಿರಂಗವಾಗಿಯೇ ವಿಧಾನಸಭೆಯ ಅಧಿಕಾರ ಪ್ರಶ್ನಿಸುತ್ತಿದ್ದಾರೆ. ವಿಧಾನಸಭೆಯ ಒಮ್ಮತದ ನಿರ್ಣಯ ಟೀಕಿಸುತ್ತಿದ್ದಾರೆ. ಹಾಗಾಗಿ ಅವರ ವಿರುದ್ದ ನಿಲುವಳಿ ಮಂಡಿಸಲು ಅನುಮತಿ ಕೋರಿ ಸ್ಪೀಕರ್‌ಗೆ ನೋಟಿಸು ನೀಡಲಾಗಿದೆ ಎಂದು ಹೇಳಿದ್ದಾರೆ.

‘ಯೂರೋಪಿನ ಬಾಹ್ಯಾಕಾಶ ಸಂಸ್ಥೆಗಳ ಯಶಸ್ಸಿಗೆ ಸೂರ್ಯ ಸಿದ್ಧಾಂತ ಗ್ರಂಥ ಕಾರಣ’!

ಕಾಂಗ್ರೆಸ್‌ನ ಈ ನಡೆಯನ್ನು ರಾಜ್ಯಪಾಲ ಖಾನ್‌ ಸ್ವಾಗತಿಸಿದ್ದು, ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತ ಪಡಿಸುವ ಸ್ವಾತಂತ್ರವಿದೆ. ನಾನು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥ. ಸರ್ಕಾರಕ್ಕೆ ಸಲಹೆ, ಸೂಚನೆ, ಪ್ರೋತ್ಸಾಹ ಹಾಗೂ ಎಚ್ಚರಿಕೆ ಕೊಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಕೇರಳ ವಿಧಾನಸಭೆ ತೆಗೆದುಕೊಂಡ ನಿರ್ಣಯ ಹಾಗೂ ಕಾಯ್ದೆ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದನ್ನು ಖಾನ್‌ ಕಟುವಾಗಿ ವಿರೋಧಿಸಿದ್ದರು.

ಕೇರಳ , ಪಂಜಾಬ್ ಬಳಿಕ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜಸ್ಥಾನ!

click me!