ಒಂದು ದೇಶ, ಒಂದು ಚುನಾವಣೆ; ಮೊದಲ ಸಭೆಯಲ್ಲಿ ನಡೆದಿದ್ದೇನು? ಹೇಗಿತ್ತು ಟಾಕ್ ವಾರ್?

By Kannadaprabha News  |  First Published Jan 9, 2025, 11:33 AM IST

ಲೋಕಸಭೆ, ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಕುರಿತು ಜಂಟಿ ಸಂಸದೀಯ ಸಮಿತಿಯ ಸಭೆಯಲ್ಲಿ ಪರ-ವಿರೋಧ ಚರ್ಚೆಗಳು ನಡೆದವು. ವೆಚ್ಚ ಕಡಿತಕ್ಕಿಂತ ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಮುಖ್ಯ ಎಂದು ವಿಪಕ್ಷಗಳು ವಾದಿಸಿದವು.


ನವದೆಹಲಿ: ಲೋಕಸಭೆ, ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಕರಡು ಮಸೂದೆ ಚರ್ಚೆಗೆ ರಚಿಸಲಾದ ಬಿಜೆಪಿಯ ಪಿ.ಪಿ. ಚೌಧರಿ ನೇತೃತ್ವದ ಜಂಟಿ ಸಂಸದೀಯ ಸಮಿತಿಯ ಸಭೆ ಬುಧವಾರ ನಡೆಯಿತು. ಈ ವೇಳೆ, ವಿಪಕ್ಷಗಳು ತಿದ್ದುಪಡಿಗಳನ್ನು ವಿರೋಧಿಸಿದರೆ, ಇದು ಜನರ ಅಭಿಪ್ರಾಯ ಎಂದು ಬಿಜೆಪಿ ಪ್ರತಿಪಾದಿಸಿದೆ.

ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಕಾರಿಗಳು ತಿದ್ದುಪಡಿಗಳ ಕುರಿತು ವಿವರಿಸಿದ್ದು, ಬಳಿಕ ಅದರ ಪರ-ವಿರೋಧಚರ್ಚೆಗಳು ನಡೆದವು. ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ವೆಚ್ಚ ಕಡಿಮೆಯಾಗುವುದು ಎಂಬ ವಾದವನ್ನು ಪ್ರಶ್ನಿಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, "2004ರ ಲೋಕಸಭೆ ಚುನಾವಣೆಗೆ ಮೊದಲ ಬಾರಿ" 543 ಸ್ಥಾನಗಳಿಗೆ ಇವಿಎಂ ಬಳಸಿ ಮತದಾನ ನಡೆಸಿದಾಗ ಅಂದಾಜಿಸಲಾದಂತೆ ಈಗಲೂ ಹೇಳುತ್ತಿದ್ದೀರಾ?' ಎಂದು ಪ್ರಶ್ನಿಸಿದರು. ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಎತ್ತಿಹಿಡಿಯುವುದು ಹಣ ಉಳಿಸುವುದಕ್ಕಿಂತ ಮುಖ್ಯ ಎಂದು ಟಿಎಂಸಿ ಅಭಿಪ್ರಾಯಪಟ್ಟಿತು.

Tap to resize

Latest Videos

ಒಂದು ಚುನಾವಣೆಯಿಂದ ಹಲವು ರಾಜ್ಯಗಳ ವಿಧಾನಸಭೆಗಳನ್ನು ಅವಧಿಗೂ ಮುನ್ನ ವಿಸರ್ಜಿಸಬೇಕಾಗಿ ಬರುವುದರಿಂದ ಅದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧ ಎಂದು ವಿಪಕ್ಷಗಳು ಹೇಳಿದಾಗ, ಬಿಜೆಪಿ ನಾಯಕ ಜೈಸ್ವಾಲ್ 1957 ರಲ್ಲಿ ರಾಜೇಂದ್ರ ಪ್ರಸಾದ್ ರಾಷ್ಟಪತಿಯಾಗಿದ್ದಾಗ 7 ರಾಜ್ಯಗಳ ವಿಧಾನಸಭೆ ವಿಸರ್ಜಿಸಿದ್ದನ್ನು ನೆನಪಿಸಿ ಅದು ಸಂವಿಧಾನ ವಿರೋಧಿಯಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಏಕ ಚುನಾವಣೆಯ ಮಸೂದೆ ಮಂಡನೆ, ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ವಿಪಕ್ಷ ಕಿಡಿ

click me!