ಗರ್ಭಪಾತ ಬಯಸುವ ಅಪ್ರಾಪ್ತರ ಗುರುತು ಬಹಿರಂಗಪಡಿಸಬೇಕಿಲ್ಲ, ಐತಿಹಾಸಿಕ ತೀರ್ಪಿನಲ್ಲಿದೆ ಸ್ಪಷ್ಟ ಉಲ್ಲೇಖ!

Published : Sep 30, 2022, 12:03 PM IST
ಗರ್ಭಪಾತ ಬಯಸುವ ಅಪ್ರಾಪ್ತರ ಗುರುತು ಬಹಿರಂಗಪಡಿಸಬೇಕಿಲ್ಲ, ಐತಿಹಾಸಿಕ ತೀರ್ಪಿನಲ್ಲಿದೆ ಸ್ಪಷ್ಟ ಉಲ್ಲೇಖ!

ಸಾರಾಂಶ

ಗರ್ಭಪಾತ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.  ಈ ತೀರ್ಪಿನಲ್ಲಿ ಹತ್ತು ಹಲವು ಅಂಶಗಳನ್ನು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದರಲ್ಲಿ ಪ್ರಮುಖವಾಗಿ ಗರ್ಭಪಾತ ಬಯಸುವ ಅಪ್ರಾಪ್ತರ ಗುರುತಿನ ಬಹಿರಂಗ ಪಡಿಸಬೇಕಾ? ಬೇಡವೆ ಅನ್ನೋ ಕುರಿತು ಚರ್ಚೆಗಳಾಗುತ್ತಿದೆ. ಈ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. 

ನವದೆಹಲಿ(ಸೆ.30):  ಸುಪ್ರೀಂ ಕೋರ್ಟ್ ನೀಡಿರುವ ಗರ್ಭಪಾತ ಕುರಿತ ಐತಿಹಾಸಿಕ ತೀರ್ಪಿನಲ್ಲಿ ಅಪ್ರಾಪ್ತ ವಯಸ್ಕರು ಗರ್ಭಪಾತ ಬಯಸಿದ್ದಲ್ಲಿ ಅವರ ಗುರುತನ್ನು ವೈದ್ಯರು ಪೋಲಿಸರಿಗೆ ಬಹಿರಂಗ ಪಡಿಸುವ ಅಗತ್ಯವಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಜಸ್ಟೀಸ್ ಡಿ.ವೈ.ಚಂದ್ರಚೂಡ್‌, ನ್ಯಾ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಪೀಠ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.  ವಿವಾಹಿತರು ಹಾಗೂ ಅವಿವಾಹಿತರು ಎಂಬ ಭೇದಭಾವವಿಲ್ಲದೆ 24 ವಾರಗಳವರೆಗೆ ಸುರಕ್ಷಿತ ಮತ್ತು ಕಾನೂನುಬದ್ಧವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಎಲ್ಲ ಮಹಿಳೆಯರೂ ಅರ್ಹರು ಈ ಪೀಠ ತೀರ್ಪು ನೀಡಿತ್ತು.  ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್ (MTP Act) ಅಡಿಯಲ್ಲಿ ಅಪ್ರಾಪ್ತ ವಯಸ್ಕರು ಮತ್ತು ಅವರ ಪಾಲಕರು ಗರ್ಭಪಾತ ಬಯಿಸಿದರೆ ನೋಂದಾಯಿತ ವೈದ್ಯರಲ್ಲಿ ಮಾಡಿಸಿಕೊಳ್ಳಬುಹುದು. ಈ ವೇಳೆ ನೋಂದಾಯಿತ ವೈದ್ಯರು ಪೊಲೀಸರಿಗೆ ಮಾಹಿತಿ ಒದಗಿಸಬೇಕು. ಆದರೆ ಪೋಲಿಸರಿಗೆ ಒದಿಗಿಸುವ ಈ ಮಾಹಿತಿಯಲ್ಲಿ ವೈದ್ಯರು ಅಪ್ರಾಪ್ತರ ಗುರುತು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

MTP ಕಾಯಿದೆಯಡಿಯಲ್ಲಿ ಗರ್ಭಪಾತ ಮಾಡಿಸಲು ಬಯಸುವ  ಅಪ್ರಾಪ್ತ ವಯಸ್ಕರನ್ನು ಕ್ರಿಮಿನಲ್ ಮೊಕದ್ದಮೆಗಳಿಂದದ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಪ್ರಾಪ್ತರ ಗುರುತನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ. POCSO ಕಾಯಿದೆಯ ಸೆಕ್ಷನ್ 19(1) ಅಡಿಯಲ್ಲಿ RMP ಯ ವರದಿ  ಎಂದು ತೀರ್ಪು ವಿವರಣೆ ನೀಡಿದೆ. 

ಅವಿವಾಹಿತ ಮಹಿಳೆಯರೂ ಗರ್ಭಪಾತ ಮಾಡಿಸಿಕೊಳ್ಳಬಹುದು; ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ವಿವಾಹಿತ ಮತ್ತು ಅವಿವಾಹಿತ/ಒಂಟಿ ಮಹಿಳೆಯರಿಗೆ ಸಮಾನ ಸ್ಥಾನ 
ಗರ್ಭಪಾತ ಕಾಯ್ದೆಯಡಿ ವಿವಾಹಿತ ಹಾಗೂ ಅವಿವಾಹಿತರು ಎಂದು ಪ್ರತ್ಯೇಕಿಸುವುದು ಸಂವಿಧಾನಿಕವಾಗಿ ಸಮರ್ಥನೀಯವಲ್ಲ. ವಿವಾಹಿತ ಮಹಿಳೆಯರಷ್ಟೇ ಲೈಂಗಿಕವಾಗಿ ಸಕ್ರಿಯರಾಗಿರುತ್ತಾರೆ ಎಂಬ ಅಪನಂಬಿಕೆಯನ್ನು ಇದು ಬಲಗೊಳಿಸುತ್ತದೆ. ಹೀಗಾಗಿ ಗರ್ಭಪಾತ ಕಾಯ್ದೆಯಡಿ ಅವಿವಾಹಿತರು ಅಥವಾ ಒಂಟಿ ಮಹಿಳೆಯರು ಕೂಡ ವಿವಾಹಿತ ಮಹಿಳೆಯರಷ್ಟೇ 24 ವಾರಗಳವರೆಗೆ ಗರ್ಭಪಾತ ಮಾಡಿಸಿಕೊಳ್ಳಬಹುದು. ವಿವಾಹಿತರಷ್ಟೇ ಅವಿವಾಹಿತರಿಗೂ ಸಂತಾನೋತ್ಪತ್ತಿಯ ಸಮಾನ ಹಕ್ಕುಗಳು ಇವೆ.

ಪತಿಯಿಂದ ದೂರವಾದ ಮಹಿಳೆಯ ಗರ್ಭಪಾತಕ್ಕೆ ಗಂಡನ ಒಪ್ಪಿಗೆ ಅಗತ್ಯವಿಲ್ಲ; ಕೇರಳ ಹೈಕೋರ್ಟ್

ವೈವಾಹಿಕ ರೇಪ್‌:
ವಿವಾಹಿತ ಮಹಿಳೆ ಬಲವಂತವಾಗಿ ಗರ್ಭವತಿಯಾದರೆ ಅತ್ಯಾಚಾರ ಉದ್ದೇಶದಿಂದ ಅದನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಬಹುದು. ವಿವಾಹಿತ ಮಹಿಳೆಯರೂ ಕೂಡ ಅತ್ಯಾಚಾರ ಸಂತ್ರಸ್ತರ ಭಾಗವಾಗುತ್ತಾರೆ. ಅತ್ಯಾಚಾರ ಎಂದರೆ ಒಪ್ಪಿಗೆ ಪಡೆಯದೇ ಲೈಂಗಿಕ ಕ್ರಿಯೆ ನಡೆಸುವುದು. ಅಲ್ಲೂ ಹಿಂಸೆ ನಡೆಯುತ್ತದೆ. ಮಹಿಳೆಯರು ಬಲವಂತವಾಗಿ ಗರ್ಭವತಿಯರಾಗುತ್ತಾರೆ ಎಂದು ನ್ಯಾಯಾಲಯ ಹೇಳಿದೆ

ಗರ್ಭಪಾತಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಚ್‌ ನೀಡಿರುವ ತೀರ್ಪಿಗೆ 25 ವರ್ಷದ ಅವಿವಾಹಿತ ಮಹಿಳೆಯ ಕಾನೂನು ಹೋರಾಟ ಕಾರಣ. ವಿವಾಹವಾಗುವುದಾಗಿ ನಂಬಿಸಿ ಪ್ರಿಯಕರ ತನ್ನನ್ನು ಗರ್ಭವತಿಯನ್ನಾಗಿಸಿದ್ದಾನೆ. ಈಗ ವಿವಾಹವಾಗಲು ನಿರಾಕರಿಸುತ್ತಿದ್ದಾನೆ. ಗರ್ಭವತಿಯಾಗಿ 23 ವಾರಗಳಾಗಿವೆ. ಹೀಗಾಗಿ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಆಕೆ ದೆಹಲಿ ಹೈಕೋರ್ಚ್‌ ಮೊರೆ ಹೋಗಿದ್ದಳು. ತನ್ನ ಪೋಷಕರು ಕೃಷಿಕರಾಗಿದ್ದು, ಐವರು ಮಕ್ಕಳಿದ್ದಾರೆ. ನಾನೇ ದೊಡ್ಡವಳು. ಮಗುವನ್ನು ಬೆಳೆಸಲು ದಾರಿ ಇಲ್ಲ ಎಂದು ಅಲವತ್ತುಕೊಂಡಿದ್ದಳು. 20 ವಾರ ಮೀರಿರುವ ಕಾರಣ ಕಾನೂನು ಪ್ರಕಾರ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಚ್‌ ಹೇಳಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು