PM convoy: ಆಂಬ್ಯುಲೆನ್ಸ್‌ಗಾಗಿ ದಾರಿ ಬಿಟ್ಟ ಪ್ರಧಾನಿ ಮೋದಿ ಬೆಂಗಾವಲು ಪಡೆ, ವಿಡಿಯೋ ವೈರಲ್‌!

Published : Sep 30, 2022, 05:47 PM ISTUpdated : Sep 30, 2022, 06:43 PM IST
PM convoy: ಆಂಬ್ಯುಲೆನ್ಸ್‌ಗಾಗಿ ದಾರಿ ಬಿಟ್ಟ ಪ್ರಧಾನಿ ಮೋದಿ ಬೆಂಗಾವಲು ಪಡೆ, ವಿಡಿಯೋ ವೈರಲ್‌!

ಸಾರಾಂಶ

ಗುಜರಾತ್ ಬಿಜೆಪಿಯ ಮಾಧ್ಯಮ ವಿಭಾಗ ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ರಧಾನಿಯವರ ಬೆಂಗಾವಲು ವಾಹನದ ಎರಡು ಎಸ್‌ಯುವಿಗಳು, ಅಹಮದಾಬಾದ್‌-ಗಾಂಧಿನಗರ ರಸ್ತೆಯಲ್ಲಿ ಆಂಬ್ಯುಲೆನ್ಸ್‌ಗಾಗಿ ದಾರಿ ಬಿಟ್ಟುಕೊಟ್ಟ ಘಟನೆ ನಡೆದಿದೆ. ಆಂಬ್ಯುಲೆನ್ಸ್ ಹಾದು ಹೋದ ಬಳಿಕ, ಬೆಂಗವಾಲು ಪಡೆಯ ಎರಡೂ ವಾಹನಗಳು ರಸ್ತೆಯ ಮಧ್ಯಕ್ಕೆ ಬರುವ ದೃಶ್ಯ ವಿಡಿಯೋದಲ್ಲಿದೆ.

ಗಾಂಧಿನಗರ (ಸೆ.30): ರಸ್ತೆಯಲ್ಲಿ ಆಂಬ್ಯುಲೆನ್ಸ್‌ಗಾಗಿ ದಾರಿ ಬಿಡಲು ಸಾಮಾನ್ಯ ಜನರೂ ಒಮ್ಮೊಮ್ಮೆ ಅಸಮಾಧಾನ ತೋರುವ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಆದರೆ, ಸ್ವತಃ ಪ್ರಧಾನಿ ಮೋದಿ ಹಾಗೂ ಅವರ ಬೆಂಗಾವಲು ಪಡೆ ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುವ ದಾರಿಯಲ್ಲಿ ಆಂಬ್ಯುಲೆನ್ಸ್‌ಗಾಗಿ ದಾರಿ ಬಿಟ್ಟಿರುವ ವಿಡಿಯೋ ವೈರಲ್‌ ಆಗಿದೆ. ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದರು. ಈ ವೇಳೆ ಆಂಬ್ಯುಲೆನ್ಸ್‌ ಕೂಡ ಬೆಂಗಾವಲು ಪಡೆಯ ವಾಹನದ ಹಿಂದೆ ಬರುತ್ತಿತ್ತು. ಪ್ರಧಾನಿ ಬೆಂಗಾವಲು ಪಡೆಯ ಎರಡು ಎಸ್‌ಯುವಿಗಳು ರಸ್ತೆಯ ಬದಿಗೆ ಸರಿದು ಆಂಬ್ಯುಲೆನ್ಸ್‌ ಮುಂದೆ ಹೋಗಲು ಅನುವು ಮಾಡಿಕೊಟ್ಟರು. ಹೊಸ ವಂದೇ ಭಾರತ್ ರೈಲಿಗೆ ಫ್ಲ್ಯಾಗ್‌ಆಫ್ ಮಾಡಲು ಪ್ರಧಾನಿ ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆಸಿದೆ. ಅದೇ ಸಮಯದಲ್ಲಿ, ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್ ಅನ್ನು ನೋಡಿದ ನಂತರ ಪ್ರಧಾನಿ ಬೆಂಗಾವಲು ಪಡೆಯನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಪ್ರಧಾನಿಯವರ ಇನ್ನೊಂದು ಬೆಂಗಾವಲು ವಾಹನದಿಂದ ಈ ಘಟನೆಯ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

 

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ ಗಾಂಧಿನಗರ ನಿಲ್ದಾಣದಲ್ಲಿ ಗಾಂಧಿನಗರ-ಮುಂಬೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ಇದು ದೇಶದ ಮೂರನೇ ವಂದೇ ಭಾರತ್ ರೈಲು. ಪ್ರಧಾನಿ ಕೂಡ ಗಾಂಧಿನಗರದಿಂದ ಕಲುಪುರಕ್ಕೆ ಹೊಸ ರೈಲಿನಲ್ಲಿ ಮೋದಿ ಈ ವೇಳೆ ಪ್ರಯಾಣಿಸಿದರು. ರೈಲಿನಲ್ಲಿ ಅವರೊಂದಿಗೆ ರೈಲ್ವೆ ಉದ್ಯೋಗಿಗಳು, ಮಹಿಳಾ ಉದ್ಯಮಿಗಳು ಮತ್ತು ಅನೇಕ ಯುವಕರು ಕೂಡ ಇದ್ದರು. ಗಾಂಧಿನಗರದಲ್ಲಿ ನೂತನ ವಂದೇ ಭಾರತ್‌ಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ರೈಲಿನಲ್ಲಿ ಸಾಮಾನ್ಯರಂತೆ ಪ್ರಯಾಣ ನಡೆಸಿದರು.

