ಮದುವೆಯ ಶಾಸ್ತ್ರದಲ್ಲಿ ಅರ್ಚಕರೊಬ್ಬರು ನವಜೋಡಿಗೆ ಚಮಕ್ ಕೊಟ್ಟು ಎಲ್ಲರ ಮುಖದಲ್ಲಿ ನಗು ತರಿಸಿದ್ದಾರೆ. ಹಾಲಿನ ಪಾತ್ರೆಯಲ್ಲಿ ಉಂಗುರ ಹುಡುಕುವ ಶಾಸ್ತ್ರದಲ್ಲಿ ಅರ್ಚಕರು ತಮಾಷೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತವೆ. ವೆಡ್ಡಿಂಗ್ ಪ್ಲಾನರ್, ಫೋಟೋಗ್ರಾಫರ್‌ಗಳು ಸೇರಿದಂತೆ ಮದುವೆ ತೆರಳಿದ ಎಲ್ಲರೂ ಅಲ್ಲಿಯ ಸುಂದರ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಾರೆ. ನಾಲ್ಕೈದು ವರ್ಷಗಳ ಹಿಂದೆ ವಧು-ವರ ಡ್ಯಾನ್ಸ್, ಇಬ್ಬರ ಗ್ರ್ಯಾಂಡ್ ಎಂಟ್ರಿಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿದ್ದವು. ಆದ್ರೆ ಇಂದು ಮದುವೆಗೆ ಸಂಬಂಧಿಸಿದ ಪ್ರತಿಯೊಂದು ಶಾಸ್ತ್ರದ ರೀಲ್ಸ್ ಅಪ್ಲೋಡ್ ಆಗಿರುತ್ತದೆ. ಅದರಲ್ಲಿಯೂ ಮದುವೆಯಲ್ಲಿ ನಡೆಯುವ ತಮಾಷೆಯ ವಿಡಿಯೋಗಳು ಹೆಚ್ಚೆಚ್ಚು ವೈರಲ್ ಆಗುತ್ತವೆ. ಇದೀಗ ಅಂತಹುವುದೇ ಒಂದು ವಿಡಿಯೋ ವೈರಲ್ ಆಗಿದ್ದು, ಅರ್ಚಕರು ಭಲೇ ಕಿಲಾಡಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಅರ್ಚಕರು ಅಂದ್ರೆ ತುಂಬಾ ಸ್ಟ್ರಿಕ್ಟ್ ಆಗಿದ್ದು, ತುಂಬಾ ಕಟ್ಟುನಿಟ್ಟು. ಯಾವ ಶಾಸ್ತ್ರದಲ್ಲಿಯೂ ಅರ್ಚಕರು ಕಾಂಪ್ರಮೈಸ್ ಆಗಲ್ಲ ಎಂದು ಹೇಳುತ್ತಾರೆ. ವರ ಮತ್ತು ವಧುವಿನ ಕಡೆಯವರು ಎಷ್ಟೇ ತಮಾಷೆ ಮಾಡಿದ್ರೂ ಅರ್ಚಕರು ತುಂಬಾ ಗಂಭೀರವಾಗಿರುತ್ತಿದ್ದರು. ಆದ್ರೆ ಈ ಮಾತುಗಳಿಗೆ ಅಪವಾದ ಎಂಬಂತೆ ಕೆಲ ಅರ್ಚಕರು ತುಂಬಾನೇ ಫ್ರೆಂಡ್ಲಿಯಾಗಿ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸುತ್ತಾರೆ. ಅರ್ಚಕರೊಬ್ಬರು ಡ್ಯಾನ್ಸ್ ಮಾಡುತ್ತಾ ನವಜೋಡಿಗೆ ಅರುಂಧತಿ ನಕ್ಷತ್ರ ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಆದ್ರೆ ಈಗಿನ ವಿಡಿಯೋದಲ್ಲಿ ಅರ್ಚಕರು ನವಜೋಡಿಗೆ ಚಮಕ್ ಕೊಟ್ಟು ಎಲ್ಲರ ಮುಖದಲ್ಲಿಯೂ ನಗು ತರಿಸಿದ್ದಾರೆ.
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಅರ್ಚಕರು ಅಂದ್ರೆ ಹೀಗಿರಬೇಕು. ಎಲ್ಲರೂ ಮದುವೆಯಲ್ಲಿ ಬ್ಯುಸಿಯಾಗಿದ್ದಾಗ ಈ ರೀತಿ ಯಾರಾದ್ರೂ ತಮಾಷೆ ಮಾಡುತ್ತಿರಬೇಕು ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು theweddingscrol (Wedding Content Creator) ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪಂಡಿತ್ ಜೀ ಒಂದು ಕ್ಷಣ ಎಲ್ಲರನ್ನೂ ಫೂಲ್ ಮಾಡಿದರು. ನವಜೋಡಿ ಶಾಕ್, ಪಂಡಿತ್ ಜೀ ರಾಕ್ ಎಂದು ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಹೆಂಡ್ತಿಗೆ ರೊಮ್ಯಾಂಟಿಕ್ ಆಗಿ ಹೂ ಮುಡಿಸುತ್ತಿದ್ದ ಗಂಡನನ್ನ ವಿಚಲಿತಗೊಳಿಸಿದ ಹಸು; ವಿಡಿಯೋ ವೈರಲ್
ವೈರಲ್ ವಿಡಿಯೋದಲ್ಲಿ ಏನಿದೆ?
ಮದುವೆಯಲ್ಲಿ ಜೋಡಿಗೆ ಜೊತೆಯಾಗಿ ಕೆಲವೊಂದು ಶಾಸ್ತ್ರಗಳನ್ನು ಮಾಡಿಸಲಾಗುತ್ತದೆ. ಹಾಲು ತುಂಬಿರುವ ಪಾತ್ರೆಯಲ್ಲಿ ಉಂಗುರ ಹಾಕುತ್ತಾರೆ. ಜೋಡಿಯಲ್ಲಿ ಯಾರು ಮೊದಲು ಉಂಗುರ ಪತ್ತೆ ಮಾಡುತ್ತಾರೆ ಎಂಬುವುದು ನೆರೆದಿದ್ದ ಅತಿಥಿಗಳಲ್ಲಿ ಕುತೂಹಲವಿರುತ್ತದೆ. ಈ ಶಾಸ್ತ್ರ ಮಾಡುವಾಗಲೇ ಅರ್ಚಕರು ತಮಾಷೆ ಮಾಡಿದ್ದಾರೆ. ಹಾಲಿನ ಪಾತ್ರೆಯಲ್ಲಿ ಉಂಗುರ ಹಾಕಿದಂತೆ ಮಾಡಿ ಹಿಂದಕ್ಕೆ ಎತ್ತಿಕೊಂಡಿದ್ದಾರೆ. ಇದನ್ನು ತಿಳಿಯದ ವಧು ಮತ್ತು ವರ ಪಾತ್ರೆಯಲ್ಲಿ ಉಂಗುರ ಹುಡುಕಾಡಿದ್ದಾರೆ. ಅರ್ಚಕರು ಉಂಗುರ ಇನ್ನು ನನ್ನ ಕೈಯಲ್ಲಿದೆ ಎಂದಾಗ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಯಾರಿಗೆ ಮೊದಲು ಉಂಗುರ ಸಿಗುತ್ತೆ ಅವರ ಮಾತೇ ನಡೆಯುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಹಾರ ಬದಲಿಸ್ಕೊಂಡು ವರ ಮಾಡಿದ ಕೆಲಸಕ್ಕೆ ಹೆಣ್ಮಕ್ಕಳು ಫುಲ್ ಖುಷ್; ಕಾರ್ಪೋರೇಟ್ ಗಂಡ ಅಂದ್ರು ಗಂಡೈಕ್ಳು