ಲಕ್ನೋ: ಕಳ್ಳರನ್ನು ಹಿಡಿಯಲು ಪೊಲೀಸರನ್ನು ನಿಯೋಜಿಸುತ್ತಾರೆ. ಆದರೆ ಇಲ್ಲಿ ಪೊಲೀಸ್ ಪೇದೆಯೇ ಕಳ್ಳನಾಗಿದ್ದಾನೆ. ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಪಕ್ಕದಲ್ಲಿ ಇರಿಸಿ ರಸ್ತೆ ಬದಿಯೇ ನಿದ್ದೆಗೆ ಜಾರಿದ್ದಾನೆ. ಈ ದೃಶ್ಯ ಅಲ್ಲೇ ಇದ್ದ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಇದರ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ.
ಕಾನ್ಪುರದ ಮಹಾರಾಜ್‌ಪುರ ಚಟ್‌ಮಾರ ಇಂಟರ್‌ಸೆಕ್ಷನ್ ಬಳಿ ಈ ಪೊಲೀಸ್ ಪೇದೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಪೊಲೀಸ್ ಪೇದೆ ರಸ್ತೆ ಬದಿ ನಿದ್ದೆಗೆ ಜಾರಿದ ವ್ಯಕ್ತಿಯ ಮೊಬೈಲ್‌ನ್ನು ಎಗರಿಸಿದ್ದಾನೆ. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ (CCTV) ಸೆರೆ ಆಗಿದೆ.
ಪೊಲೀಸ್ ಪೇದೆ ಪ್ರಗೇಶ್ ಸಿಂಗ್, ರಸ್ತೆ ಬದಿಯ ವರಂಡಾದಲ್ಲಿ ಮಲಗಿದ್ದ ವ್ಯಕ್ತಿಯ ಬಳಿ ಹೋಗಿದ್ದು, ಆತನ ಬಳಿ ಇದ್ದ ಮೊಬೈಲ್ ಫೋನ್ ಎಗರಿಸಿಕೊಂಡು ಆತ ಪರಾರಿಯಾಗಿದ್ದಾನೆ. ಆದರೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಘಟನೆ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಹೀಗೆ ಮೊಬೈಲ್ ಎಗರಿಸಿದ ಪೇದೆಯನ್ನು ಮಹರಾಜ್ ಪುರ ಪೊಲೀಸ್ ಠಾಣೆಯ ಪೇದೆ ತೈಪತ್ ಪ್ರಗೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಈತನನ್ನು ಸೇವೆಯಿಂದ ಅಮಾನತು ಮಾಡುವಂತೆ ಎಸ್ಪಿ ಆದೇಶಿಸಿದ್ದಾರೆ.
ಶಿವಾಜಿ ಸೂರತ್ಕಲ್ 2; ಕಳ್ಳ-ಪೊಲೀಸ್ ಆಟದಲ್ಲಿ ಕಳ್ಳನೂ ಅವ್ನೆ ಪೊಲೀಸ್ ಕೂಡ ಅವ್ನೆ
ಈ ಕಾನ್ಸ್‌ಟೇಬಲ್ ಜೊತೆ ಹೋಮ್ ಗಾರ್ಡ್ ಜವಾನ ಕೂಡ ಇದ್ದು, ಆತನ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇನ್ನು ಜಗದ ಚಿಂತೆಯೇ ಇಲ್ಲದೇ ರಸ್ತೆ ಬದಿ ಮಲಗಿದ್ದ ವ್ಯಕ್ತಿಯನ್ನು ಮಹರಾಜ್‌ಪುರದ ಚಾತ್‌ಮರ್ (Maharajpur Chhatmara) ಗ್ರಾಮದ ನಿವಾಸಿ ನಿತೀನ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ರಸ್ತೆ ಬದಿ ಇರುವ ತನ್ನ ಶಾಪ್ ಮುಂದೆ ಇರುವ ವರಂಡಾದಲ್ಲಿ ಶನಿವಾರ ರಾತ್ರಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆ. ಇದೇ ದೇಶದಲ್ಲಿ ಹೋಮ್‌ಗಾರ್ಡ್ ಹಾಗೂ ಪೊಲೀಸ್ ಪೇದೆ ಪ್ರಗೇಶ್ ಸಿಂಗ್ ಗಸ್ತು ನಿರ್ವಹಿಸುತ್ತಿದ್ದರು.
ಕಳ್ಳನ ಕೈಚಳಕ ಅಲ್ಲ ಮೈಚಳಕ ಇದು... ವಿಡಿಯೋ ನೋಡಿ
ಹೆಚ್ಚುವರಿ ಪೊಲೀಸ್ ಅಧಿಕ್ಷಕ ವಿಜೇಂದ್ರ ದ್ವಿವೇದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೊಬೈಲ್ ಎಗರಿಸಿದ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆದಿದೆ ಎಂದು ತಿಳಿಸಿದರು. ಮೊಬೈಲ್ ಕದ್ದ ಪೇದೆ ಪ್ರಗೇಶ್ ಸಿಂಗ್(Pragesh Singh) ಹಾಗೂ ಲೈಕ್ ಸಿಂಗ್ (Laik Singh) ವಿರುದ್ಧ ನಿತೀನ್ ಸಿಂಗ್ (Nitin Singh)ದೂರು ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