ಗುಜರಾತ್ ಬಿಜೆಪಿಯ ಮೀಡಿಯಾ ಸೆಲ್‌ ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ರಧಾನಿಯವರ ಬೆಂಗಾವಲು ವಾಹನದಲ್ಲಿ ಎರಡು ಎಸ್‌ಯುವಿಗಳು ಅಹಮದಾಬಾದ್-ಗಾಂಧಿನಗರ ರಸ್ತೆಯಲ್ಲಿ ಆಂಬ್ಯುಲೆನ್ಸ್ ಅನ್ನು ಹಾದುಹೋಗಲು ಪಕ್ಕಕ್ಕೆ ಚಲಿಸುತ್ತಿರುವುದನ್ನು ಸೆರೆ ಹಿಡಿದಿವೆ. ಒಮ್ಮೆಆಂಬ್ಯುಲೆನ್ಸ್‌ ಹಾದು ಹೋದ ಬಳಿಕ ಈ ಕಾರುಗಳು ರಸ್ತೆಯ ಮಧ್ಯಭಾಗಕ್ಕೆ ಮರಳುತ್ತವೆ. ಅಹಮದಾಬಾದ್‌ನಲ್ಲಿ ಸಮಾವೇಶ ಮುಗಿಸಿ ಗಾಂಧಿನಗರದ ರಾಜಭವನಕ್ಕೆ ಪ್ರಧಾನಿ ಮೋದಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕಾಶಿಗಿಂತ ನಾಲ್ಕು ಪಟ್ಟು ಬೃಹತ್‌ ಆದ ಮಹಾಕಾಳ ಕಾರಿಡಾರ್‌ ಅ. 11ಕ್ಕೆ ಮೋದಿಯಿಂದ ಲೋಕಾರ್ಪಣೆ

ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ( Ahmedabad to Gandhinagar ) ಹೋಗುವ ಮಾರ್ಗದಲ್ಲಿ ಪ್ರಧಾನಿ ಮೋದಿಯವರ ಕಾರ್ಕೇಡ್ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ನಿಲ್ಲಿಸಿತು ಎಂದು ಗುಜರಾತ್ ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ. ತಮ್ಮ ಗುಜರಾತ್ ಭೇಟಿಯ ಎರಡನೇ ದಿನದಂದು, ಪ್ರಧಾನಿ ಮೋದಿ ಅವರು ಹೈಸ್ಪೀಡ್ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಫ್ಲ್ಯಾಗ್ ಆಫ್ ಮಾಡಿದರು ಮತ್ತು ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ ಮೊದಲ ಹಂತವನ್ನು ಪ್ರಾರಂಭಿಸಿದರು.

PM Modi Birthday: ವಡ್ನಾಗರಿಂದ ವರ್ಲ್ಡ್ ಸ್ಟೇಜ್‌ವರೆಗೆ: ಮೋದಿ ಹೆಜ್ಜೆ ಹಾಕಿದ ಅಗ್ನಿಪಥದ ರೋಚಕ ರಹಸ್ಯ!

ವಂದೇ ಭಾರತ್ ರೈಲಿನಲ್ಲಿ (Vande Bharat train ) ಸವಾರಿ ಮಾಡಿದ ನಂತರ ಮೋದಿ (Prime Minister Narendra Modi), 21 ನೇ ಶತಮಾನದಲ್ಲಿ ಭಾರತದ ಎಲ್ಲಾ ನಗರಗಳು ಹೊಸ ವೇಗವನ್ನು ಪಡೆಯಲಿವೆ ಎಂದು ಹೇಳಿದರು. ಗುಜರಾತಿನಲ್ಲಿ (Gujrat) ನಾನು ಮುಖ್ಯಮಂತ್ರಿಯಾಗಿದ್ದಾಗ ಬಹು ಸಾರಿಗೆ ಕುರಿತು ದೊಡ್ಡ ಶೃಂಗಸಭೆ ನಡೆಸಿದ್ದೆವು, ಆದರೆ ಕೇಂದ್ರದಲ್ಲಿ ಮತ್ತೊಂದು ಸರ್ಕಾರ ಇದ್ದಾಗ ನನ್ನ ಕನಸನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ನಂತರ ನೀವು ನನ್ನನ್ನು ದೆಹಲಿಗೆ ಕಳುಹಿಸಿದಾಗ, ನಾನು ಆ ಕನಸನ್ನು ಈಡೇರಿಸಿದೆ. ಕಳೆದ 8 ವರ್ಷಗಳಲ್ಲಿ ರೈಲ್ವೇಯಲ್ಲಿ ಗರಿಷ್ಠ ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ವರ್ಷಗಳಲ್ಲಿ, ದೇಶದ ಎರಡು ಡಜನ್‌ಗಿಂತಲೂ ಹೆಚ್ಚು ನಗರಗಳಲ್ಲಿ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದೆ ಅಥವಾ ನಡೆಯುತ್ತಿದೆ. ವೇಗದ ಸಾರಿಗೆಯು ಭಾರತದ ಭವಿಷ್ಯದ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೆಯತ್ತ ನಮ್ಮ ಗಮನವು ಕಾರಣವಾಗಿದೆ. ಇದು ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..