ಪಂಜಾಬ್‌ನಲ್ಲಿ ಪೊಲೀಸ್ ಠಾಣೆ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ..!

Published : Dec 10, 2022, 02:51 PM ISTUpdated : Dec 10, 2022, 02:52 PM IST
ಪಂಜಾಬ್‌ನಲ್ಲಿ ಪೊಲೀಸ್ ಠಾಣೆ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ..!

ಸಾರಾಂಶ

ಅಮೃತಸರ -ಭಟಿಂಡಾ ಹೆದ್ದಾರಿಯಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆ ಮೇಲೆ ರಾತ್ರಿ 1 ಗಂಟೆ ಸುಮಾರಿಗೆ ದಾಳಿ ನಡೆದಿದ್ದು, ಕಟ್ಟಡಕ್ಕೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್‌ನ (Punjab) ಗಡಿ ಜಿಲ್ಲೆ ತರ್ನ್ ತರನ್‌ನಲ್ಲಿರುವ (Tarn Taran) ಪೊಲೀಸ್ ಠಾಣೆಯ ಮೇಲೆ ಇಂದು ಶಂಕಿತ ರಾಕೆಟ್ (Rocket) ಚಾಲಿತ ಗ್ರೆನೇಡ್ ದಾಳಿ (Grenade Attack) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮೃತಸರ (Amritsar) -ಭಟಿಂಡಾ (Bhatinda) ಹೆದ್ದಾರಿಯಲ್ಲಿರುವ ಸರ್ಹಾಲಿ (Sarhali) ಪೊಲೀಸ್ ಠಾಣೆ (Police Station) ಮೇಲೆ ರಾತ್ರಿ 1 ಗಂಟೆ ಸುಮಾರಿಗೆ ದಾಳಿ ನಡೆದಿದ್ದು, ಕಟ್ಟಡಕ್ಕೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ವೇಳೆ ಪಕ್ಕದ ಕಟ್ಟಡದಲ್ಲಿ ಸುಮಾರು 10 ಮಂದಿ ಪೊಲೀಸರು ಇದ್ದರು ಎಂದು ಹೇಳಲಾಗಿದ್ದು, ಆದರೂ ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.

ರಾಕೆಟ್‌ನ ಪ್ರೊಜೆಕ್ಟೈಲ್‌ ಮೊದಲು ಪೊಲೀಸ್ ಠಾಣೆಯ ಗೇಟ್‌ನ ಕಬ್ಬಿಣದ ಗ್ರಿಲ್‌ಗಳನ್ನು ಹೊಡೆದು ನಂತರ ಸಾಂಜ್ ಕೇಂದ್ರಕ್ಕೆ ಅಪ್ಪಳಿಸಿತು. ಈ ಘಟನೆಯಲ್ಲಿ ಸಾಂಜ್ ಕೇಂದ್ರದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದೂ ಪಂಜಾಬ್‌ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದೂ ಮೂಲಗಳು ತಿಳಿಸಿವೆ.

ಇದನ್ನು ಓದಿ: ಪಂಜಾಬ್‌ ಗಡಿ ಬಳಿ ಮತ್ತೆ ಪಾಕ್‌ ಡ್ರೋನ್‌ಗಳು ಪತ್ತೆ: ಭದ್ರತಾ ಪಡೆಗಳಿಂದ ಗುಂಡಿನ ದಾಳಿ

ಪ್ರಾಥಮಿಕ ತನಿಖೆಯ ಪ್ರಕಾರ ನಿನ್ನೆ ರಾತ್ರಿ 11.22 ರ ಸುಮಾರಿಗೆ ಆರ್‌ಪಿಜಿ ಬಳಸಿ ಹೆದ್ದಾರಿಯಿಂದ ಗ್ರೆನೇಡ್ ಅನ್ನು ಹಾರಿಸಲಾಗಿದೆ. ಇದು ಸರ್ಹಾಲಿ ಪೊಲೀಸ್‌ ಠಾಣೆಯ ಸುವಿಧಾ ಕೇಂದ್ರಕ್ಕೆ ಅಪ್ಪಳಿಸಿತು. ಘಟನೆಯ ಕುರಿತು ಯುಎಪಿಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಿಧಿವಿಜ್ಞಾನ ತಂಡ ಹಾಗೂ ಸೇನಾ ದಳ ಸ್ಥಳದಲ್ಲಿ ಬೀಡುಬಿಟ್ಟಿದೆ.  ನಾವು ಇದನ್ನು ತಾಂತ್ರಿಕವಾಗಿ ಮತ್ತು ವಿಧಿವಿಜ್ಞಾನವಾಗಿ ತನಿಖೆ ಮಾಡುತ್ತೇವೆ. ಅಪರಾಧದ ಸ್ಥಳದಿಂದ ಎಲ್ಲಾ ಸುಳಿವುಗಳನ್ನು ಸಂಗ್ರಹಿಸಲಾಗುತ್ತಿದೆ. ಆದ್ದರಿಂದ ನಾವು ಏನಾಯಿತು ಎಂಬುದನ್ನು ರೀಕನ್ಸ್ಟ್ರಕ್ಟ್‌ ಮಾಡುತ್ತೇವೆ. ನಾವು ಲಾಂಚರ್ ಅನ್ನು ರಿಕವರ್‌ ಮಾಡುತ್ತಿದ್ದೇವೆ" ಎಂದು ಪಂಜಾಬ್ ಉನ್ನತ ಪೊಲೀಸ್‌ ಗೌರವ್ ಯಾದವ್ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. 

