ಎಸಿಬಿ ರದ್ದು ಪ್ರಶ್ನಿಸಿದ್ಧ ಪೊಲೀಸ್‌ ಮಹಾಸಂಘದ ಖಾಸಗಿ ಅರ್ಜಿಗೆ ಸುಪ್ರೀಂ ಕೋರ್ಟ್‌ ಕೆಂಡ!

Published : Oct 10, 2022, 05:19 PM IST
ಎಸಿಬಿ ರದ್ದು ಪ್ರಶ್ನಿಸಿದ್ಧ ಪೊಲೀಸ್‌ ಮಹಾಸಂಘದ ಖಾಸಗಿ ಅರ್ಜಿಗೆ ಸುಪ್ರೀಂ ಕೋರ್ಟ್‌ ಕೆಂಡ!

ಸಾರಾಂಶ

ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದು ಮಾಡಿದ ಕರ್ನಾಟಕದ ಹೈಕೋರ್ಟ್‌ ನಿರ್ಧಾರವನ್ನು ಪ್ರಶ್ನಿಸಿ ಪೊಲೀಸ್‌ ಮಹಾಸಂಘದ ವತಿಯಿಂದ ಸುಪ್ರೀಂ ಕೋರ್ಟ್‌ನಲ್ಲಿ ಖಾಸಗಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಕುರಿತು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಈ ಅರ್ಜಿ ಸಲ್ಲಿಕೆ ಮಾಡಲು ನೀವ್ಯಾರು? ನೀವೇನಾದರೂ ಸಂತ್ರಸ್ತರೇ ಎಂದು ಪ್ರಶ್ನೆ ಮಾಡಿದೆ.  

ನವದೆಹಲಿ (ಅ. 10): ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದು ಮಾಡಿದ ಕರ್ನಾಟಕ ಹೈಕೋರ್ಟ್‌ನ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಸೋಮವಾರ ವಜಾ ಮಾಡಲಾಗಿದೆ. ಪೊಲೀಸ್‌ ಮಹಾಸಂಘದ ವತಿಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದರ ವಿಚಾರಣೆಯನ್ನು ಸೋಮವಾರ ನಡೆಸಿದ ಸುಪ್ರೀಂ ಕೋರ್ಟ್‌, '2016ರಲ್ಲಿ ರಾಜ್ಯ ಸರ್ಕಾರ ಸ್ಥಾಪನೆ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದು ಮಾಡಿ ಸಂಪೂರ್ಣ ಅಧಿಕಾರವನ್ನು ಲೋಕಾಯುಕ್ತಕ್ಕೆ ಹಸ್ತಾಂತರ ಮಾಡುವಂತೆ ಕರ್ನಾಟಕ ಹೈಕೋರ್ಟ್‌' ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿಯನ್ನು ವಿಚಾರಣೆ ಮಾಡಿತು. ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌, ಅರ್ಜಿ ಸಲ್ಲಿಸಿರುವ ನೀವು ಯಾರು? ಸಂತ್ರಸ್ತರೇ, ಖಾಸಗಿ ಅರ್ಜಿ ಸಲ್ಲಿಸಲು ನಿಮಗೇನು ಹಕ್ಕಿದೆ ಎಂದು ಪ್ರಶ್ನೆ ಮಾಡಿದೆ. ಯಾವುದೋ ಸಂಘದ ಹೆಸರಲ್ಲಿ ಖಾಸಗಿ ಅರ್ಜಿಯನ್ನು ಸಲ್ಲಿಕೆ ಮಾಡಿದರೆ, ಅದರ ವಿಚಾರಣೆ ಮಾಡಲಾಗುವುದಿಲ್ಲ. ಯಾರು ಅರ್ಜಿ ಹಾಕುತ್ತಿದ್ದಾರೆ ಎನ್ನುವುದು ನಮಗೆ ಪ್ರಮುಖವಾಗಿ ತಿಳಿಯಬೇಕು. ಯಾವುದೋ ಸಂಘದ ಹೆಸರಲ್ಲಿ ಖಾಸಗಿ ಅರ್ಜಿ ಹಾಕಿದರೆ ಅದನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಹೇಳುವ ಮೂಲಕ ಅರ್ಜಿಯನ್ನು ವಜಾ ಮಾಡಿದೆ.

ಭ್ರಷ್ಟ ರಾಜಕಾರಣಿಗಳು, ಸಚಿವರು ಮತ್ತು ಅಧಿಕಾರಿಗಳನ್ನು ಲೋಕಾಯುಕ್ತದ ಕಾವಲು ಕಣ್ಣುಗಳಿಂದ ರಕ್ಷಿಸುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರವು ಎಸಿಬಿಯನ್ನು ಸ್ಥಾಪಿಸಿದೆ ಎಂದು ಹೇಳಿದ್ದ ಕರ್ನಾಟಕ ಹೈಕೋರ್ಟ್ ಆಗಸ್ಟ್ 11 ರಂದು ಎಸಿಬಿಯನ್ನು ()Anti Corruption Bureau ರದ್ದುಗೊಳಿಸುವ ಆದೇಶ ಪ್ರಕಟಿಸಿತ್ತು. ಅದರೊಂದಿಗೆ ಬಾಕಿ ಉಳಿದಿರುವ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ (karnataka lokayukta) ವರ್ಗಾಯಿಸುವುದಾಗಿ ಹೈಕೋರ್ಟ್‌(High Court) ಹೇಳಿದ್ದರೂ ಏಕೆ ಅಸಮಾಧಾನಗೊಂಡಿದ್ದೀರಿ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠ ಅರ್ಜಿದಾರರನ್ನು ಪ್ರಶ್ನಿಸಿತು.

ಅಧಿಕಾರಗಳು ಲೋಕಾಯುಕ್ತದಲ್ಲಿಯೇ ಇರುತ್ತವೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿರುವುದನ್ನು ಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಈ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ. ಇದಕ್ಕೆ ಉತ್ತರಿಸಿದ ಅರ್ಜಿದಾರರ ವಕೀಲರೊಬ್ಬರು, ಎಸಿಬಿಗೆ ಸಾಧ್ಯವಿರುವ ಎಲ್ಲ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ. ಸರ್ಕಾರಿ ಉದ್ಯೋಗಿಯಾಗಿರುವ ಆರೋಪಿ ತಿಂಗಳಿಗೆ ₹ 20,000 ಕ್ಕಿಂತ ಕಡಿಮೆ ಆದಾಯ ಹೊಂದಿರುವ ಪ್ರಕರಣಗಳನ್ನು ಲೋಕಾಯುಕ್ತ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿದರು.

ಅಂತಹ ಅರ್ಜಿಗಳು ನಕಲಿ ಮೊಕದ್ದಮೆಗಳಾಗಿದ್ದು,  ವಜಾಗೊಳಿಸಲು ಅರ್ಹವಾಗಿರುವಂತೆ ಕಾಣುತ್ತಿದೆ ಎಂದು ನ್ಯಾಯಾಲಯ (Supreme Court of India) ಹೇಳಿದೆ. ಇದಲ್ಲದೆ, ಕರ್ನಾಟಕ ಪೊಲೀಸ್ ಮಹಾಸಂಘದ ವಕೀಲರು ಮಧ್ಯಪ್ರವೇಶಿಸುವಂತೆ ಕೇಳಿದಾಗ, ಅಂತಹ ಸಂಸ್ಥೆಯ ಮೂಲಕ ಹಾಜರಾಗುವ ರಾಜ್ಯದ ಅಧಿಕಾರಿಗಳನ್ನು ತಾನು ರಂಜನೆ ಮಾಡುವುದಿಲ್ಲ ಎಂದು ಕೋರ್ಟ್ ಟೀಕಿಸಿತು. ನೊಂದ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋದರೆ ಮಾತ್ರ ಅದನ್ನು ನಿಭಾಯಿಸುವುದಾಗಿ ಹೇಳಿದೆ.

ACB vs Lokayukta ಸಿದ್ದುಗೆ ಮುಖಭಂಗ, ಹೈಕೋರ್ಟ್ ಸೂಚನೆಯಂತೆ ಎಸಿಬಿ ರದ್ದುಗೊಳಿಸಿ ಬೊಮ್ಮಾಯಿ ಸರ್ಕಾರ ಆದೇಶ!

ದೂರುಗಳು ಬರುವುದರ ಮೂಲಕ ನೀವು ಹಣ ಸಂಪಾದಿಸಲು ಬಯಸುತ್ತೀರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನೀವು ರಾಜ್ಯದ ಅಧಿಕಾರಿಗಳು, ಮಹಾಸಂಘದ ಮೂಲಕ ಹಾಜರಾಗಲು ಸಾಧ್ಯವಿಲ್ಲ. ಇದನ್ನು ನಾವು ರಂಜಿಸುವುದಿಲ್ಲ. ನೊಂದ ವ್ಯಕ್ತಿ ಎದುರಿಗೆ ಬರಲಿ ನಂತರ ನಾವು ಅದನ್ನು ನಿಭಾಯಿಸುತ್ತೇವೆ. ಇದು ಮಹಾಸಂಘದ ವ್ಯವಹಾರವಲ್ಲ ಹಾಗಾಗಿ ಇದನ್ನು ವಜಾಗೊಳಿಸಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಖಾಸಗಿ ಅರ್ಜಿ

ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಒಪ್ಪಿ ಎಸಿಬಿ ರದ್ದು ಮಾಡುವುದಾಗಿ ಕರ್ನಾಟಕ ಸರ್ಕಾರ ಹೇಳಿತ್ತಾದರೂ, ಅದರ ಬೆನ್ನಲ್ಲಿಯೇ ಈ ಖಾಸಗಿ ಅರ್ಜಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ಸರ್ಕಾರವೇ ಈ ಅರ್ಜಿ ಸಲ್ಲಿಕೆ ಮಾಡಿತ್ತು ಎಂದು ಮೊದಲಿಗೆ ವರದಿಯಾಗಿದ್ದರೂ, ಕೊನೆಗೆ ಇದು ಖಾಸಗಿ ಅರ್ಜಿ ಎನ್ನುವುದು ಬಹಿರಂಗವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!