
ಲಡಾಖ್(ಜ.26): ದೇಶಾದ್ಯಂತ 71ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವದೆಹಲಿಯ ರಾಜಪಥ್’ದಲ್ಲಿ ಗಣ್ಯರ ಸಮ್ಮುಖದಲ್ಲಿ ಪಥಸಂಚಲನ ನಡೆಯುತ್ತಿದೆ.
ಅತ್ತ ಲಡಾಖ್’ನಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪೊಲೀಸರು, ಹಿಮಚ್ಛಾದಿತ ಪರ್ವತ ಪ್ರದೇಶದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವ ಆಚರಿಸಿದ್ದಾರೆ.
ಈ ಸಲದ ಗಣರಾಜ್ಯೋತ್ಸವದ ಪ್ರಥಮಗಳು..!
ಇಂಡೋ-ಟಿಬೆಟ್ ಗಡಿಯಲ್ಲಿರುವ ಲಡಾಖ್’ನ ಸುಮಾರು 17 ಸಾವಿರ ಅಡಿ ಎತ್ತರದ ಯುದ್ಧ ಭೂಮಿಯಲ್ಲಿ ಐಟಿಬಿಪಿ ಯೋಧರು ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.
ರಕ್ತವನ್ನೇ ಹೆಪ್ಪುಗಟ್ಟಿಸುವಷ್ಟು ಭೀಕರ ಚಳಿಯಲ್ಲಿ ಗಡಿ ಕಾಯುತ್ತಿರುವ ಐಟಿಬಿಪಿ ಯೋಧರು, ಭಯಂಕರ ಚಳಿಯನ್ನೂ ಲೆಕ್ಕಿಸದೇ ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವದ ಸಂಭ್ರಮಿಸಿದ್ದಾರೆ.
ಉಗ್ರಾತಂಕ ನಡುವೆಯೇ 71ನೇ ಗಣರಾಜ್ಯೋತ್ಸವ!
ಶ್ವೇತವರ್ಣದ ಸಮವಸ್ತ್ರವನ್ನು ಧರಿಸಿದ ಯೋಧರು, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ್ದಾರೆ. ಇಲ್ಲಿನ ತಾಪಮಾನ ಮೈನಸ್ 20 ಡಿಗ್ರಿಗೂ ಕೆಳಗೆ ಕುಸಿಯುವುದು ವಿಶೇಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