ಸಾಂಜ್ ಕೇಂದ್ರವು ಎಫ್‌ಐಆರ್‌ಗಳ ಪ್ರತಿ, ಪಾಸ್‌ಪೋರ್ಟ್ ಪರಿಶೀಲನೆ ಮತ್ತು ನಿರಾಕ್ಷೇಪಣಾ ಪ್ರಮಾಣಪತ್ರಗಳಂತಹ ಸೇವೆಗಳನ್ನು ಒದಗಿಸುತ್ತದೆ. ಇನ್ನು, ಸರ್ಹಾಲಿಯು ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾದ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ಅವರ ಊರಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಎನ್‌ಐಎ ಹಿಟ್ ಲಿಸ್ಟ್‌ನಲ್ಲಿದ್ದ ಮೋಸ್ಟ್ ವಾಂಟೆಡ್ ಉಗ್ರ ಪಾಕಿಸ್ತಾನದಲ್ಲಿ ಸಾವು

ಈ ಮಧ್ಯೆ, ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ನ ಸದಸ್ಯರಾಗಿರುವ ರಿಂಡಾ ಈ ವರ್ಷದ ಮೇ ತಿಂಗಳಲ್ಲಿ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ನಡೆದ ಆರ್‌ಪಿಜಿ ದಾಳಿ ಸೇರಿದಂತೆ ವಿವಿಧ ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಅನ್ನು ಶುಕ್ರವಾರ ಉತ್ತರ ಪ್ರದೇಶದಿಂದ ಬಂಧಿಸಲಾಗಿದೆ.

ಎಎಪಿ ವಿರುದ್ಧ ವಿಪಕ್ಷಗಳ ವಾಗ್ದಾಳಿ
ಇನ್ನು, ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ, ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮೇಲೆ ವಾಗ್ದಾಳಿ ನಡೆಸಿದ್ದು. ಗಡಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಆತಂಕಕಾರಿಯಾಗಿದೆ ಎಂದು ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಪಕ್ಷವನ್ನು ದೂಷಿಸಿದೆ.

ಇದನ್ನು ಓದಿ: ಪ್ರತಿಭಟನೆ ಕುಳಿತಿದ್ದ ಹಿಂದೂ ನಾಯಕನ ಮೇಲೆ ಗುಂಡಿನ ದಾಳಿ, ಹಾಡಹಗಲೇ ನಡೆಯಿತು ಭೀಕರ ಹತ್ಯೆ!

ಮಾಧ್ಯಮ ವರದಿಗಳ ಪ್ರಕಾರ, ರಾಕೆಟ್ ಲಾಂಚರ್ ಮಾದರಿಯ ಆಯುಧದಿಂದ ತರ್ನ್ ತರನ್ ಪೊಲೀಸ್ ಠಾಣೆಯ ಮೇಲೆ ದಾಳಿ! ಇದು 7 ತಿಂಗಳಲ್ಲಿ ಪೊಲೀಸ್ ಠಾಣೆಯ ಮೇಲೆ (ಮೇ 8 ರಂದು) 2 ನೇ RPG ದಾಳಿಯಾಗಿದೆ. ತುಂಬಾ ಆತಂಕಕಾರಿ ಮತ್ತು ಗೊಂದಲದ ಬೆಳವಣಿಗೆ! ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚಿಸಿದಾಗಿನಿಂದ ಕಾನೂನು ಮತ್ತು ಸುವ್ಯವಸ್ಥೆ ಮುಕ್ತ ಪತನದಲ್ಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್ ಟ್ವೀಟ್ ಮಾಡಿದ್ದಾರೆ. ಇದೇ ರೀತಿ, ಇತರೆ ವಿಪಕ್ಷಗಳು ಸಹ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು